Advertisement
ಪಿಡಿಒ ನೇತೃತ್ವಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂತ್ರ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಅನ ಧಿಕೃತ ಶೆಡ್ ರಚಿಸಿ ಮನೆ ಕಟ್ಟಿ ವಾಸಿಸುತ್ತಿರುವ ಸುಮಾರು 5 ಕುಟುಂಬಗಳನ್ನು ಪಂಚಾಯತ್ ಪಿಡಿಒ ಪ್ರಕಾಶ್ ಅವರ ನೇತೃತ್ವದ ತಂಡ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ಕಾರ್ಕಳ ತಹಶೀಲ್ದಾರರ ಆದೇಶವೇ ಕಾರಣ ಎಂದು ತಿಳಿದು ಬಂದಿದ್ದು, ಯಾರೋ ಹೇಳಿದ ಮಾತಿಗೆ ಮರುಳಾಗಿ ಸರಕಾರಿ ಜಮೀನಿನಲ್ಲಿ ಶೆಡ್ ಹಾಕಿ ಕುಳಿತು ಸ್ವಂತ ಜಮೀನಿನ ಕನಸು ಕಟ್ಟಿ ಕೊಂಡಿದ್ದ 5 ಕುಟುಂಬಗಳು ಬೀದಿಪಾಲಾಗಿವೆ.
ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ಕುಳಿತ್ತಿದ್ದ ಬಗ್ಗೆ ಜಂತ್ರ ಪರಿಸರದ ಸಾರ್ವಜನಿಕರ ದೂರೇ ಇಂದಿನ ಈ ತೆರವು ಕಾರ್ಯಾಚರಣೆಗೆ ಕಾರಣ ಎಂದು ತಿಳಿದಿ ಬಂದಿದೆ. ಮಂಜುಳಾ, ವನಿತಾ, ಅಕ್ಷತಾ ಮೂಲ್ಯ, ಗೌರಿ ಹಾಗೂ ಸೇವಂತಿ ಎಂಬವರು ಅಕ್ರಮವಾಗಿ ನಿರ್ಮಿಸಲಾದ ಮನೆಗಳನ್ನು ಈ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ.
ಬೆಳ್ಮಣ್ ಪಂಚಾಯತ್ ಆಡಳಿತ ಈ ನಿರ್ಣಯ ಕೈಗೊಂಡಿದ್ದು ಇದು ಇಡೀ ತಾಲೂಕಿನಲ್ಲಿ ಅನ ಧಿಕೃತ ಮನೆಗಳನ್ನು ಕೆಡಹುವ ಬಗ್ಗೆ ಸೂಚನೆ ಎನ್ನಲಾಗಿದ್ದು, ಅಲ್ಲದೇ ವೋಟಿಗಾಗಿ ಮಾತು ಕೇಳಿ ಅಕ್ರಮವಾಗಿ ಮನೆ ಕಟ್ಟಿ ಕುಳಿತ ಅಮಾಯಕರು ಇದೀಗ ದಿಕ್ಕು ಕಾಣದೆ ಕಂಗಾಲಾಗಿದ್ದಾರೆ. ಅಕ್ರಮ ಮನೆ ಕೆಡಹುವ ಕೆಲಸ ಸ್ವಾಗತಾರ್ಹ, ಸರಕಾರಿ ಜಮೀನುಗಳಿದ್ದಲ್ಲಿ ಅರ್ಹ ನಿವೇಶನ ರಹಿತರ ಪಟ್ಟಿ ತಯಾರಿಸಿ ಜಮೀನು ಹಂಚುವ ಪ್ರಕ್ರಿಯೆ ನಡೆಯಲಿ. ಬದಲಾಗಿ ಜನಪ್ರತಿನಿಧಿಗಳ ಬೆಂಬಲದಿಂದ ಶೆಡ್ ನಿರ್ಮಿಸಿ ಕುಳಿತವರಿಗೆ ಹಕ್ಕು ಪತ್ರ ನೀಡುವುದು ಕಾನೂನು ಬಾಹಿರ ಎಂದು ಹೆಸರು ಹೇಳಲಿಚ್ಛಿಸದ ಪಂಚಾಯತ್ ಸದಸ್ಯರೋರ್ವರು ತಿಳಿಸಿದ್ದಾರೆ.
Related Articles
ಕಾರ್ಕಳ ತಾಲೂಕಿನಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿದ ಮನೆಗಳು ಅನಧಿಕೃತವಾಗಿದೆಯಲ್ಲದೆ ಯಾವುದೇ ಅ ಧಿಕೃತ ದಾಖಲೆಯಿಲ್ಲದೆ ಆಯಾ ಪಂಚಾಯತ್‌ಗಳ ಪಿಡಿಒಗಳು ಡೋರ್ ನಂಬ್ರ ನೀಡಿ ಪೇಚಿಗೆ ಸಿಲುಕಿದ್ದಾರೆ. ಸ್ಥಳೀಯ ಜನಪ್ರತಿನಿ ಗಳ ಒತ್ತಡದಿಂದ ಕಾನೂನನ್ನು ಗಾಳಿಗೆ ತೂರಿ ಕೊಟ್ಟ ಪರವಾನಿಗೆಯಿಂದ ಈ ಸಮಸ್ಯೆ ಎದುರಾಗಿದ್ದು, ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕಾಗಿದೆ ಎಂದು ಸಂತೃಸ್ತರು ತಿಳಿಸಿದ್ದಾರೆ.
Advertisement