ಅಡಹಳ್ಳಿ: ಇನ್ನೊಂದು ಜೀವಿಗೆ ಹಿಂಸೆ ಮಾಡಿ ಬದುಕುವುದು ಜೀವನವಲ್ಲ. ತ್ಯಾಗಿಗಳಿಂದ ಈ ಪ್ರಪಂಚ ಬದುಕಿದೆ ವಿನಃ ಭೋಗಿಗಳಿಂದಲ್ಲ. ಜೈನ ಧರ್ಮದ ತಿರುಳನ್ನು ಅರಿತುಕೊಂಡು ನಡೆದಾಗ ಮಾತ್ರ ಮುನಿಮಹಾರಾಜರ ಶ್ರಮ ಸಾರ್ಥಕವಾಗುತ್ತದೆ ಎಂದು ಬಾಲಗಾಂವ ಜ್ಞಾನ ಯೋಗಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
Advertisement
ಅವರು ಮಂಗಳವಾರ ಸಮೀಪದ ನಂದಗಾಂವ ಗ್ರಾಮದಲ್ಲಿ ಜರುಗಿದ ಪಂಚಕಲ್ಯಾಣ ಮಹೋತ್ಸವದ ನಿರ್ವಾಣ ಕಲ್ಯಾಣ ಹಾಗೂ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಸಾರವೆಂಬುದೊಂದು ನೂರು ವರ್ಷದ ಯಾತ್ರೆ.
Related Articles
Advertisement
ಕುಡಿಯುವ ನೀರು, ಸಾರಿಗೆ, ಪೆಂಡಾಲ್ ವ್ಯವಸ್ಥೆ, ಭದ್ರತೆ, ಅನ್ನ ಸಂತರ್ಪಣೆ, ಅಸಂಖ್ಯಾತ ಶ್ರಾವಕ, ಶ್ರಾವಕಿಯರ ಮನ ಗೆದ್ದಿದೆ. ಮಹೋತ್ಸವ ಕಮೀಟಿ, ವೀರಸೇವಾ ದಳ, ಮಹಿಳಾ ಮಂಡಳ, ಆದಿನಾಥ ತರುಣ ಸಂಘ ಸೇರಿದಂತೆ ಎಲ್ಲ ಸಮಾಜದ ಜನತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿದ್ದಾರೆ. ಈ ನಿಮ್ಮ ಸೇವೆಗೆ ಮುನಿಮಹಾರಾಜರು ಪ್ರಸನ್ನರಾಗಿ ಸಂಪೂರ್ಣವಾಗಿ ಆಶೀರ್ವಾದ ಮಾಡಿದ್ದಾರೆ ಎಂದರು.
ಹೆಲಿಕಾಪ್ಟರ್ ಮೂಲಕ ಪುಷ್ಟಾರ್ಪಣೆ: ಮಹೋತ್ಸವದ ಕೊನೆಯ ದಿನವಾದ ಮಂಗಳವಾರ ಹೆಲಿಕಾಪ್ಟರ್ ಮೂಲಕ ಜೀನ ಮಂದಿರದ ಮೇಲೆ ಪುಷ್ಪಾರ್ಪಣೆ ಮಾಡಿದ್ದು ಭಕ್ತರ ಸಂತಸಕ್ಕೆ ಕಾರಣವಾಯಿತು. ಅಮಿತಸೇನ ಮುನಿಮಹಾರಾಜರು, ತ್ಯಾಗಾನಂದ ಸ್ವಾಮೀಜಿ, ಸೈಬಣ್ಣ ಮುಚ್ಚಂಡಿ, ಮಹಾರಾಷ್ಟ್ರದ ಮಾಜಿ ಸಂಸದ ರಾಜು ಶೆಟ್ಟಿ, ಪಿಎಸ್‌ಐ ಶಿವಾನಂದ ಕಾರಜೋಳ, ಅಶೋಕ ಮಗದುಮ್ಮ, ಗುರುಪಾದ ಸವದಿ, ರಾವಸಾಬ ಬಿರಾದಾರಪಾಟೀಲ, ಮುತ್ತಪ್ಪ ಕಾತ್ರಾಳ, ಪುಷ್ಪಕಕುಮಾರ ಪಾಟೀಲ, ಗೋಪು ಸಪ್ತಸಾಗರ, ಕುಮಾರ ಸಕಲಕನವರ, ಸುಕುಮಾರ ಬಿರಾದಾರಪಾಟೀಲ, ಭರಮು ಬಳ್ಳೋಜ, ಭರಮುಸುಗ್ಗಾ, ನೇಮಿನಾಥ ಬಸಗೌಡ, ಸುಭಾಷ ದರೂರ, ಅಪ್ಪಾಸಾಬ ಗಿರಿಗೌಡ ಸೇರಿದಂತೆ ಹಲವರು ಇದ್ದರು.