Advertisement
ಜನವರಿಯಿಂದ ಜೂನ್ ಈ ವರೆಗೆ ಒಟ್ಟು 14 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ. 40 ಶಂಕಿತ ಪ್ರಕರಣಗಳು ತಾಲೂಕಿನಲ್ಲಿ ದಾಖಲಾಗಿವೆ. ನೆರಿಯಾ-3, ಹತ್ಯಡ್ಕ-4, ಮುಂಡಾಜೆ-2, ಇಂದಬೆಟ್ಟು-2, ಕಣಿಯೂರು-2, ಪಡಂಗಡಿ-1 ಪ್ರಕರಣ ಸೇರಿ ಒಟ್ಟು 14 ಖಚಿತ ಪ್ರಕರಣವಾಗಿದೆ. ರೋಗಿ ಗಳು ತಾಲೂಕು ಸೇರಿದಂತೆ ಜಿಲ್ಲಾ ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಮಂದಿ ಈಗಾಗಲೆ ಚೇತರಿಸಿಕೊಂಡಿದ್ದಾರೆ.
ಮುಂಡಾಜೆ: ಮುಂಡಾಜೆ, ಚಾರ್ಮಾಡಿ, ನೆರಿಯಾ ಕಡಿರುದ್ಯಾವರ, ಚಿಬಿದ್ರೆ ತೋಟ ತ್ತಾಡಿ ಮೊದಲಾದ ಗ್ರಾಮಗಳಲ್ಲಿ ಡೆಂಗ್ಯೂ ಜ್ವರದ ಕಾಟ ವಿಪರೀತವಾಗಿದೆ. ಮಳೆಗಾಲದ ಆರಂಭಕ್ಕೆ ಉತ್ಪತ್ತಿಯಾಗುವ ಸೊಳ್ಳೆ ಗ ಳಿಂದ ಉಂಟಾಗುವ ಡೆಂಗ್ಯೂ ಜ್ವರದಲ್ಲಿ, ತಲೆ ನೋವು ವಿಪರೀತ ಸುಸ್ತು, ವಾಂತಿ, ಜ್ವರ, ಮೈಕೈ ನೋವು ಇತ್ಯಾದಿ ಕಾಣಿಸಿಕೊಳ್ಳುತ್ತಿದೆ. ಉಳಿ ದಂತೆ ನೆರಿಯಾ, ಮುಂಡಾಜೆಯಲ್ಲಿ ಅತಿಹೆಚ್ಚು ಶಂಕಿತ ಪ್ರಕರಣ ದಾಖಲಾಗಿದೆ. ಲಾರ್ವ ಸರ್ವೆ/ ಫಾಗಿಂಗ್
ತಾಲೂಕಿನ ಒಟ್ಟು 247 ಆಶಾಕಾರ್ಯಕರ್ತೆಯರು, 59 ಆರೋಗ್ಯ ಸಹಾಯಕಿಯರು, 8 ಮಂದಿ ಆರೋಗ್ಯ ಸಹಾಯಕರು ಲಾರ್ವ ಸರ್ವೆಗೆ ಮುಂದಾಗಿದ್ದಾರೆ. ಕೋವಿಡ್-19 ಪ್ರಕರಣದ ಮಧ್ಯೆ ಲಾರ್ವ ಸರ್ವೇಯೂ ಸವಾಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಆರೋಗ್ಯ ಇಲಾಖೆಯಿಂದ ಪೇಟೆ, ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟು, ನೀರು ನಿಲ್ಲುವ ಪ್ರದೇಶಗಳಲ್ಲಿ ಎಚ್ಚರಿಕೆ ನೀಡಿ ಲಾರ್ವ ಉಲ್ಬಣ ತಡೆಯಲಾಗಿದೆ. ಈ ಕುರಿತು ಸಾರ್ವಜನಿಕರು ಮನೆಗಳ ಸುತ್ತಮುತ್ತ ಟಯರ್, ಟ್ಯೂಬ್, ರಬ್ಬರ್ ತೋಟಗಳಲ್ಲಿ, ಬ್ಯಾರೆಲ್, ಎಳನೀರು ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ.
Related Articles
ಆರೋಗ್ಯ ಇಲಾಖೆ ಈ ಬಗ್ಗೆ ಪ್ರತಿ ವರ್ಷ ಲಾರ್ವಾ ಸಮೀಕ್ಷೆ ನಡೆಸಿದ ಗ್ರಾಮಗಳಲ್ಲಿ ಮುಂಜಾಗ್ರತೆ ಮೂಡಿಸಲಾಗಿದೆ. ಈಗಾಗಲೇ ಪ್ರಕರಣ ಕಂಡು ಬಂದಲ್ಲಿ ಮಾತ್ರ ಫಾಗಿಂಗ್ ಮಾಡಲಾಗಿದೆ. ಜೂ. 10ರಂದು ಮುಂಡಾಜೆಯಲ್ಲಿ ಲಾರ್ವ ಸರ್ವೆ ನಡೆಸಲಾಗುವುದು. ತೋಟಗಳಲ್ಲಿ ಕೃಷಿ ಪ್ರದೇಶದಲ್ಲಿ ಕೆಲಸ ನಿರ್ವಹಿಸುವವರು ಮೈ ತುಂಬ ಬಟ್ಟೆ ಧರಿಸಬೇಕು.
- ಗಿರೀಶ್, ತಾಲೂಕು ಆರೋಗ್ಯ ಸಹಾಯಕ
Advertisement