Advertisement

ಬೀದರ ಕನ್ನಡ ಭವನ ಕೆಲಸ ಶೀಘ್ರ ಮುಗಿಸಿ: ಈಶ್ವರ ಖಂಡ್ರೆ

02:28 PM Nov 25, 2021 | Team Udayavani |

ಭಾಲ್ಕಿ: ಬೀದರನ ಕನ್ನಡ ಭವನದ ಕೆಲಸ ಶೀಘ್ರ ಮುಗಿಸುವ ಕಾರ್ಯವಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಶಾಸಕರ ನಿವಾಸದಲ್ಲಿ ಕಸಾಪ ಮತ್ತೂಂದು ಅವಧಿಗೆ ಸಾರಥ್ಯ ವಹಿಸಿರುವ ಸುರೇಶ ಚನಶೆಟ್ಟಿ ನೇತೃತ್ವದ ಬಳಗದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಐದು ವರ್ಷದಲ್ಲಿ ಮಾಡಿದ ಕನ್ನಡದ ಕಾರ್ಯಗಳು, ಉತ್ತಮ ನಡತೆ, ಸರಳತೆಯು ಚುನಾವಣೆಯಲ್ಲಿ ಸುರೇಶ್‌ ಚನಶೆಟ್ಟಿ ಅವರನ್ನು ಕೈಹಿಡಿದಿವೆ. ಕನ್ನಡಾಭಿಮಾನಿಗಳು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ತಮ್ಮನ್ನು ಮತ್ತೂಂದು ಅವಧಿಗೆ ಗೆಲ್ಲಿಸಿದ್ದಾರೆ. ನಾನು ಮಂತ್ರಿ ಇದ್ದ ಸಂದರ್ಭದಲ್ಲಿ ಬೀದರ್‌ನಲ್ಲಿ ಕನ್ನಡ ಭವನ ಕಟ್ಟಡಕ್ಕೆ ನಿವೇಶನ ಮತ್ತು ಅನುದಾನ ಒದಗಿಸುವ ಪ್ರಯತ್ನ ಮಾಡಿದ್ದೇನೆ. ತಾವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಂತೆ ಶೀಘ್ರವೇ ಕನ್ನಡ ಭವನ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ. ಇದಕ್ಕೆ ಏನೇ ಸಹಾಯ ಸಹಕಾರ ಬೇಕಿದ್ದರೂ ತಾನು ಕೊಡುತ್ತೇನೆ ಎಂದು ಭರವಸೆ ನೀಡಿದರು.

ಭಾಲ್ಕಿ ಪಟ್ಟಣದ ಕನ್ನಡ ಭವನಕ್ಕೂ ಈ ಹಿಂದೆಯೇ ನಿವೇಶನ, ಅನುದಾನ ಒದಗಿಸಿದ್ದೇನೆ. ಮೊದಲ ಅಂತಸ್ತಿನ ಕಟ್ಟಡ ಮುಗಿದಿದೆ. ಬರುವ ದಿನಗಳಲ್ಲಿ ಎರಡನೇ ಅಂತಸ್ತಿನ ಕಟ್ಟಡಕ್ಕೂ ಅಗತ್ಯ ಅನುದಾನ ಜತೆಗೆ ಗಡಿ ಭಾಗದಲ್ಲಿ ಕನ್ನಡ ಭವನಕ್ಕೆ ನಿವೇಶನ ಸಿಕ್ಕಿದ್ದೇ ಆದಲ್ಲಿ ಅದಕ್ಕೂ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಬರುವ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಾಲಿ ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಹಿರಿಯ ಸಾಹಿತಿ ಸೋಮನಾಥ ನುಚ್ಚಾ, ಪ್ರಮುಖರಾದ ರಮೇಶ ಚಿದ್ರಿ, ಸಂಗಮೇಶ ಮದಕಟ್ಟಿ, ರಾಜಕುಮಾರ ಬಿರಾದಾರ, ಸಂಗಮೇಶ ಗುಮ್ಮೆ, ಕಾಶಿನಾಥ ಲದ್ದೆ, ನಾಗಭೂಷಣ ಮಾಮಡಿ, ಸಂತೋಷ ಬಿಜಿ ಪಾಟೀಲ್‌, ಅಶೋಕ ಕುಂಬಾರ, ಬಸವರಾಜ ಮಡಿವಾಳ, ಕುಪೇಂದ್ರ ಜಗಶೆಟ್ಟೆ, ಸಿದ್ದು ತುಗಶೆಟ್ಟೆ, ಜಾಲೇಂದ್ರ ಭೌರಾ ಸೇರಿದಂಥೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next