Advertisement

ಲಕ್ಷ ಮನೆ ಯೋಜನೆಗೆ ಫ‌ಲಾನುಭವಿಗಳ ಆಯ್ಕೆ

12:42 PM Sep 26, 2018 | |

ಬೆಂಗಳೂರು: ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ ಬೆಂಗಳೂರಿನಲ್ಲಿ 49,500 ಪಲಾನುಭ‌ವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಸತಿ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ ಮನೆ ನಿರ್ಮಾಣ ಕಾಮಗಾರಿಗೆ ಅ.10ರೊಳಗಾಗಿ ಟೆಂಡರ್‌ ಪ್ರಕ್ರಿಯೆ ಆರಂಭಿಸಿ ನಿಗದಿತ ಕಾಲಮಿತಿಯಲ್ಲಿ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

Advertisement

ಎರಡನೆ ಹಂತದಲ್ಲಿಯೂ ಪಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಹ ನೀಡಲಾಗುವುದು ಎಂದರು. ರಾಜೀವ್‌ಗಾಂಧಿ ವಸತಿ ನಿಗಮದಡಿ ವಸತಿ ಮೂಲಕ ಪಡೆದಿರುವ 72,370 ಮನೆಗಳ ಪ್ರಗತಿ ವಿವರಗಳನ್ನು ಸಕಾಲಕ್ಕೆ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡದ ಪಲಾನುಭವಿಗಳ ಮಂಜೂರಾತಿಯನ್ನು ತಡೆ ಹಿಡಿಯಲಾಗಿದೆ. 

37,508 ಫ‌ಲಾನುಭವಿಗಳು ಮನೆಯ ಪ್ರಗತಿ ವಿವರವನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ಪೈಕಿ 19 ಸಾವಿರ ಮಂದಿಯ ವಿವರಗಳು ಸರಿಯಾಗಿದ್ದು, 18 ಸಾವಿರ ಮಂದಿ ಸಲ್ಲಿಸಿರುವ ವಿವರಗಳು ಸರಿಯಾಗಿಲ್ಲ. ಹೀಗಾಗಿ, ತಿರಸ್ಕರಿಸಲಾಗಿದೆ. 34,822 ಪಲಾನುಭವಿಗಳು ಯಾವುದೇ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿಲ್ಲ. ಆದರೂ, ನೈಜ ಫ‌ಲಾನುಭವಿಗಳು ಅವಕಾಶ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅ. 15ರವರೆಗೆ ಮಾಹಿತಿ ಸಲ್ಲಿಸಲು ಮತ್ತೂಂದು ಅವಕಾಶವನ್ನು ನೀಡಲಾಗಿದೆ ಎಂದು ವಿವರಿಸಿದರು.

ಫ‌ಲಾನುಭವಿಗಳು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿ, ಅವರ ಮೂಲಕ ದೃಢೀಕರಣಗೊಳಿಸಿದರೆ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ಮತ್ತೂಂದು ಅವಕಾಶ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ “ಸ್ಪಂದನ’ ಕಾಲ್‌ ಸೆಂಟರ್‌(ಟೋಲ್‌ ಫ್ರೀ ನಂಬರ್‌-2311 8888) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಮನೆಗಳ ವಿಂಗಡನೆ
-ರಾಜ್ಯದ ಕೊಳಗೇರಿಗಳಲ್ಲಿ 23,153 ಮನೆಗಳ ನಿರ್ಮಾಣ.
-ದಕ್ಷಿಣ ಭಾಗದಲ್ಲಿ 15,747 ಮನೆಗಳು
-ಉತ್ತರ ಬಾಗದಲ್ಲಿ 7406 ಮನೆಗಳ ನಿರ್ಮಾಣ 

Advertisement

ರಾಜ್ಯಾವಾರು ಹಂಚಿಕೆ: ಬೆಂಗಳೂರು ನಗರ-6367, ಹಾಸನ-877, ಮಂಡ್ಯ-1500, ಚಾಮರಾಜನಗರ-500, ಚಿಕ್ಕಮಗಳೂರು-530, ಶಿವಮೊಗ್ಗ-250, ಚಿತ್ರದುರ್ಗ-1931, ದಾವಣಗೆರೆ-755, ಮೈಸೂರು-1693, ಬಾಗಲಕೋಟೆ-784, ಧಾರವಾಡ-500, ಗದಗ-644, ಬೆಳಗಾವಿ-749, ವಿಜಯಪುರ-2100, ಗುಲ್ಬರ್ಗ-1300 ಹಾಗೂ ಬೀದರ್‌ ಜಿಲ್ಲೆಯಲ್ಲಿ 250 ಮನೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next