Advertisement
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ತಂಗನಹಳ್ಳಿ ಸರ್ವೇ ನಂ.32ರಲ್ಲಿ 6ಎಕರೆ ಮತ್ತು ನೀಲಗೊಂಡನಹಳ್ಳಿ ಗ್ರಾಪಂಯ ಮಣ್ಣೂರು ತಿಮ್ಮನಹಳ್ಳಿ ಸರ್ವೆ ನಂ.4ರಲ್ಲಿ 40ಎಕರೆ ಸರಕಾರಿ ಗೋಮಾಳದ ಜಮೀನು ಬೆಂಗಳೂರು ಬಳ್ಳಾರಿ ಮೂಲದ ಖಾಸಗಿ ವ್ಯಕ್ತಿಗೆ 25ವರ್ಷದ ಅವಧಿಗೆ 3ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿದೆ.
ಕೋಳಾಲ ಕಂದಾಯ ತನಿಖಾಧಿಕಾರಿ ಅರುಣಕುಮಾರ್ ಗಣಿಗಾರಿಕೆ ಮಾಲೀಕರ ಜೊತೆ ಶಾಮಿಲಾಗಿ ರೈತರ ಸಹಿಯುಳ್ಳ ಪತ್ರದ ನಾಟಕ ಆಡಿದ್ದಾರೆ. ಸ್ಥಳೀಯ ರೈತರಿಗೆ ಕನ್ನಡದಲ್ಲೇ ಸಹಿ ಮಾಡಲು ಬರೋದಿಲ್ಲ. ಪತ್ರದಲ್ಲಿನ ೧೫ಸಹಿಗಳು ಇಂಗ್ಲಿಷ್‌ನಲ್ಲಿವೆ. ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರ ಹೆಸರನ್ನೇ ಮರೆಮಾಚಿದ್ದಾರೆ. ಮಧುಗಿರಿ ಎಸಿ ಕೋಳಾಲ ಕಂದಾಯ ತನಿಖಾಧಿಕಾರಿ ವಿರುದ್ದ ತನಿಖೆ ನಡೆಸಿ ಅಮಾನತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ತಂಗನಹಳ್ಳಿ ಮತ್ತು ಐ.ಕೆ.ಕಾಲೋನಿ ನಡುವೆಯ ಬೆಟ್ಟದಲ್ಲಿ ಎತ್ತಿನಹೊಳೆ ಪೈಪ್‌ಲೈನ್ ನಡೆಯುತ್ತಿದೆ. ಪೈಪ್‌ಲೈನ್‌ನ ಎರಡು ಭಾಗದಲ್ಲಿ ಗಣಿಗಾರಿಕೆ ನಡೆಸಲು ದಾರಿ ಗುರುತಿಸಲು ಮಧುಗಿರಿ ಎಸಿಯೇ ಖುದ್ದು ಆಗಮಿಸಿದ್ದಾರೆ. ಗಣಿಗಾರಿಕೆ ಪ್ರಾರಂಭ ಆದ್ರೇ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್, ಎಲೆರಾಂಪುರ ಕೆರೆಯ ಓಪನ್ ಕೇನಾಲ್, ಶ್ರೀಮಠದ ಸಮೀಪದ ಪಂಪುಹೌಸು ಸೇರಿದಂತೆ ೩೦ಕ್ಕೂ ಅಧಿಕ ಕೆರೆಕಟ್ಟೆಗಳಿಗೆ ಅಪಾಯವು ಆಗಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಬಗೆಯ ವನ್ಯಜೀವಿ ಸಂಪನ್ಮೂಲವಿದೆ. ಕಲ್ಪತರು ನಾಡಿನ ಪ್ರವಾಸಿಗರ ಸ್ವರ್ಗಭೂಮಿ ನಾಮದ ಚಿಲುಮೆ. ವಡ್ಡರಹಳ್ಳಿ ಕಲ್ಲುಗುಟ್ಟೆ ಅಕ್ಕಪಕ್ಕ ಹತ್ತಾರು ಪುರಾತನ ದೇವಾಲಯ ಮತ್ತು ಕೆರೆಕಟ್ಟೆಗಳಿವೆ. ಬಳ್ಳಾರಿ ಗಣಿ ಮಾಲೀಕನ ಬೆದರಿಕೆಗೆ ರೈತಾಪಿವರ್ಗ ಹೆದರುವ ಪ್ರಶ್ನೆಯೇ ಇಲ್ಲ.-ಸರ್ವೇಶ್. ಗ್ರಾಪಂ ಸದಸ್ಯ. ಎಲೆರಾಂಪುರ 2018ರಿಂದ 2023ತನಕ ಗಣಿಗಾರಿಕೆ ವಿರುದ್ದ ರೈತರ ಹೋರಾಟ ನಡೆದಿದೆ. ಕಂದಾಯ ಮತ್ತು ಸರ್ವೆ ಇಲಾಖೆ ಗಣಿಗಾರಿಕೆ ಮಾಲೀಕರ ಪರವಾಗಿ ಕೆಲಸ ಮಾಡ್ತಿದ್ದಾರೆ. ಕೋಳಾಲ ಕಂದಾಯ ತನಿಖಾಧಿಕಾರಿ ಅರುಣ್‌ಕುಮಾರ್ ರೈತರನ್ನು ವಂಚಿಸಿ ನಕಲಿ ಸಹಿ ಮಾಡಿಸಿದ್ದಾರೆ. ಗೃಹ ಸಚಿವರು ಕೊರಟಗೆರೆ ಕ್ಷೇತ್ರದ ರೈತರಿಗೆ ನ್ಯಾಯ ನೀಡಬೇಕಿದೆ.
-ತಿಮ್ಮರಾಜು. ಸ್ಥಳೀಯ ರೈತ. ತಂಗನಹಳ್ಳಿ ತಂಗನಹಳ್ಳಿ ಸರ್ವೆ ನಂ.32ರಲ್ಲಿ ಗಲ್ಲುಗಣಿಗಾರಿಕೆ ನಡೆಸಲು ದಾರಿಯ ಸ್ಥಳ ಪರಿಶೀಲನೆ ನಡೆದಿದೆ. ಗಣಿಗಾರಿಕೆ ನಡೆಸದಂತೆ ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಬೆಟ್ಟದ ಸುತ್ತಲಿನ ಅರಣ್ಯ, ಕೆರೆಕಟ್ಟೆ ಮತ್ತು ಗ್ರಾಮಗಳ ಪರಿಶೀಲನೆ ನಡೆಸಲಾಗಿದೆ. ಗಣಿಗಾರಿಕೆ ಪರ ಮತ್ತು ವಿರೋಧದ ಸಂಪೂರ್ಣ ಮಾಹಿತಿ ಜಿಲ್ಲಾಧಿಕಾರಿಗೆ ನೀಡುತ್ತೇವೆ.
-ರಿಷಿಆನಂದ್. ಎಸಿ. ಮಧುಗಿರಿ