Advertisement
13 ಸಾವಿರ ಟನ್ ದಾಸ್ತಾನು: ಕಳೆದ ಎರಡು ತಿಂಗಳನಿಂದ ಪಂಜಾಬ್‌ನಿಂದ ಸರಬರಾಜಾಗಿರುವ ಸುಮಾರು 13ಸಾವಿರ ಟನ್ ಬಿತ್ತನೆ ಆಲೂಗಡ್ಡೆಯನ್ನು ನಗರದ ಕೈಗಾರಿಕಾಪ್ರದೇಶ ಹಾಗೂ ಕೈಗಾರಿಕಾಭಿವೃದ್ಧಿ ಕೇಂದ್ರದ ವಿವಿಧ ಶೀತಲ ಗೃಹಗಳಲ್ಲಿ ದಾಸ್ತಾನು ಮಾಡಲಾಗಿದೆ. ಶೀತಲಗೃಹಗಳಿಂದ ಆಯಾ ದಿನದ ಮಾರಾಟಕ್ಕೆ ಅಗತ್ಯವಾದಷ್ಟು ಆಲೂ ಗಡ್ಡೆಯನ್ನು ಸಂಜೆ 6.30 ರ ನಂತರ ರಾತ್ರಿ 12 ಗಂಟೆವರೆಗೆ ಎಪಿಎಂಸಿ ಪ್ರಾಂಗಣಕ್ಕೆ ಆಲೂಗಡ್ಡೆಯನ್ನು ಲಾರಿಗಳಲ್ಲಿ ತಂದಿಳಿಸಲು ಸೂಚನೆ ನೀಡಿದ್ದಾರೆ. ಪೊಲೀಸರು ರೈತರ ತಂಡಗಳನ್ನು ಮಾಡಿ ಆಲೂಗಡ್ಡೆ ಮಾರುಕಟ್ಟೆಗೆ ಬಿಡಲಿದ್ದಾರೆ. ಒಂದು ತಂಡ ಆಲೂಗಡ್ಡೆ ಖರೀದಿಸಿದ ನಂತರ ಮತ್ತೂಂದು ರೈತರ ತಂಡವ ಮಾರು ಕಟ್ಟೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ 15 ಸಾವಿರ ಹೆಕ್ಟೇರ್‌ನಲ್ಲಿ ಆಲೂ ಗಡ್ಡೆ ಬಿತ್ತನೆ ಆಗಬಹುದು ಎಂದು ತೋಟ ಗಾರಿಕೆ ಇಲಾಖೆ ಅಂದಾಜು ಮಾಡಿದೆ.
ದಪ್ಪ ಗಾತ್ರದ ಆಲೂಗಡ್ಡೆಗೆ 2,150 ರೂ. ದರ ನಿಗದಿಪಡಿಸಿದೆ. ರೈತರು ಖರೀದಿಸಿದ ಆಲೂಗಡ್ಡೆಗೆ ವರ್ತಕರು ರಶೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.
Related Articles
ಆಲೂಗಡ್ಡೆ ಮಾರಾಟದ ವ್ಯವಸ್ಥೆ, ದರ ನಿಗದಿಯ ಸಭೆಗಳಿಗೆ ರೈತ ಮುಖಂಡರನ್ನು ಕರೆಯದೇ ಹಾಸನ ಜಿಲ್ಲಾಡಳಿತ ಕಡೆಗಣಿಸಿದೆ. ವರ್ತಕರ ಲಾಬಿಗೆ ಮಣಿದು ಆಲೂಗಡ್ಡೆ ದರ
ನಿಗದಿಪಡಿಸಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ ಆಪಾದಿಸಿದ್ದಾರೆ.
Advertisement
ಜಿಲ್ಲಾಡಳಿತದ ನಿರ್ದೇಶನ ಪಾಲನೆ: ಬಿತ್ತನೆ ಆಲೂಗೆಡ್ಡೆ ಖರೀದಿ ಸಂದರ್ಭದಲ್ಲಿ ರೈತರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನ ಎಪಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದ್ದಾರೆ. ಔಷಧ, ರಸ ಗೊಬ್ಬರವನ್ನು ಎಪಿಎಂಸಿಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಜಿಲ್ಲಾಡಳಿತ ನಿಗದಪಡಿಸಿದ ದರದಲ್ಲೇ ಬಿತ್ತನೆ ಆಲೂಗಡ್ಡೆ ಮಾರಾಟವಾಗಲಿದೆ ಎಂದಿದ್ದಾರೆ.