Advertisement

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಕನ್ನಡ ಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಮಂಗಳವಾರ (ಸೆ.26) ನಡೆಯಲಿದೆ.

Advertisement

ಬೆಂಗಳೂರು ಬಂದ್ ಗೆ ಈಗಾಗಲೇ ಹಲವು ಸಂಘಟನೆಗಳು ಬೆಂಬಲ ಸೂಚಿಸಿದೆ. ಈ ಬಂದ್ ಗೆ ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಬೆಂಬಲ ನೀಡಿದೆ. ಹೀಗಾಗಿ ಬೆಂಗಳೂರಿನಲ್ಲಿ ಮಂಗಳವಾರ ಖಾಸಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಈ ಬಂದ್​ಗೆ ಆಟೋ, ಓಲಾ, ಊಬರ್, ಖಾಸಗಿ ಬಸ್​ ಮಾಲೀಕರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಈ ಪೈಕಿ ಓಲಾ, ಊಬರ್ ಸಂಘಟನೆಗಳು ಬೆಂಬಲ ವಾಪಸ್ ಪಡೆದಿದ್ದು, ಸೆ.29ರ ಕರ್ನಾಟಕ ಬಂದ್​ಗೆ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿವೆ.

ಬಿಎಂಟಿಸಿ ಬಸ್ ​ಗಳು ಪರಿಸ್ಥಿತಿ ನೋಡಿಕೊಂಡು ಸಂಚಾರ ಆರಂಭಿಸಲಿವೆ. ಆದರೆ ನಾಳೆ ನಮ್ಮ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಅರ್​ಸಿಎಲ್ ತಿಳಿಸಿದೆ.

ಇದನ್ನೂ ಓದಿ:Bengaluru bandh; ಬಲವಂತದ ಬಂದ್, ರ‍್ಯಾಲಿ ಮಾಡುವಂತಿಲ್ಲ ಎಂದ ಆಯುಕ್ತರು

Advertisement

ಚಿತ್ರ ಮಂದಿರಗಳು, ಮೆಡಿಕಲ್, ಹಾಲಿನ ಬೂತ್, ಅಂಚೆ ಕಚೇರಿ, ಸರ್ಕಾರಿ ಕಚೇರಿ, ಪೆಟ್ರೋಲ್ ಬಂಕ್, ಬ್ಯಾಂಕ್, ಆ್ಯಂಬುಲೆನ್ಸ್ ಸೇವೆಗಳು ಮಂಗಳವಾರ ತೆರೆದಿರಲಿದೆ.

ಬೆಂಗಳೂರು ನಗರ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ. ನಮ್ಮ 37 ಸಂಘಟನೆಗಳು ನಾಳೆಯ ಬಂದ್​ನಲ್ಲಿ ಭಾಗಿಯಾಗಲಿವೆ. ಯಾವುದೇ ಕಾರಣಕ್ಕೂ ನಾಳೆ ಖಾಸಗಿ ಬಸ್​ಗಳು ರಸ್ತೆಗಿಳಿಯುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next