ಲಖನೌ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ 620 ಕೆಜಿ ತೂಕದ ಗಂಟೆಯೊಂದು ರಾರಾಜಿಸಲಿದೆ.
ತಮಿಳುನಾಡಿನಲ್ಲಿ ತಯಾರಿಸಲಾದ ಗಂಟೆಯನ್ನು ಅಯೋಧ್ಯೆಗೆ ತರಲಾಗಿದ್ದು ಮಂದಿರದ ನಿರ್ಮಾಣ ಕಾರ್ಯ ಮುಗಿದ ಬಳಿಕ ವಿಶೇಷವಾಗಿ ತಯಾರಿಸಲಾದ ಈ ಗಂಟೆಯನ್ನು ದೇವಾಲಯದಲ್ಲಿ ಸ್ಥಾಪಿಸಲಾಗುವುದು ಎಂದು ದೇವಾಲಯದ ಟ್ರಸ್ಟ್ ಹೇಳಿಕೆ ನೀಡಿದ್ದಾರೆ.
ಈ ಗಂಟೆಯ ಮೇಲೆ ಜೈ ಶ್ರೀ ರಾಮ್ ಎಂದು ಬರೆಯಲಾಗಿದ್ದು ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ 620 ಕೆಜಿ ತೂಕದ ಗಂಟೆಯನ್ನು ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಹೇಳಲಾಗಿದೆ.
ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾ ವ್ಯವಸ್ಥೆಗೆ ವೇಗ ನೀಡಲಾಗಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಕಾಶಿಯಿಂದ ಪ್ರಾಣ ಪ್ರತಿಷ್ಠಾ ಪೂಜೆ ನೆರವೇರಿಸಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಉದ್ಘಾಟನಾ ಸಮಾರಂಭದ ನಂತರ ವಿಶ್ವಪ್ರಸನ್ನ ತೀರ್ಥ ಜೀ ಅವರ ನೇತೃತ್ವದಲ್ಲಿ 48 ದಿನಗಳ ಕಾಲ ಮಂಡಲ ಪೂಜೆ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಇದನ್ನೂ ಓದಿ: ರಿಷಭ್ ಪಂತ್ ಸೇರಿ ಹಲವರಿಗೆ ಕೋಟ್ಯಾಂತ ರೂ ವಂಚಿಸಿದ್ದ ಮಾಜಿ ಕ್ರಿಕೆಟಿಗನ ಬಂಧನ