Advertisement

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

04:14 PM May 11, 2020 | Naveen |

ಬಳ್ಳಾರಿ: ಕಳೆದ ಒಂದು ದಶಕದಿಂದ ಹದಗೆಟ್ಟಿದ್ದ ನಗರದ ಬೊಮ್ಮನಹಾಳ್‌ ರಸ್ತೆಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಕೂಡಿ ಬಂದಿದ್ದು, ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಗುರುವಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬೊಮ್ಮನಹಾಳ್‌ ರಸ್ತೆಯು ಹದಗೆಟ್ಟಿದ್ದು, ಕಳೆದ ಹನ್ನೊಂದು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾರ್ಯ ನಡೆಯದೆ ನನೆ ಗುದಿಗೆ ಬಿದ್ದಿತ್ತು. ಇದೀಗ ಅಭಿವೃದ್ಧಿ ಭಾಗ್ಯ ಕೂಡಿಬಂದಿದ್ದು, ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೊರೊನಾ ಭೀತಿ ಇದೆಯಾದರೂ, ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಕುಂಠಿತವಾಗಲ್ಲ ಎಂದರು.

ಪ್ರವಾಸಕ್ಕೆಂದು ಉತ್ತರಾಖಂಡ್‌ಗೆ ತೆರಳಿ ವಾಪಸ್‌ ಬಂದವರನ್ನು ಜಿಲ್ಲಾಡಳಿತ ಎಚ್ಚರಿಕೆ ವಹಿಸಿ ಹೋಂ ಕ್ವಾರಂಟೈನ್‌ ಮಾಡುವ ಬದಲು ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕಿತ್ತು. ಉತ್ತರಾಖಂಡ್‌ದಿಂದ ವಾಪಸ್‌ಬಂದ 18 ಜನರ ಪೈಕಿ ಒಬ್ಬನಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ. ಅಲ್ಲದೇ, ಉತ್ತರಾಖಂಡ್‌ನಿಂದ ಪ್ರವಾಸಿಗರನ್ನು ವಾಪಸ್‌ ಕರೆತರಲು ಸಹಕರಿಸಿದವರನ್ನು ಸಹ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಶೀಘ್ರದಲ್ಲೇ ಬಳ್ಳರಿ ಜಿಲ್ಲೆ ಕೊರೊನಾ ಮುಕ್ತವಾಗುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಹೊರ ದೇಶಗಳಲ್ಲಿದ್ದ ಭಾರತೀಯರನ್ನು ದೇಶಕ್ಕೆ ವಾಪಸ್‌ ಕರೆತಂದಂತೆ ಹೊರ ರಾಜ್ಯದಲ್ಲಿರುವವರನ್ನು ಸಹ ಕರೆತರುವ ಪ್ರಯತ್ನ ಮಾಡುತ್ತೇವೆ. ಸಿಎಂ ಯಡಿಯೂರಪ್ಪನವರು ಆ ಕೆಲಸ ಮಾಡುತ್ತಾರೆ ಎಂದವರು ತಿಳಿಸಿದರು. ಪಾಲಿಕೆ ಸದಸ್ಯ ಮೋತ್ಕರ್‌ ಶ್ರೀನಿವಾಸ್‌, ಮಲ್ಲನಗೌಡ, ಮಾಜಿ ಮೇಯರ್‌ ಇಬ್ರಾಹಿಂ ಬಾಬು ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next