Advertisement

ಸರಳವಾಗಿ ಸೆಟ್ಟೇರಿದ ಬೆಲ್‌ಬಾಟಂ-2: ರಿಷಭ್ ಗೆ ಹರಿಪ್ರಿಯಾ, ತಾನ್ಯ ಹೋಪ್ ಸಾಥ್

08:23 AM Jan 28, 2021 | Team Udayavani |

ಎರಡು ವರ್ಷದ ಹಿಂದೆ ತೆರೆಗೆ ಬಂದು ಸೂಪರ್‌ ಹಿಟ್‌ ಆಗಿದ್ದ, ರಿಷಭ್‌ ಶೆಟ್ಟಿ ಅಭಿನಯದ “ಬೆಲ್‌ ಬಾಟಂ’ ಚಿತ್ರದ ಸೀಕ್ವೆಲ್‌ ತೆರೆಮೇಲೆ ಬರುತ್ತಿರುವ ವಿಷಯವನ್ನು ಇದೇ “ಬಾಲ್ಕನಿ’ಯಲ್ಲಿ ನೋಡಿರುತ್ತೀರಿ.

Advertisement

ಇದೀಗ “ಬೆಲ್‌ ಬಾಟಂ’ ಚಿತ್ರದ ಮುಂದುವರಿದ ಭಾಗಕ್ಕೆ “ಬೆಲ್‌ ಬಾಟಂ-2′ ಎಂದು ಹೆಸರಿಡಲಾಗಿದ್ದು, ಬುಧವಾರ ಈ ಚಿತ್ರದ ಮುಹೂರ್ತ ಸಮಾರಂಭ ಕೂಡ ನೆರವೇರಿತು. ಜೊತೆಗೆ “ಬೆಲ್‌ ಬಾಟಂ-2′ ಟೈಟಲ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ.

ಇನ್ನು “ಬೆಲ್‌ ಬಾಟಂ-2′ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ನಟ ಪುನೀತ್‌ ರಾಜಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಇನ್ನು “ಬೆಲ್‌ ಬಾಟಂ’ ಚಿತ್ರದ ಮೊದಲ ಭಾಗದಲ್ಲಿ ಸಿನಿಪ್ರೇಕ್ಷಕರ ಮನರಂಜಿಸಿದ್ದ ಡಿಟೆಕ್ಟಿವ್‌ ದಿವಾಕರ್‌ ಅಲಿಯಾಸ್‌ ರಿಷಭ್‌ ಶೆಟ್ಟಿ, “ಬೆಲ್‌ ಬಾಟಂ-2’ನಲ್ಲಿ ಚೆಂಡು ಹೂವಿನ ಪ್ರಕರಣ ಎಂಬ ಮತ್ತೂಂದು ಹೊಸ ಥ್ರಿಲ್ಲಿಂಗ್‌ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

“ಬೆಲ್‌ ಬಾಟಂ-2’ನಲ್ಲಿ ಹರಿಪ್ರಿಯಾ, ತಾನ್ಯಾ ಹೋಪ್‌ ಇಬ್ಬರು ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ “ಬೆಲ್‌ ಬಾಟಂ’ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು “ಬೆಲ್‌ ಬಾಟಂ-2′ ಮುಂದುವರೆದ ಭಾಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

ಚಿತ್ರಕ್ಕೆ ದಯಾನಂದ ಟಿ.ಕೆ ಕಥೆ ಬರೆದಿದ್ದು, ಸಂತೋಷ್‌ ಕುಮಾರ್‌ ಕೆ.ಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಬೆಲ್‌ ಬಾಟಂ’ ಚಿತ್ರಕ್ಕೆ ಆ್ಯಕ್ಷನ್‌- ಕಟ್‌ ಹೇಳಿದ್ದ ನಿರ್ದೇಶಕ ಜಯತೀರ್ಥ ಅವರೇ “ಬೆಲ್‌ ಬಾಟಂ-2′ ಚಿತ್ರಕ್ಕೂ ಆಕ್ಷನ್‌- ಕಟ್‌ ಹೇಳುತ್ತಿದ್ದಾರೆ.

ಸದ್ಯ ಚಿತ್ರದ ಚಿತ್ರೀಕರಣ ಶುರು ಮಾಡಿರುವ ಚಿತ್ರತಂಡ, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವಷಾಂತ್ಯದೊಳಗೆ “ಬೆಲ್‌ ಬಾಟಂ-2′ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next