ಕೋಲ್ಕತಾ: ನಗರದಲ್ಲಿ ಮಂಗಳವಾರ ನಡೆದ ಅಹಿತಕರ ಘಟನೆಗಳಿಗೆ ತೃಣಮೂಲ ಕಾಂಗ್ರೆಸ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ , ಮಂಗಳವಾರ ನಡೆದ ಬಿಜೆಪಿ-ಟಿಎಂಸಿ ಕಾರ್ಯಕರ್ತರ ಘರ್ಷಣೆ ಮತ್ತು ಹಿಂಸಾಚಾರದ ಕುರಿತು ಮಾತನಾಡಿದರು.
ಟಿಎಂಸಿ ಕೇವಲ 42 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಂತ ಸ್ಪರ್ಧೆ ಮಾಡುತ್ತಿದೆ. ಎಲ್ಲಾ 6 ಹಂತದ ಚುನಾವಣೆ ನಡೆಯುವ ವೇಳೆ ರಾಜ್ಯದಲ್ಲಿ ಹಿಂಸಚಾರ ಸಂಭವಿಸಿರುವುದು ಟಿಎಂಸಿಗೆ ಹಿಂಸಾಚಾರದ ಹಿಂದಿದೆ ಅನ್ನುವುದನ್ನ ಸೂಚಿಸುತ್ತದೆ ಎಂದರು.
ನಮ್ಮ ರಾಲಿ ನಡೆಯುವ ವೇಳೆ ಸುಮಾರ 2.5 ಲಕ್ಷ ಮಂದಿ ನಮ್ಮೊಂದಿಗೆ ಇದ್ದರು. ನಮ್ಮ ಕಾರ್ಯಕರ್ತರನ್ನುಪ್ರೇರೇಪಿಸುವ ಕೆಲಸ ನಡೆಯಿತು. ಹಿಂಸಾಚಾರ ನಡೆಯುವ ವೇಳೆ ಪೊಲೀಸರು ಮೂಖ ಪ್ರೇಕ್ಷಕರಾಗಿದ್ದರು ಎಂದರು.
ಬಂಗಾಳದ ಬರಹಗಾರ ಮತ್ತು ತತ್ವಜ್ಞಾನಿ ಈಶ್ವರ್‌ಚಂದ್ರ ವಿದ್ಯಾಸಾಗರ್ ಅವರಪ್ರತಿಮೆಯನ್ನು ಟಿಎಂಸಿ ಕಾರ್ಯಕರ್ತರೇ ಧ್ವಂಸಗೈದಿದ್ದು, ಸುಳ್ಳು ಅನುಕಂಪಪಡೆಯಲು ಮುಂದಾಗಿದ್ದಾರೆ. ಕಾಲೇಜಿನ ಬಾಗಿಲು ಮುಚ್ಚಿತ್ತು, ಆ ಬಾಗಿಲನ್ನುತೆರೆದವರು ಯಾರು ಎಂದು ಪ್ರಶ್ನಿಸಿದರು.
ಮಮತಾ ಬ್ಯಾನರ್ಜಿ ಅವರು ವಯಸ್ಸಿನಲ್ಲಿ ನನಗಿಂತ ಹಿರಿಯವರಾಗಿರಬಹುದು ಆದರೆ ರಾಜಕೀಯದಲ್ಲಿ ನನಗೆ ಅವರಿಗಿಂತ ಹೆಚ್ಚು ಅನುಭವವಿದೆ. ಅವರೆಷ್ಟು ಹಿಂಸೆಯ ಕೊಳೆಯನ್ನು ಚೆಲ್ಲುತ್ತಾರೋ ಅಷ್ಟೇ ಪ್ರಮಾಣದಲ್ಲಿ ಕಮಲ ಅರಳುತ್ತದೆ ಎಂದರು.
ಹಿಂಸಚಾರ ಸಂಭವಿಸಿದ ವೇಳೆ ಸಿಆರ್‌ಪಿಎಫ್ ಪಡೆಗಳು ನನ್ನ ನೆರವಿಗೆ ಬರದೇ ಹೋಗಿದ್ದರೆ ನಾನು ಜೀವಂತವಾಗಿ ಮರಳಲು ಸಾಧ್ಯವಾಗುತ್ತಿರಲಿಲ್ಲ ಎಂದರು.