ಮುಂಬಯಿ: ಕಳೆದ ಕೆಲವು ದಿನಗಳಿಂದ ಷೇರು ವಹಿವಾಟಿನಲ್ಲಿ ಭಾರೀ ಇಳಿಕೆ ಕಂಡಿದ್ದ ಮುಂಬಯಿ ಷೇರುಪೇಟೆ ಬುಧವಾರ(ನವೆಂಬರ್ 24) ಉತ್ತಮ ವಹಿವಾಟು ನಡೆಸಿದ್ದು, ಸಂವೇದಿ ಸೂಚ್ಯಂಕ 187 ಅಂಕ ಏರಿಕೆ ಕಂಡಿದೆ.
ಇದನ್ನೂ ಓದಿ:ಎಸಿಬಿ ದಾಳಿ: ಹೆಸ್ಕಾಂನ ಗ್ರೂಪ್ ಸಿ ನೌಕರನ ಮನೆಯಲ್ಲಿ ಡಾಲರ್, ಪ್ಲಾಟಿನಂ!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 187.89 ಅಂಕ ಏರಿಕೆಯಾಗಿದ್ದು, 58,852.22 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 59.85 ಅಂಕ ಏರಿಕೆಯೊಂದಿಗೆ 17,563.20ರ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಭಾರ್ತಿ ಏರ್ ಟೆಲ್, ಪವರ್ ಗ್ರಿಡ್, ಎನ್ ಟಿಪಿಸಿ. ಸನ್ ಫಾರ್ಮಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಫಿನ್ ಸರ್ವ್, ಟೆಕ್ ಮಹೀಂದ್ರ, ಮಾರುತಿ, ಏಷ್ಯನ್ ಪೇಂಟ್ಸ್, ಇನ್ಫೋಸಿಸ್ ಷೇರು ನಷ್ಟ ಕಂಡಿದೆ.
ಮಂಗಳವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 198.44 ಅಂಕ ಏರಿಕೆಯೊಂದಿಗೆ 58,664.33 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ 86.80 ಅಂಕ ಏರಿಕೆಯೊಂದಿಗೆ 17,503.35 ಅಂಕಗಳ ಗಡಿ ಮುಟ್ಟಿತ್ತು.