Advertisement
ಯಮಕನಮರಡಿ ಮತಕ್ಷೇತ್ರದ ಹುದಲಿ ಸಮೀಪ ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನೂತನವಾಗಿ ನಿರ್ಮಿಸಿದ ಪೆಟ್ರೋಲ್ ಪಂಪ್ ಮಳಿಗೆ ಉದ್ಘಾಟಿಸಿ ಮಾತನಾಡಿದದ ಸತೀಶ ಜಾರಕಿಹೋಳಿ, ನಾವು ಸಕ್ಕರೆ ಕಾರ್ಖಾನೆ, ಪೆಟ್ರೋಲ್ ಪಂಪ್ ನಿರ್ಮಿಸಿ ಎಷ್ಟು ದುಡ್ಡು ಗಳಿಸುತ್ತೇವೆ ಎಂಬುದು ಪ್ರಮುಖವಲ್ಲ. ಆದರೆ ಎಷ್ಟು ಜನಕ್ಕೆ ಸ್ಥಳೀಯವಾಗಿ ಉದ್ಯೋಗ ನೀಡುತ್ತಿದ್ದೇವೆ ಎಂಬುದು ಪ್ರಮುಖವಾಗುತ್ತದೆ.ಸಕ್ಕರೆ ಕಾರ್ಖಾನೆ ನಿರ್ಮಿಸಿ ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡಿದ್ದೇವೆ. ಈಗ ಹುದಲಿಯಲ್ಲಿ ನಿರ್ಮಿಸಿರುವ ಪೆಟ್ರೋಲ್ ಪಂಪ್ ಮಳಿಗೆಯಿಂದ ಕನಿಷ್ಟ 20ರಿಂದ 25 ಜನಕ್ಕೆ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಬೆಳಗಾಂ ಶುಗರ್ಸ್ ಕಾರ್ಖಾನೆಗೆ ಸ್ಥಳದ ಅಭಾವ ಇದ್ದು, ಕಾರ್ಖಾನೆಗೆ ಭೂಮಿ ನೀಡಿರುವ ರೈತರಗೆ ನಾವು ಪರ್ಯಾಯವಾಗಿ ಬೇರೆ ಸ್ಥಳಗಳಲ್ಲಿ ಭೂಮಿ ನೀಡಿ, ಅವರಿಗೆ ನೀರಾವರಿ ಸೌಲಭ್ಯ ನೀಡಿದ್ದೇವೆ ಎಂದು ತಿಳಿಸಿದರು.
ಚಿಕ್ಕೋಡಿಯಿಂದ ತಮ್ಮ ಪುತ್ರಿ ಪ್ರಿಯಂಕಾ ಸ್ಪರ್ಧಿಸುವಂತೆ ಸಿಎಂ ಹಾಗೂ ಡಿಸಿಎಂ ಚರ್ಚಿಸಿದ್ದು ನಿಜ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Related Articles
Advertisement
ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಆಯ್ಕೆಗಾಗಿ ಒಂದು ಸುತ್ತಿನ ಚರ್ಚೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಇನ್ನೂ ಸಮಯ ಇದೆ. ಇನ್ನೊಂದು ಸುತ್ತಿನ ಚರ್ಚೆ ಮಾಡುತ್ತೇವೆ. ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಚುನಾವಣೆ ಘೋಷಣೆ ನಂತರ ಹದಿನೈದು ದಿನ ಸಮಯ ಇದ್ದು, ಬೆಳಗಾವಿ, ಚಿಕ್ಕೋಡಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಎರಡನೇ, ಮೂರನೇ ಅಥವಾ ಕೊನೆ ಹಂತದವರೆಗೆ ಹೋಗುತ್ತದೆ.ಇನ್ನು ತಾವೇ ಉಸ್ತುವಾರಿ ಇದ್ದ ವಿಜಯಪುರ ಕ್ಷೇತ್ರದಿಂದ ಒಂದೇ ಅಭ್ಯರ್ಥಿ ಹೆಸರು ಸೂಚಿಸಿದ್ದು, ಹೀಗಾಗಿ ಅಭ್ಯರ್ಥಿ ಹೆಸರು ಘೋಷಣೆಯಾಗಿದೆ ಎಂದರು.