Advertisement

ಹೈದರಾಬಾದ್‌ ನಗರದಲ್ಲಿ ಜನವರಿ 1ರ ತನಕ ಭಿಕ್ಷಾಟನೆಗೆ ನಿಷೇಧ

04:47 PM Nov 08, 2017 | Team Udayavani |

ಹೈದರಾಬಾದ್‌ : ನಗರದ ಮುಖ್ಯ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಭಿಕ್ಷುಕರಿಂದಾಗುತ್ತಿರುವ ಉಪಟಳ, ಕಿರಿಕಿರಿಯನ್ನು ನಿವಾರಿಸುವ ನಿಟ್ಟಿನಲ್ಲಿ ನರಗ ಪೊಲೀಸ್‌ ಕಮಿಷನರ್‌ ಎಂ ಮಹೇಂದರ್‌ ರೆಡ್ಡಿ ಅವರು ಇಂದು ಬುಧವಾರ ಬೆಳಗ್ಗೆ 6 ಗಂಟೆಯಿಂದ ತೊಡಗಿ ಮುಂದಿನ ಎರಡು ತಿಂಗಳ ಅವಧಿಗೆ ನಗರದಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿದ್ದಾರೆ.

Advertisement

ಭಿಕ್ಷುಕರಿಂದ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ಆಗುತ್ತಿರುವ ಕಿರಿಕಿರಿಗಳನ್ನು, ವಾಹನ ಮತ್ತು ಜನಸಂಚಾರಕ್ಕೆ ಆಗುತ್ತಿರುವ ಅಡಚಣೆಗಳನ್ನು ನಿವಾರಿಸಲು ಭಿಕ್ಷಾಟನೆಯನ್ನು ನಿಷೇಧಿಸಿ ನೊಟೀಸ್‌ ಜಾರಿ ಮಾಡಲಾಗಿದೆ ಎಂದು ಮಹೇಂದರ್‌ ರೆಡ್ಡಿ ಹೇಳಿದರು.

ಈ ನಿಷೇಧವು ಇಂದು ಬುಧವಾರ ಬೆಳಗ್ಗೆ 6 ಗಂಟೆಯಿಂದ ತೊಡಗಿ 2018ರ ಜನವರಿ 1ರ ಬೆಳಗ್ಗೆ 6 ಗಂಟೆಯ ವರೆಗೆ ಚಾಲ್ತಿಯಲ್ಲಿರುವುದು ಎಂದವರು ನೊಟೀಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next