ಎರಡೂ ಮೃತದೇಹಗಳು ಒಂದೆಡೆ ಪತ್ತೆ ಆಗಿದ್ದು ಮನಕಲಕುವಂತಾಗಿದೆ. ಶ್ರಾವಣ ಆರಂಭದ ಅಮವಾಸ್ಯೆ ದಿನ ಒಂದೇ
ಕಡೆಗೆ ಈ ಎರಡೂ ಮೃತದೇಹಗಳು ಪತ್ತೆ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿಗೆ ಕಾರಣವಾಗಿದೆ.
Advertisement
ಎರಡೂ ಪ್ರತ್ಯೇಕ ಘಟನೆ ಆಗಿದ್ದರೂ ಕಾಕತಾಳೀಯ ಎಂಬಂತೆ ಒಂದೇ ಕಡೆಗೆ ಮೃತದೇಹಗಳು ಪತ್ತೆ ಆಗಿವೆ. ನಗರದ ಕಾಂಗಲಿ ಗಲ್ಲಿಯ ವಿಜಯ ರಾಜಾರಾಮ ಪವಾರ(58) ಹಾಗೂ ಶಹಾಪುರದ ದಾನೇ ಗಲ್ಲಿಯ ಚಿತ್ರಲೇಖಾ ಶ್ರೀಕಾಂತ ಸರಾಫ(72) ಎಂಬವರ ಮೃತದೇಹಗಳು ನಗರದ ಕಪಿಲೇಶ್ವರ ಹೊಂಡದಲ್ಲಿ ತೇಲಾಡುತ್ತಿದ್ದವು. ಇದನ್ನು ಗಮನಿಸಿದ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ವರ್ಷಗಳಿಂದ ನೊಂದಿದ್ದರು. ಮಾನಸಿಕವಾಗಿ ನೊಂದಿದ್ದ ಚಿತ್ರಲೇಖಾ ಸೋಮವಾರ ಹೊಂಡದಲ್ಲಿ ಜಿಗಿದಿದ್ದರು. ವಿಜಯ
ಪವಾರ ಜಾಂಡಿಸ್‌ನಿಂದ ಬಳಲುತ್ತಿದ್ದರು. ಎರಡು ವರ್ಷಗಳ ಹಿಂದೆ ಪತ್ನಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು. ಹೆಂಡತಿಯ ಸಾವಿನಿಂದ ವಿಜಯ ತೀವ್ರವಾಗಿ ನೊಂದಿದ್ದರು. ಹೀಗಾಗಿ ಮಂಗಳವಾರ ಕಪಿಲೇಶ್ವರ ಹೊಂಡದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯ ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಶ್ರಾವಣ ಮಾಸ ಆರಂಭದ ಅಮವಾಸ್ಯೆಯಂದು ಭಕ್ತರು ಕಪಿಲೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಮೃತದೇಹ ನೋಡಿ ಆತಂಕಗೊಂಡಿದ್ದರು. ಕೂಡಲೇ ಪೊಲೀಸರು ಕಾರ್ಯ ಪ್ರವೃತ್ತರಾಗಿ ಇಬ್ಬರನ್ನೂ ಗುರುತಿಸಿ ಕ್ರಮ ಜರುಗಿಸಿದ್ದಾರೆ.