Advertisement

ಮೈಸೂರಿನ ಸರ್ಕಾರಿ ಸಭಾಂಗಣದಲ್ಲಿ ಬೀಫ್ ಸೇವನೆ, ಬಿಜೆಪಿ ಆಕ್ರೋಶ

12:24 PM Jun 26, 2017 | Sharanya Alva |

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಕಲಾಮಂದಿರದಲ್ಲಿ ಗೋ ಮಾಂಸ ಸೇವಿಸಿ, ವಿತರಿಸಿದ ಘಟನೆ ಮೈಸೂರಿನ ಮನೆಯಂಗಳ ಸಭಾಂಗಣದಲ್ಲಿ ನಡೆದಿದೆ. ಅನುಮತಿ ಇಲ್ಲದೆ ಗೋಮಾಂಸ ಸೇವಿಸಿದ ಹಿನ್ನೆಲೆಯಲ್ಲಿ ಆಯೋಜಕರಿಗೆ ಹಾಗೂ ಸಭಾಂಗಣ ಉಸ್ತುವಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಣದೀಪ್ ತಿಳಿಸಿದ್ದಾರೆ.

Advertisement

ಮೈಸೂರಿನ ಮನೆಯಂಗಳ ಸಭಾಂಗಣದಲ್ಲಿ ಆಹಾರ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ ಗೋಷ್ಠಿಯಲ್ಲಿ ವಿಚಾರವಾದಿ ಪ್ರೊ.ಎಸ್ ಕೆ ಭಗವಾನ್, ಮೈಸೂರು ವಿವಿ ಪ್ರೊ.ಮಹೇಶ್ಚಂದ್ರ ಗುರು, ಮಾಜಿ ಮೇಯರ್ ಸೇರಿದಂತೆ ಹಲವು ಗಣ್ಯರು ಗೋಮಾಂಸ ಸೇವಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಅಷ್ಟೇ ಅಲ್ಲ ಕಾರ್ಯಕ್ರಮಕ್ಕೆ ಆಗಮಿಸಿದವರಿಗೂ ಗೋ ಮಾಂಸ ವಿತರಿಸಿದ್ದರು.

ಸರ್ಕಾರಿ ಸಭಾಂಗಣದಲ್ಲಿ ಗೋ ಮಾಂಸ ಸೇವಿಸಿದ್ದನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರಿ ಸಭಾಂಗಣದಲ್ಲಿ ಗೋ ಮಾಂಸ ಸೇವಿಸಿದ್ದಕ್ಕೆ ಆಯೋಜಕರು ಮತ್ತು ಸಭಾಂಗಣ ಉಸ್ತುವಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ಡಿಸಿ ಮಾಹಿತಿ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಬಿಜೆಪಿ ಯುವಮೋರ್ಚಾ ಧರಣಿ:
ಸರ್ಕಾರಿ ಸಭಾಂಗಣದಲ್ಲಿ ಗೋ ಮಾಂಸ ಸೇವಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಕಲಾಮಂದಿರ , ಮನೆಯಂಗಳದ ಎದುರು ಗಂಜಲ ಸಿಂಪಡಿಸಿ ಸ್ವಚ್ಚಗೊಳಿಸಿದ್ದಾರೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next