Advertisement

Bengaluru: ತಾರಸಿಯಿಂದ ಜಿಗಿದ ಆರೋಪಿ ಸಾವು

12:54 AM Aug 09, 2024 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತ್ನಿಯನ್ನು ಕೊಲೆಗೈದು ಕೋಲಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನ ಸಿದ್ದಾಪುರದ ಸೋಮೇಶ್ವರ ನಗರ ನಿವಾಸಿ ತಬ್ರೇಜ್‌ ಪಾಷಾ (37) ಬಂಧನ ಭೀತಿಯಿಂದ ಮನೆಯ ತಾರಸಿಯಿಂದ ಜಿಗಿದು ಮೃತಪಟ್ಟಿದ್ದಾನೆ.

Advertisement

ತಬ್ರೇಜ್‌ ಆ. 2ರಂದು ಚಾಮರಾಜ ಪೇಟೆಯ ತನ್ನ ತವರು ಮನೆಯಲ್ಲಿದ್ದ ಪತ್ನಿ ಸೈಯಿದಾ ಫಾಜೀಯಾ ಫಾತೀಮಾ (34) ಅವರ‌ನ್ನು ಚಾಕುವಿನಿಂದ ಹತ್ತಾರು ಬಾರಿ ಇರಿದು ಕೊಲೆಗೈದು ಪರಾರಿಯಾಗಿದ್ದ. ಕೋಲಾರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿರುವ ವಿಚಾರ ಗೊತ್ತಾಗಿ ಪೊಲೀಸರು ಅಲ್ಲಿಗೆ ತೆರಳಿದ್ದರು. ಅವರಿಂದ ತಪ್ಪಿಸಿಕೊಳ್ಳಲು ತಾರಸಿ ಏರಿ 12 ಅಡಿ ಎತ್ತರದಿಂದ ಜಿಗಿದಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗಲಿಲ್ಲ.

ವೀಡಿಯೋ ಮೂಲಕ ಮಾಹಿತಿ
ಈ ನಡುವೆ ತಬ್ರೇಜ್‌ ಪಾಷಾ, 7 ನಿಮಿಷಗಳ ಸೆಲ್ಫೀ ವೀಡಿಯೋವೊಂದು ಮಾಡಿ ಹರಿಬಿಟ್ಟಿದ್ದಾನೆ. ಅದರಲ್ಲಿ ಸೈಯಿದಾ ಫಾಜೀಯಾ ಫಾತೀಮಾಳನ್ನು ಪ್ರೀತಿಸಿ ಮದುವೆಯಾಗಿದ್ದೆ. ಅದಕ್ಕೆ ನಮ್ಮ ತಂದೆಯ ವಿರೋಧ ಇತ್ತು. ಆದರೂ ಅವರನ್ನು ಒಪ್ಪಿಸಿ ಮದುವೆ ಮಾಡಿಕೊಂಡೆ. ಆದರೆ ಪತ್ನಿ ಮತ್ತು ಆಕೆಯ ಮನೆಯವರು ನನಗೆ ಸಾಕಷ್ಟು ಅವಮಾನ ಮಾಡಿದರು. ಪತ್ನಿ ಕೂಡ ನನ್ನ ಬಿಟ್ಟು ತವರು ಸೇರಿಕೊಂಡಳು. ವಾಪಸ್‌ ಬರುವಂತೆ ಕೇಳಿಕೊಂಡೆ, ಆಕೆ ಬರಲಿಲ್ಲ. ಮನೆಯಲ್ಲಿದ್ದ ಚಿನ್ನಾಭರಣವನ್ನೂ ಕೊಂಡೊಯ್ದಿದ್ದಾಳೆ. ನಾನು ಮಾಡುತ್ತಿರುವುದು ತಪ್ಪು ಎಂಬುದು ಗೊತ್ತು. ಬದುಕಲು ನನಗೂ ಇಷ್ಟವಿಲ್ಲ ಎಂದು ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next