Advertisement

ರೇಷನ್‌ ಕಿಟ್‌ ವಿತರಣೆಗೆ ಚಾಲನೆ

05:30 PM Apr 20, 2020 | Naveen |

ಬಳ್ಳಾರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವತಿಯಿಂದ 2 ಸಾವಿರ ರೇಷನ್‌ ಕಿಟ್‌ ಗಳನ್ನು ಸಿದ್ಧಪಡಿಸಲಾಗಿದ್ದು ಜಿಲ್ಲೆಯ ವಿವಿಧ ತಾಲೂಕುಗಳಿಗೆ ರೇಷನ್‌ಕಿಟ್‌ ಗಳನ್ನು ಹೊತ್ತೂಯ್ಯಲು ಸಿದ್ಧಗೊಂಡಿರುವ ಲಾರಿಗೆ ಶಾಸಕ ಜಿ. ಸೋಮಶೇಖರೆಡ್ಡಿ ಭಾನುವಾರ ಚಾಲನೆ ನೀಡಿದರು.

Advertisement

ಕೋವಿಡ್‌ 19ನಿಂದ ಸಂಕಷ್ಟ ದಿನಗಳಗಳನ್ನು ಎದುರಿಸುತ್ತಿರುವ ಬಡಜನರಿಗೆ ನೆರವಾಗುವ ಸಲುವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮುಂದೆ ಬಂದಿದ್ದು, ಒಂದು ಕುಟುಂಬಕ್ಕೆ 15 ದಿನಕ್ಕಾಗುವಷ್ಟು ಅಕ್ಕಿ, ಬೇಳೆ, ಎಣ್ಣೆ ಸೇರಿ ಇನ್ನಿತರೆ ಆಹಾರ ಪದಾರ್ಥಗಳುಳ್ಳ ಒಟ್ಟು 2 ಸಾವಿರ ರೇಷನ್‌ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಕಿಟ್‌ಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಲಾಗಿರುವ ಬಡ ಕುಟುಂಬಗಳಿಗೆ ವಿತರಿಸಲಾಗುತ್ತದೆ ಎಂದು ಬ್ಯಾಂಕ್‌ನ ನಿರ್ದೇಶಕ ಶ್ರೀನಾಥ್‌ ಜೋಷಿ, ಶಾಸಕ ಜಿ. ಸೋಮಶೇಖರರೆಡ್ಡಿ ತಿಳಿಸಿದರು.

ದುರ್ಗಮ್ಮ ದೇವಸ್ಥಾನ ಬಳಿಯ ಕನಕ ದುರ್ಗಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ನೂರಾರು ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಶಾಸಕ ಜಿ.ಸೋಮಶೇಖರರೆಡ್ಡಿ ವಿತರಿಸಿದರು. ಬ್ಯಾಂಕ್‌ನ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ದೇಣಿಗೆ ನೀಡಿದ್ದು, ಒಟ್ಟು 85 ಲಕ್ಷ ರೂ.ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದನ್ನು ಸ್ಮರಿಸಿದರು. ಐನಾತರೆಡ್ಡಿ, ಶ್ರೀನಿವಾಸ ಮೋತ್ಕರ್‌, ಕೆಎಂಎಫ್‌ ನಿರ್ದೇಶಕ ವೀರಶೇಖರರೆಡ್ಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next