Advertisement

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

05:08 PM Nov 25, 2024 | Team Udayavani |

ಬೆಳ್ತಂಗಡಿ: ಹಲವು ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾ ಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ ಸ್ಥಾಪನೆಗೆ ಬೆಳ್ತಂಗಡಿಯಲ್ಲಿ ಕಡೆಗೂ ಸ್ಥಳ ಹೊಂದಾಣಿಕೆಯಾಗಿದ್ದು ಇನ್ನೊಂದು ತಿಂಗಳಲ್ಲಿ ಉದ್ಘಾಟನೆಗೆ ಸಜ್ಜಾಗಲಿದೆ.

Advertisement

ಅತೀ ಕಡಿಮೆ ಬೆಲೆಯಲ್ಲಿ ಜನಸಾಮಾನ್ಯ ರಿಗೆ ಗುಣಮಟ್ಟದ ಆಹಾರ ನೀಡುವ ಸದುದ್ದೇಶದಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದಡಿ ರಾಜ್ಯದೆಲ್ಲೆಡೆ ಆಯ್ದ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಾಪನೆ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ 2017ರಿಂದಲೇ ಇಂದಿರಾ ಕ್ಯಾಂಟೀನ್‌ ಸ್ಥಾಪನೆ ಪ್ರಯತ್ನಗಳು ನಡೆಯುತ್ತಿದ್ದರೂ ನಾನಾ ಕಾರಣಗಳಿಂದ ವಿಳಂಬವಾಗಿತ್ತು.

ಎರಡು ಸ್ಥಳ ಬಿಟ್ಟು 3ನೇ ಸ್ಥಳ ನಿಗದಿ
2017ರಲ್ಲಿ ಬೆಳ್ತಂಗಡಿಯ ಬಸ್‌ ನಿಲ್ದಾಣದ ಬಳಿಯ ಸಾರ್ವಜನಿಕ ಶೌಚಾಲ ಯದ ಹಿಂಬದಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಆದರೆ ಅಲ್ಲಿ ಸಾರ್ವಜನಿಕರಿಂದ ಆಕ್ಷೇಪ ಗಳು ಕೇಳಿ ಬಂತು. ಮತ್ತೂಂದೆಡೆ ಅದೇ ಸ್ಥಳವನ್ನು ಕೆಎಸ್‌ಆರ್‌ಟಿಸಿ ನೂತನ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ನಿಗದಿ ಪಡಿಸಿದ್ದರಿಂದ ಅನಿವಾರ್ಯವಾಗಿ ಬೇರೆ ಸ್ಥಳ ಗುರುತಿಸಲೇ ಬೇಕಾಯಿತು.

ಎರಡನೇ ಸ್ಥಳಕ್ಕೂ ವಿಘ್ನ
ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಹಾಗೂ ಅಂದಿನ ತಹಶೀಲ್ದಾರ್‌ ಮದನ್‌ ಮೋಹನ್‌ ಸಿ. ಅವರ ನೇತೃತ್ವದಲ್ಲಿ ಬೇರೆ ಬೇರೆ ಸ್ಥಳಗಳನ್ನು ಪರಿಶೀಲಿಸಿ ಕೊನೆಗೆ ಮಿನಿ ವಿಧಾನಸೌಧ ಆವರಣದ ಒಂದು ಬದಿಯಲ್ಲಿ ಕ್ಯಾಂಟೀನ್‌ ನಿರ್ಮಿಸಲು ತೀರ್ಮಾನಿಸಲಾಯಿತು. ಆದರೆ ಈಗಿನ ತಹಶೀಲ್ದಾರ್‌ ಪೃಥ್ವಿ ಸಾನಿಕಂ ಅವರು ಎಷ್ಟೇ ಪ್ರಯತ್ನಿಸಿದರೂ ತಾಂತ್ರಿಕ ತೊಂದರೆಯಿಂದ ಸ್ಥಳ ಬದಲಿಸಬೇಕಾಯಿತು.

