Advertisement
ಕುಟುಂಬ ಮತ್ತು ಕೆಲಸಹೆಣ್ಣಿಗೆ ತನ್ನ ಗಂಡ, ಹೆತ್ತವರನ್ನು ನೋಡಿಕೊಳ್ಳುವುದರ ಜತೆಗೆ ಅವಳು ಇಂದು ಸ್ವತಂತ್ರಳಾಗಿರುವುದರಿಂದ ತನ್ನ ಕೆಲಸವನ್ನೂ ಮಾಡಬೇಕಾಗುತ್ತದೆ. ಹಾಗಾಗಿ ಈಕೆಗೆ ಗಂಡಸರಿಗಿಂತ ಅಧಿಕ ಮನೋಬಲ ಹಾಗೂ ಮನೆಯವರ ಸಹಕಾರವೂ ಅಗತ್ಯವಾಗಿರುತ್ತದೆ.
ಗಂಡನೇ ಹೆಣ್ಣಿಗೆ ಜೀವನದ ಪ್ರಮುಖ ವ್ಯಕ್ತಿ, ಹಾಗೆಯೇ ಗಂಡನಿಗೂ ತನ್ನ ಹೆಂಡತಿ ಕೇವಲ ಹೆಂಡತಿಯಾಗಿರದೆ ಸ್ನೇಹಿತೆ ಎಂಬ ಮನೋಭಾವವನ್ನು ಬೆಳೆಸಿಕೊಂಡು ಅನ್ಯೋನ್ಯತೆ, ಭಾವನೆಗಳ ಅರ್ಥೈಸುವಿಕೆ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದು ಈ ಎಲ್ಲವೂ ಪರಸ್ಪರ ನಡೆದರೆ. ಅವರ ಮಧ್ಯೆ ಯಾವುದೇ ಗೋಡೆ ಎಂಬ ಮಾತುಬಾರದು. ಇಲ್ಲಿ ಗಂಡ ಅಥವಾ ಹೆಣ್ಣನ್ನು ಕೀಳರಿಮೆಯಿಂದ ನೋಡಬಾರದು. ವಿವಾಹ ಪೂರ್ವ ಮಾತುಕತೆ
ಒಬ್ಬಳೇ ಹೆಣ್ಣು ಮಗಳಾದವಳಿಗೆ ತನ್ನ ಮದುವೆಯಾದ ಅನಂತರ ತನ್ನ ಹೆತ್ತವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆಯಾಗುವುದು ಸಹಜ. ಅದಕ್ಕೆ ವಿವಾಹ ಪೂರ್ವದಲ್ಲೇ ತನ್ನ ಗಂಡನಾಗುವವನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ ಒಪ್ಪಿದರೆ ಇವರು ಸಂಸಾರ ನಡೆ ಸುವ ಮನೆಗೆ ತನ್ನ ಹೆತ್ತವರನ್ನು ಕರೆಸಿಕೊಂಡು ಅವರನ್ನು ನೋಡಿಕೊಳ್ಳಬಹುದು ಅಥವಾ ಮದುವೆಯಾಗುವ ಮುಂಚಿತವಾಗಿಯೇ ಹೆಣ್ಣು ತನ್ನ ಗಂಡನಾಗುವನಲ್ಲಿ ತನ್ನ ತಂದೆ, ತಾಯಿಯರನ್ನು ನಾನೇ ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುವುದರಿಂದ ಗಂಡನಾದವನು ಹೆಂಡತಿ ಮನೆಯಲ್ಲಿದ್ದು ಜೀವನ ನಡೆಸುವಂತೆ ಮಾತುಕತೆ ನಡೆಸಬಹುದು. ಇದರಿಂದಲೂ ಮುಂದೆ ಯಾವುದೇ ಸಂಸಾರದಲ್ಲಿ ತೊಂದರೆಗಳು ಎದುರಾಗಲು ಸಾಧ್ಯವಿಲ್ಲ.
Related Articles
ಮನೆಯ ಸಮಾರಂಭಗಳಿಗೆ ಬಿಡುವು ಮಾಡಿಕೊಂಡು ಅದರಲ್ಲೂ ಭಾಗಿಯಾಗುವುದು ಕೆಲಸಕ್ಕೆ ಹೋಗುವ ಹೆಣ್ಣಿಗೆ ಅನಿವಾರ್ಯವಾಗುತ್ತದೆ. ಅದೇ ರೀತಿ ಕೆಲವೊಮ್ಮೆ ಕೆಲಸಕ್ಕೆ ಒತ್ತು ನೀಡಬೇಕಾದ ಅನಿವಾರ್ಯವು ಇರುತ್ತದೆ. ಮನೆಯಲ್ಲಿನ ತಂದೆ, ತಾಯಿ, ಅತ್ತೆ, ಮಾವ, ಗಂಡ, ಮಕ್ಕಳಿಗೆ ಸಮಾನ ಪ್ರಾಶಸ್ತ್ಯ ನೀಡುವುದು. ಗಂಡ ಹೆಂಡತಿ ಅರಿತು ಜೀವನವನ್ನು ನಡೆಸಿದರೆ ಸಾರ್ಥಕ ಜೀವನ ನಡೆಸಬಹುದು.
Advertisement
ಭರತ್ ರಾಜ್ ಕರ್ತಡ್ಕ