Advertisement

ಬೀದರ್: ಇಂದು 97 ಜನರಿಗೆ ಕೋವಿಡ್ ಪಾಸಿಟಿವ್: 1 ಸಾವು

07:32 PM Aug 14, 2020 | Mithun PG |

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ  ಕೋವಿಡ್ ತನ್ನ ಆರ್ಭಟವನ್ನು ಮುಂದುವರೆಸಿದ್ದು ಸೋಂಕಿಗೆ ಶುಕ್ರವಾರ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮಾತ್ರವಲ್ಲದೆ ಒಂದೇ ದಿನ 97 ಜನರಿಗೆ ಹೊಸದಾಗಿ ವೈರಸ್ ತಗುಲಿದೆ.

Advertisement

ಕೆಮ್ಮು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಸವಕಲ್ಯಾಣ ತಾಲೂಕಿನ ಆಲಗೂಡ ಗ್ರಾಮದ 65 ವರ್ಷದ ವ್ಯಕ್ತಿಯು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೇ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರ ಕೋವಿಡ್ ವರದಿ ಪಾಸಿಟಿವ್ ಬಂದಿದ್ದು. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ ಈಗ 104ಕ್ಕೆ ಏರಿಕೆಯಾಗಿದೆ.

ಹೊಸ ಸೋಂಕಿತರಲ್ಲಿ ಬೀದರ ನಗರ- ತಾಲೂಕಿನ 46 ಜನ, ಹುಮನಾಬಾದ- ಚಿಟಗುಪ್ಪ ತಾಲೂಕಿನ 16 ಮಂದಿ, ಭಾಲ್ಕಿ ತಾಲೂಕಿನ 16 ಜನ, ