Advertisement
ರಾತ್ರಿ ಊಟವನ್ನು ತಡವಾಗಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಮುಖ್ಯ. ಅದರಲ್ಲೂ ರಾತ್ರಿ ಊಟ ಮಲಗುವ ಸಮಯಕ್ಕಿಂತ 1-2 ಗಂಟೆ ಮುಂಚಿತವಾಗಿ ಮಾಡಿದರೆ ಉತ್ತುಮ. ರಾತ್ರಿ ಬೇಗ ಊಟ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು? ಓದಿ..
Related Articles
Advertisement
ನಾವು ಸೇವಿಸಿದ ಆಹಾರ ಜೀರ್ಣವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ತಡವಾಗಿ ಅಹಾರ ಸೇವಿಸಿದರೆ ಮಲಗುವ ಸಮಯದಲ್ಲಿ ದೇಹದಲ್ಲಿ ಆಹಾರ ಜೀರ್ಣವಾಗಲು ಪ್ರಾರಂಭಿಸುವುದರಿಂದ ನಿದ್ರೆಗೆ ತೊಂದರೆ ಆಗಬಹುದು. ಹಾಗಾಗಿ ಊಟವಾದ ಕೂಡಲೇ ನಿದ್ದೆ ಮಾಡಬಾರದು ಎಂದು ಹಲವರು ಹೇಳುವುದನ್ನು ಕೇಳಿರುತ್ತೀರಿ. ಬೇಗ ಊಟ ಮಾಡುವುದರಿಂದ ಮಲಗುವ ಸಮಯ ಆಗುವ ವೇಳೆಗೆ ಜೀರ್ಣಕ್ರಿಯೆ ಉತ್ತಮವಾಗಿ ನಿದ್ರೆಯೂ ಸರಿಯಾಗಿ ಆಗುತ್ತದೆ. ಎದೆಯುರಿ, ಹೊಟ್ಟೆಯುರಿ ಯಂತಹ ಗ್ಯಾಸ್ಟ್ರಿಕ್ ಸಂಬಂಧಿಯ ಸಮಸ್ಯೆ ಇರುವವರು ಬೇಗ ಊಟ ಮಾಡುವುದು ಇನ್ನೂ ಉತ್ತಮ. ತಡವಾಗಿ ಊಟ ಮಾಡಿ ತಕ್ಷಣ ಮಲಗುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅನುಭವಿಸಬೇಕಾಗುತ್ತದೆ.
ಹೃದಯದ ಆರೋಗ್ಯಕ್ಕೆ:
ರಾತ್ರಿ ತಡವಾಗಿ ಊಟ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೇ ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗಬಹುದು. ಕೊಬ್ಬಿನಾಮ್ಲಗಳು ಉತ್ಪತ್ತಿಯಾಗುತ್ತದೆ. ಇದರಿಂದ ಹೃದಯರೋಗ, ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ಹೃದಯದ ಖಾಯಿಲೆ, ರಕ್ತದೊತ್ತಡ, ಮಧುಮೇಹಿಗಳಿಗೆ ರಾತ್ರಿ ಹೊಟ್ಟೆ ತುಂಬಾ ಊಟ ಮಾಡಬಾರದೆಂದು ವೈದ್ಯರು ಹೇಳುತ್ತಿರುತ್ತಾರೆ. ಹಾಗಾಗಿ ರಾತ್ರಿ ಊಟವನ್ನು ತಡ ಮಾಡದೇ ಬೇಗ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು.
ದೇಹದ ತೂಕ ನಿಯಂತ್ರಿಸಲು:
ಸರಿಯಾದ ಸಮಯಕ್ಕೆ ಊಟ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ತಿಂದ ಆಹಾರದಲ್ಲಿನ ಪೌಷ್ಠಿಕಾಂಶಗಳು ದೇಹಕ್ಕೆ ಸರಿಯಾಗಿ ಹಿಡಿಯುತ್ತದೆ. ಚಯಾಪಚಯ ಕ್ರಿಯೆ ಸರಿಯಾಗಿ ಆಗುತ್ತದೆ. ಇದರಿಂದ ಬೊಜ್ಜು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಬೊಜ್ಜು ನಿಯಂತ್ರಿಸಿದರೆ ತೂಕ ಕಳೆದುಕೊಳ್ಳಲು ಸಹಾಯಕವಾಗುತ್ತದೆ.
ಇವುಗಳ ಬಗ್ಗೆ ಗಮನ ಹರಿಸಿ ಸರಿಯಾದ ರೀತಿಯಲ್ಲಿ ಆಹಾರ ಕ್ರಮ ಅನುಸರಿಸಿದರೆ ಆರೋಗ್ಯವೂ ಉತ್ತಮವಾಗುತ್ತದೆ. ಯಾವ ರೀತಿಯ ಆರೋಗ್ಯ ಸಮಸ್ಯೆ ಇಲ್ಲದೆ ಸಮಯಕ್ಕೆ ಸರಿಯಾಗಿ ನಿದ್ರೆಯೂ ಬರುತ್ತದೆ.
*ಕಾವ್ಯಶ್ರೀ