ಅಂಬೇಡ್ಕರ್‌ ಭವನದ ಬಳಿ ನಿಗದಿ
ರಾಜ್ಯದಲ್ಲಿ 1ನೇ ಹಂತದಲ್ಲಿ ನೆರವೇರದೆ ಬಾಕಿ ಉಳಿದಿದ್ದ ಕ್ಯಾಂಟೀನ್‌ ಪೈಕಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಒಂದಾಗಿದ್ದರಿಂದ 2ನೇ ಹಂತದಲ್ಲಿ ನಿರ್ಮಿಸಲೇಬೇಕೆಂಬ ಒತ್ತಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದಲ್ಲಿತ್ತು. ಅದರಂತೆ ಎಲ್ಲೆಡೆ ಸ್ಥಳ ಪರಿಶೀಲಿಸಿ ಕಡೆಗೆ ಅಂಬೇಡ್ಕರ್‌ ಭವನ ಸಮೀಪ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 13 ಸೆಂಟ್ಸ್‌ ಸ್ಥಳದಲ್ಲಿ 8 ಸೆಂಟ್ಸ್‌ನ್ನು ಇಂದಿರಾ ಕ್ಯಾಂಟೀನ್‌ಗೆ ಕಾಯ್ದಿರಿಸಲಾಯಿತು. ಅದರಂತೆ ಸರಕಾರ ನೀಡಿರುವ ಟೆಂಡರ್‌ ಕಂಪೆನಿ 60×70 ನಿವೇಶನದಡಿ ಕ್ಯಾಂಟೀನ್‌ ಹೊರ ವಿನ್ಯಾಸ ರಚಿಸಿದೆ.

Advertisement

ಅಡುಗೆ ಕೋಣೆ ಸಹಿತ ಕ್ಯಾಂಟೀನ್‌
ಹೆಚ್ಚಾಗಿ ಇಂದಿರಾ ಕ್ಯಾಂಟೀನ್‌ನ್ನು ಅಡುಗೆ ಕೋಣೆ ರಹಿತವಾಗಿ ರಚಿಸಲಾ ಗುತ್ತದೆ. ಆದರೆ ಗ್ರಾಹಕರಿಗೆ ಬಿಸಿಬಿಸಿ ಯಾಗಿ ಆಹಾರ ನೀಡುವ ಸದುದ್ದೇಶ ದಿಂದ ಅಡುಗೆ ಕೋಣೆ ಸಹಿತವಾಗಿ ಇಲ್ಲಿ ಕ್ಯಾಂಟೀನ್‌ ರಚಿಸಲಾಗಿದೆ. ಮೂರು ಹೊತ್ತು ಅಲ್ಲೇ ಬಿಸಿಬಿಸಿ ಆಹಾರ ಸಿದ್ಧಪಡಿಸಿ ನೀಡುವ ಉದ್ದೇಶವಾಗಿದೆ. ನಿಂತು ಹಾಗೂ ಕುಳಿತುಕೊಂಡು ಭೋಜನ ಸ್ವೀಕರಿಸಲು ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜತಗೆ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ.

ದಿನಕ್ಕೆ 1,500 ಪ್ಲೇಟ್‌ ಟಾರ್ಗೆಟ್‌
ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಆಹಾರ ವ್ಯವಸ್ಥೆ ಇರಲಿದೆ. ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಲಾಗಿದ್ದು, ನೀರ್‌ ದೋಸೆ, ಇಡ್ಲಿ, ಬನ್ಸ್‌, ಊಟದ ಮೆನು ಇರಲಿದೆ. ಪ್ರತಿ ಪ್ಲೇಟ್‌ಗೆ 10 ರೂ. ಇರಲಿದ್ದು ಮೂರು ಹೊತ್ತು ತಲಾ 500 ಪ್ಲೇಟ್‌ನಂತೆ 1,500 ಪ್ಲೇಟ್‌ ಆಹಾರ ಹೋಗಬೇಕೆಂಬ ಗುರಿ ಹೊಂದಲಾಗಿದೆ.

ಒಟ್ಟು 800 ಚದರಡಿಯ ಇಂದಿರಾ ಕ್ಯಾಂಟೀನ್‌ ರೂಪಿಸಲಾಗಿದ್ದು, ಬಾಹ್ಯ ವಿನ್ಯಾಸವನ್ನು ಈಗಾಗಲೆ ರಚಿಸಲಾಗಿದೆ. ಕ್ಯಾಂಟೀನ್‌ ಒಳಭಾಗದಲ್ಲಿ ವಿದ್ಯುತ್‌ ಸಹಿತ ಒಳ ವಿನ್ಯಾಸ ರಚಿಸಲಾಗುತ್ತಿದೆ. ಶೀಘ್ರವೇ ಜನರಿಗೆ ಸರಕಾರಿ ದರದಲ್ಲಿ ಗುಣಮಟ್ಟದ ಆಹಾರ ಲಭ್ಯವಾಗಲಿದೆ.
-ರಾಜೇಶ್‌ ಕೆ. ಪ.ಪಂ. ಮುಖ್ಯಾಧಿಕಾರಿ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next