Advertisement
ಪರಿಸರಕ್ಕೆ ಹಾನಿಬೆಳ್ಮಣ್ ಪಂಚಾಯತ್ ಆಡಳಿತ ತನ್ನ ವ್ಯಾಪ್ತಿಯ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಂದ ತ್ಯಾಜ್ಯ-ಕಸ ಸಂಗ್ರಹಿಸುತ್ತಿದೆ. ಅದನ್ನು ನಿರ್ವಹಣ ಘಟಕದ ಬಳಿ ತಂದು ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಬೆಂಕಿ ಇಡಲಾಗುತ್ತಿದೆ. ತ್ಯಾಜ್ಯ ಉರಿಸುವುದರಿಂದ ಜನರಿಗೆ ವಿಷಾನಿಲ ದೇಹ ಸೇರುವ ಭೀತಿ ಕಾಡುತ್ತಿದೆ.
ತ್ಯಾಜ್ಯವನ್ನು ಸುಡುವುದರಿಂದ ಪರಿಸರದಲ್ಲಿ ಭಾರೀ ಹೊಗೆ ತುಂಬಿದ್ದು ಜನರು ಆತಂಕಿತರಾಗಿದ್ದಾರೆ. ಹಸಿ-ಒಣ ಕಸವನ್ನೂ ಒಂದೇ ಕಡೆ ಸುರಿಯುವುದರಿಂದಲೂ ಪರಿಸರ ವಾಸನೆ ಬೀರುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು ಹಾಗೂ ಕೋಳಿಯ ತ್ಯಾಜ್ಯ ಎಲ್ಲವನ್ನೂ ಇಲ್ಲಿ ಸುರಿದು ಒಣಗಿದ ಬಳಿಕ ಬೆಂಕಿ ಹಾಕಲಾಗುತ್ತಿದೆ. ಇತ್ತೀಚೆಗೆ ಇಲ್ಲಿ ಕಸಕ್ಕೆ ಹಾಕಿದ ಬೆಂಕಿ ಪಕ್ಕದ ಖಾಸಗಿ ಗುಡ್ಡ ಪ್ರದೇಶಕ್ಕೆ ಹರಡಿದ್ದು ಗಿಡ ಮರಗಳು ಸುಟ್ಟು ಕರಕಲಾಗಿತ್ತು. ಕಸ ವಿಲೇವಾರಿ ಘಟಕ ಪ್ರಯೋಜನಕ್ಕಿಲ್ಲ
ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ನಿರ್ವಹಣೆ ಮಾಡಲು ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆ ಅಡಿಯಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಜಂತ್ರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ 2017 ರಲ್ಲಿ ನಿರ್ಮಾಣವಾಗಿತ್ತು. ಆದರೆ ಪಂಚಾಯತ್ ಈವರೆಗೂ ಇಲ್ಲಿ ತ್ಯಾಜ್ಯ ನಿರ್ವಹಣೆಗೆ ಮುಂದಾಗಿಲ್ಲ. ಇದರಿಂದ ಅಷ್ಟೊಂದು ವೆಚ್ಚ ಮಾಡಿ ನಿರ್ಮಿಸಿದ ಘಟಕ ಭೂತ ಬಂಗಲೆಯಂತಾಗಿದೆ.
Related Articles
ಜಂತ್ರ ನಿರ್ವಹಣೆ ಘಟಕ ಕೆಲಸ ಮಾಡದೇ ಇರುವುದು ಒಂದೆಡೆಯಾದರೆ, ಪಂಚಾಯತ್ ಕಟ್ಟಡದ ಹಿಂಭಾಗದಲ್ಲಿರುವ ಹಳೆಯ ಕಟ್ಟಡ ತ್ಯಾಜ್ಯ ಗೋದಾಮು ಆಗಿ ಮಾರ್ಪಟ್ಟಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೂಟೆಗಟ್ಟಲೆ ಪೇರಿಸಿಡಲಾಗಿದೆ. ಕೆಲವೊಂದು ತ್ಯಾಜ್ಯಗಳನ್ನು ಇಲ್ಲಿ ಶೇಖರಿಸಿ ಇಡಲಾಗಿದ್ದರೆ, ಹೆಚ್ಚಿನವುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಪ್ಲಾಸ್ಟಿಕ್ ಸುಟ್ಟರೆ ಅದರ ವಿಷಾನಿಲ ಮಾರಕ ಎಂಬ ಅರಿವು ಇದ್ದರೂ, ಅರಿವು ಮೂಡಿಸಬೇಕಾದ ಗ್ರಾ.ಪಂ. ತ್ಯಾಜ್ಯ ಸುಡುವುದು ಜನರ ಬೇಸರಕ್ಕೆ ಕಾರಣವಾಗಿದೆ.
Advertisement
ಸೂಕ್ತ ಕ್ರಮಈ ಬಗ್ಗೆ ಪಂಚಾಯತ್ ಸದಸ್ಯರ ಸಭೆ ಕರೆದು ಕ್ರಮ ಕೈಗೊಳ್ಳುತ್ತೇವೆ.
-ವಾರಿಜಾ ಕೋಟ್ಯಾನ್, ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ ಗಮನಕ್ಕೆ ತರಲಾಗುವುದು
ಈ ಬಗ್ಗೆ ಸ್ಥಳೀಯ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ನ ಗಮನಕ್ಕೂ ತರುತ್ತೇನೆ. -ರೇಶ್ಮಾ ಉದಯ್ ಶೆಟ್ಟಿ, ಜಿ.ಪಂ ಸದಸ್ಯೆ, ಬೆಳ್ಮಣ್. ಇಲ್ಲಿ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೆ ಜಂತ್ರದ ಶ್ಮಶಾನದ ಬಳಿ ನಿರ್ವಹಣ ಘಟಕದ ಬಳಿಯಲ್ಲೇ ರಾಶಿ ಹಾಕಿ ಬೆಂಕಿ ಹಾಕಲಾಗುತ್ತಿದೆ ಇದರಿಂದ ಪರಿಸರಕ್ಕೆ ಅಪಾಯ ಕಾದಿದೆ. .
-ಅಶೋಕ್ ಕುಮಾರ್ ಜಂತ್ರ, ಸ್ಥಳೀಯರು