Advertisement

ಸಚಿವ ಶ್ರೀರಾಮುಲುರಿಂದ ರೇಷನ್‌ ಕಿಟ್‌ ವಿತರಣೆ

03:24 PM Apr 27, 2020 | Naveen |

ಬಳ್ಳಾರಿ: ನಗರದ ರೇಡಿಯೋ ಪಾರ್ಕ್‌ನ ಜೆಟಿಎಸ್‌ ಶಾಲೆ ಮೈದಾನದಲ್ಲಿ ಕೋವಿಡ್ ವೈರಸ್‌, ಲಾಕ್‌ಡೌನ್‌, ಬಸವ ಜಯಂತಿ ನಿಮಿತ್ತ ಬಡ ಜನರಿಗೆ ಅಗತ್ಯ ದಿನಸಿಗಳುಳ್ಳ ರೇಷನ್‌ ಕಿಟ್‌ಗಳನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಭಾನುವಾರ ಸಂಜೆ ವಿತರಿಸಿದರು.

Advertisement

ಸ್ಥಳೀಯ 24ನೇ ವಾರ್ಡ್‌ನ ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು ಏರ್ಪಡಿಸಿದ್ದ ರೇಷನ್‌ ವಿತರಣಾ ಕಾರ್ಯಕ್ರಮದಲ್ಲಿ ಬಡ ಜನರಿಗೆ ರೇಷನ್‌ ಕಿಟ್‌ ವಿತರಿಸಿ ಮಾತನಾಡಿದರು. ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಅವರು ಎಂಜಿಆರ್‌ ಹೆಸರಲ್ಲಿ ತಮ್ಮದೇ ಆದ ಯುವಕರ ಪಡೆಯನ್ನು ಕಟ್ಟಿಕೊಂಡು ಸಾಮಾಜಿಕ ಸೇವೆಯಲ್ಲಿ ಸದಾ ಮುಂದಿರುತ್ತಾರೆ. ಲಾಕ್‌ಡೌನ್‌ ಆರಂಭವಾದಾಗಿನಿಂದಲೂ ಕಳೆದ 33 ದಿನಗಳಿಂದ ನಗರದ ಓಪಿಡಿಯಲ್ಲಿ ಪ್ರತಿದಿನ ಸುಮಾರು 1 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಜನರಿಗೆ ಆಪತ್ತು ಬಂದ ಪ್ರತಿಬಾರಿಯೂ ಗೋವಿಂದರಾಜುಲು ಜನಪರ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ಅದರಂತೆ ಇಂದು ಸಹ ಸುಮಾರು 700ಕ್ಕೂ ಹೆಚ್ಚು ಬಡಜನರಿಗೆ, ಅಕ್ಕಿ, ಗೋದಿಹಿಟ್ಟು, ಅಡುಗೆ ಎಣ್ಣೆ, ಸೋಪು, ಸಕ್ಕರೆ ಸೇರಿ ಇನ್ನಿತರೆ ದಿನಸಿ ವಸ್ತುಗಳುಳ್ಳ ರೇಷನ್‌ ಕಿಟ್‌ಗಳನ್ನು ವಿತರಿಸಿದ್ದಾರೆ ಎಂದವರು ಹೇಳಿದರು.

ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು, ಒಟ್ಟು 5 ಸಾವಿರ ಕಿಟ್‌ ಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಮೇ 3ರವರೆಗೆ ಉಚಿತ ಊಟ, ಕಿಟ್‌ ವಿತರಣೆ ಮುಂದುವರೆಯಲಿದೆ ಎಂದವರು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಕಲ್ಯಾಣಸ್ವಾಮಿ ಮಾತನಾಡಿದರು. ಈ ವೇಳೆ ಬಿಜೆಪಿ ಮುಖಂಡ ಓಬಳೇಶ್‌ ಸೇರಿ ಎಂಜಿಆರ್‌ ತಂಡದ ಕಾರ್ಯಕರ್ತರು, ಸ್ಥಳೀಯ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next