Advertisement

ಸಂಚಾರ ನಿಯಮ ಉಲ್ಲಂಘನೆ: ಶೇ. 50 ರಿಯಾಯಿತಿ ಕೊಡುಗೆ ವಿಸ್ತರಣೆ

10:51 PM Mar 03, 2023 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಮತ್ತೊಮ್ಮೆ ಬಂಪರ್‌ ಆಫ‌ರ್‌ ಕೊಟ್ಟಿರುವ ಸರಕಾರವು ಮಾ. 4ರಿಂದ 15 ದಿನಗಳವರೆಗೆ ಶೇ.50 ರಿಯಾಯಿತಿ ನೀಡಿದೆ.
ಶೇ. 50ರಷ್ಟು ದಂಡ ಪಾವತಿಗೆ ಮಾ. 4ರಿಂದ 15 ದಿನಗಳ ಕಾಲಾವಕಾಶ ನೀಡಿದೆ.

Advertisement

11-02-2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಮಾತ್ರ ಒಂದು ಬಾರಿಯ ಕ್ರಮವಾಗಿ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರ ರಿಯಾಯಿತಿ ನೀಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಈ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ 100 ಕೋಟಿಗೂ ಅಧಿಕ ದಂಡ ಸಂಗ್ರಹವಾದ ಹಿನ್ನೆಲೆಯಲ್ಲಿ ದಂಡ ಕಟ್ಟುವ ಕಾಲಾವಕಾಶವನ್ನು ವಿಸ್ತರಿಸಬೇಕು ಎಂಬ ಬೇಡಿಕೆ ಬಂದಿತ್ತು. ಇದೀಗ ಸರಕಾರವು ಮತ್ತೆ ಶೇ.50ರಷ್ಟು ರಿಯಾಯಿತಿ ಕೊಡುಗೆ ಕೊಟ್ಟಿದೆ.

ಎಲ್ಲೆಲ್ಲಿ ಪಾವತಿಸಬಹುದು?
ಕಳೆದ ಬಾರಿಯಂತೆಯೇ ಈ ಬಾರಿಯೂ ಕರ್ನಾಟಕ ಒನ್‌ ವೆಬ್‌ಸೈಟ್‌ನಲ್ಲಿ ವಿವರ ಪಡೆದು ದಂಡ ಪಾವತಿಗೆ ಅವಕಾಶವಿದೆ. ಪೇಟಿಎಂ ಆ್ಯಪ್‌ ಮೂಲಕವೂ ನಿಯಮ ಉಲ್ಲಂಘನೆಯ ವಿವರ ಪಡೆದು ಪಾವತಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next