ವೀರು ಪ್ರತಿಭೆಯ ಗಣಿ
ಬಿರುಸಿನ ಹೊಡೆತಗಾರ. ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್. ಒಂದು ಕಾಲದಲ್ಲಿ ಎದುರಾಳಿ ಬೌಲರ್‌ಗಳು ನಡುಕ ಹುಟ್ಟಿಸಿದ್ದ ಅಪ್ರತಿಮ. ಹೌದು, ದಂಡಿಸಲು ನಿಂತರೆ ಸೆಹ್ವಾಗ್ ಯಾರಿಗೂ ಕಮ್ಮಿಯಿಲ್ಲ. ವಿಶ್ವದ ಯಾವುದೇ ಬೌಲರ್ ಆಗಿರಲಿ, ಅವರಲ್ಲಿ ಎಷ್ಟೇ ಸಾಮರ್ಥ್ಯವಿರಲಿ, ಅವರಿಗೆ ಅದ್ಯಾವುದು ಲೆಕ್ಕವಿಲ್ಲ. ಆಕ್ರಮಣಕಾರಿ ಆಟದಿಂದ ಬೌಂಡರಿ, ಸಿಕ್ಸರ್ ಚಚ್ಚುತ್ತಾರೆ. ಅಂತಹ ಕ್ರಿಕೆಟಿಗ ತನ್ನ ವೃತ್ತಿ ಜೀವನದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಇಂಗ್ಲೆಂಡ್ ವಿರುದ್ಧ 2002ರಲ್ಲಿ ಲಾರ್ಡ್ಸ್‌ನಲ್ಲಿ ಮೊದಲ ಸಲ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಸೆಹ್ವಾಗ್ 96 ಎಸೆತದಲ್ಲಿ 84 ರನ್ ಸಿಡಿಸಿದ್ದರು.
Advertisement
2002ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ 106 ರನ್, 2002ರಲ್ಲಿ ಮುಂಬೈನಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಆರಂಭಿಕನಾಗಿ 147 ರನ್, ಮಲೆರ್ನ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಆರಂಭಿಕನಾಗಿ 195 ರನ್ ಸಿಡಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನದಲ್ಲಿ ವೀರೇಂದ್ರ ಸೆಹ್ವಾಗ್ 309 ರನ್ ತ್ರಿಶತಕ ಸಿಡಿಸಿ ಮುಲ್ತಾನ್‌ನಲ್ಲಿ ಸುಲ್ತಾನ್ ಆಗಿ ಮೆರೆದ್ದು ಸೆಹ್ವಾಗ್ ಟೆಸ್ಟ್ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಕ್ಷಣ.
ಆರಂಭಿಕ ಕ್ರಮಾಂಕ ಬ್ಯಾಟಿಂಗ್- ಇನಿಂಗ್ಸ್: 170, ರನ್: 8207, ಸರಾಸರಿ: 50.04 ಕ್ಯಾಟಿಚ್‌ಗೆ ಒಲಿದ ಆರಂಭಿಕನ ಸ್ಥಾನ
2001ರಲ್ಲಿ ಕ್ಯಾಟಿಚ್ ಆಸ್ಟ್ರೇಲಿಯ ಪರ ಟೆಸ್ಟ್ ಆಟಗಾರನಾಗಿ ಪದಾರ್ಪಣೆ ಮಾಡಿದರು. ಹೆಂಡಿಗ್ಲೆನಲ್ಲಿ ನಡೆದ ಆ್ಯಷಸ್ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಆಗಿ ಕ್ಯಾಟಿಚ್ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬಹು ಕಾಲ ನಿಂತು ಮಿಂಚುವ ಕನಸು ಕೈಗೂಡಲಿಲ್ಲ. ಕಳಪೆ ಫಾರ್ಮ್. ಒಂದರ ಹಿಂದೆ ವೈಫಲ್ಯ. ಇವರನ್ನು ಬಿಡದೆ ಕಾಡಿತ್ತು. ಹೀಗಾಗಿಯೇ 2005ರಲ್ಲಿ ತಂಡದಿಂದ ಹೊರಬಿದ್ದರು.
