ಬಳ್ಳಾರಿ: ಮಾರ್ಚ್ 5 ರಂದು ಬಳ್ಳಾರಿಯಲ್ಲಿ ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವಕ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾನೆ.
ಬಳ್ಳಾರಿಯ ಹುಸೇನ್ ನಗರದಲ್ಲಿ ನಡೆದ ಗಲಾಟೆಯಲ್ಲಿ ತಿಪ್ಪೇಸ್ವಾಮಿ ತಲೆ ಭಾಗಕ್ಕೆ ಬಡಿಗೆಯಿಂದ ಬಲವಾದ ಏಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಘಟನೆ ಹಿನ್ನೆಲೆ
ಬಳ್ಳಾರಿ ಮಾಜಿ ಮೇಯರ್ ಮಗ ಆರೋಪಿ ರಘು ಹುಟ್ಟುಹಬ್ಬದ ದಿನದಂದೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ರಘು ಮತ್ತವನ ಗ್ಯಾಂಗ್ ಹುಟ್ಟುಹಬ್ಬದ ವೇಳೆ ರಸ್ತೆಯಲ್ಲಿ ಡಿಜೆ ಹಾಕಿ ತಲವಾರ್ (ಖಡ್ಗ) ಹಿಡಿದು ಡ್ಯಾನ್ಸ್ ಮಾಡುತ್ತಿದ್ದ. ಈ ವೇಳೆ ರಸ್ತೆ ಬಿಡಿ ಎಂದು ಪ್ರಶ್ನೆ ಮಾಡಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಬಡಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ತಿಪ್ಪೆಸ್ವಾಮಿಯ ತೆಲೆ ಹಾಗೂ ದೇಹದ ಇತರೆ ಭಾಗಕ್ಕೆ ತೀವ್ರ ಗಾಯವಾಗಿತ್ತು. ಬಳ್ಳಾರಿ ಗಾಂಧಿ ನಗರ ಠಾಣೆಯಲ್ಲಿ ರಘು ಸೇರಿ ಎಂಟು ಜನರ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ಪ್ರಮುಖ ಆರೋಪಿ ರಘು, ಅನಿಲ್, ಮುತ್ತು, ಭಾಸ್ಕರ್ ಸೇರಿ ಏಳು ಜನರನ್ನು ಬಂಧಿಸಿದ್ದರು.