Related Articles
Advertisement
ಮಧ್ಯಮ ಬ್ಯಾಟಿಂಗ್- ಇನಿಂಗ್ಸ್: 38, ರನ್: 1260, ಸರಾಸರಿ: 36ಆರಂಭಿಕ ಬ್ಯಾಟಿಂಗ್- ಇನಿಂಗ್ಸ್: 61, ರನ್: 2928, ಸರಾಸರಿ: 50.47 ಬಡ್ತಿ ಪಡೆದ ರವಿಶಾಸ್ತ್ರಿಗೆ ದ್ವಿಶತಕ ಸಂಭ್ರಮ
ಹಾಲಿ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ 1981ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರವಿಶಾಸ್ತ್ರಿ ಬ್ಯಾಟ್ಸ್‌ಮನ್ ಆಗಿ ಆಗಲೇ ಭರವಸೆ ಮೂಡಿಸಿದ್ದರು. ಆ ಬಳಿಕ ಅಕ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಹೀಗೆ ಇವರಿಗೆ ಹಂತಹಂತವಾಗಿ ಬಡ್ತಿ ಸಿಕ್ಕಿತು. ಆನಂತರ ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ರವಿಶಾಸ್ತ್ರಿ 134 ಎಸೆತ ಎದುರಿಸಿ ತಾಳ್ಮೆಯ 33 ರನ್ ಚಚ್ಚಿದ್ದರು. ಇವರ ಸಾಹಸಮಯ ಬ್ಯಾಟಿಂಗ್‌ನಿಂದಾಗಿ ಭಾರತ ಗೆಲುವು ಸಾಧಿಸಿತ್ತು. ಇದಾದ 2 ಟೆಸ್ಟ್‌ನ ಬಳಿಕ ರವಿಶಾಸ್ತ್ರಿ ದಿಲ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೇವಲ 7 ರನ್‌ಗಳಿಂದ ಶತಕ ವಂಚಿತರಾಗಿದ್ದರು. ರವಿಶಾಸ್ತ್ರಿ ಅದ್ಭುತ ಫಾರ್ಮ್ ಗಮನಿಸಿದ ತಂಡದ ಆಡಳಿತ ಮಂಡಳಿ ಮ್ಯಾಚೆಸ್ಟರ್‌ನಲ್ಲಿ 1982ರಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿಸಿತು. ಆದರೆ ಅವರಿಗೆ ಆರಂಭದಲ್ಲಿ ಅಷ್ಟೊಂದು ಯಶಸ್ಸು ಸಿಕ್ಕಿಲವಾದರೂ ನಂತರದ ಹಂತದಲ್ಲಿ ಹಂತಹಂತವಾಗಿ ಉತ್ತಮ ಆಟ ನಿರ್ವಹಿಸಿದರು. ಅದರಲ್ಲೂ ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ 206 ರನ್ ದ್ವಿಶತಕ ಸಿಡಿಸಿದ್ದು ಆರಂಭಿಕನಾಗಿ ಯಶಸ್ವಿಯಾಗಿದ್ದಕ್ಕೆ ಸಾಕ್ಷಿ. ಮಧ್ಯಮ ಬ್ಯಾಟಿಂಗ್- ಇನಿಂಗ್ಸ್: 95, ರನ್: 2729, ಸರಾಸರಿ: 33.28
ಆರಂಭಿಕ ಬ್ಯಾಟಿಂಗ್- ಇನಿಂಗ್ಸ್: 26, ರನ್: 1101, ಸರಾಸರಿ: 44.04 ಜಯಸೂರ್ಯ ಕಂಡರೆ ಬೌಲರ್‌ಗಳಿಗೆ ನಡುಕ
ಒಂದು ಕಾಲದಲ್ಲಿ ಎದುರಾಳಿ ಬೌಲರ್‌ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಎಂದರೆ ಅದು ಶ್ರೀಲಂಕಾದ ಸನತ್ ಜಯಸೂರ್ಯ. ಜಯಸೂರ್ಯ 1993ರಲ್ಲಿ ಶ್ರೀಲಂಕಾ ಏಕದಿನ ತಂಡದ ಪರ ಆರಂಭಿಕರಾಗಿ ಇಳಿದು ಸ್ಫೋಟಿಸಲು ಆರಂಭ ಮಾಡಿದ್ದರು. ಹೀಗಾಗಿ ಅಂದಿನ ಲಂಕಾ ತಂಡದ ನಾಯಕರಾಗಿದ್ದ ಅರ್ಜುನ್ ರಣತುಂಗಾ ಆರಂಭಿಕರಾಗಿ ಕಣಕ್ಕಿಳಿಯಲು ಜಯಸೂರ್ಯಗೆ ಅವಕಾಶ ನೀಡಿದರು. ಆದರೆ ಜಯಸೂರ್ಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಿಂಚಲಿಲ್ಲ. ಆಬಳಿಕವೂ ಸಿಡಿಯಲಿಲ್ಲ. ಹೀಗಾಗಿ 1 ವರ್ಷ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಲಿಲ್ಲ. ಆದರೆ ಆನಂತರದ ದಿನಗಳಲ್ಲಿ ಮತ್ತೆ ಟೆಸ್ಟ್ ತಂಡ ಕೂಡಿಕೊಂಡ ಜಯಸೂರ್ಯ ಆಸೀಸ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 48 ರನ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 112 ರನ್ ಬಾರಿಸಿದರು. 1997ರಲ್ಲಿ ಭಾರತದ ವಿರುದ್ಧ 340 ರನ್ ತ್ರಿಶತಕ ಸಿಡಿಸಿ ಭಾರೀ ಸುದ್ದಿಯಾಗಿದ್ದರು. ಮಧ್ಯಮ ಬ್ಯಾಟಿಂಗ್- ಇನಿಂಗ್ಸ್: 36, ರನ್: 1041, ಸರಾಸರಿ: 33.58
ಆರಂಭಿಕ ಬ್ಯಾಟಿಂಗ್- ಇನಿಂಗ್ಸ್: 152, ರನ್: 5932, ಸರಾಸರಿ: 41.48 ದಿಲ್ಶನ್‌ಗೆ ಯಶ ತಂದ ಆರಂಭಿಕತ್ವ
ಶ್ರೀಲಂಕಾದ ತಾರಾ ಆಟಗಾರರಲ್ಲಿ ಒಬ್ಬರಾಗಿದ್ದ ತಿಲಕರತ್ನೆ ದಿಲ್ಶಾನ್ ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್‌ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದರು.ಕಳಪೆ ನಿರ್ವಹಣೆ ನೀಡಿ ದಿಲ್ಶಾನ್ ಟೀಕೆಗೆ ಗುರಿಯಾಗಿದ್ದರು. ಈ ಹಂತದಲ್ಲಿ ಇವರಿಗೆ ಮತ್ತೂಂದು ಅವಕಾಶ ನೀಡಲಾಯಿತು. ಅಂದರೆ ಅವರ 56ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕೆ ಇಳಿದರು. ದಿಲ್ಶನ್ ಆಯ್ಕೆ ಮಂಡಳಿ ನಿರ್ಧಾರವನ್ನು ಸಮರ್ಥಿಸುವಂತೆ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ 72 ಎಸೆತಕ್ಕೆ 92 ರನ್ ಬಾರಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಒಂದೂ ಶತಕವನ್ನೂ ಬಾರಿಸಿದರು. ಅದೇ ವರ್ಷ ಅವರು ಒಟ್ಟಾರೆ 6 ಶತಕ ಬಾರಿಸಿದರಲ್ಲದೆ 1327 ರನ್ ಹೊಡೆದು ಗಮನ ಸೆಳೆದರು. ಇಂಗ್ಲೆಂಡ್ ವಿರುದ್ಧ ಕಾರ್ಡಿಫ್ನಲ್ಲಿ ನಡೆದ ಟೆಸ್ಟ್‌ನಲ್ಲಿ ವೈಯಕ್ತಿಕ 193 ರನ್‌ಗಳಿಸಿದ್ದು ಜೀವನಶ್ರೇಷ್ಠ ಸಾಧನೆಯಾಗಿದೆ. ಮಧ್ಯಮ ಬ್ಯಾಟಿಂಗ್- ಇನಿಂಗ್ಸ್: 92, ರನ್: 3322, ಸರಾಸರಿ: 36
ಆರಂಭಿಕ ಬ್ಯಾಟಿಂಗ್- ಇನಿಂಗ್ಸ್: 53, ರನ್: 2170, ಸರಾಸರಿ: 42.54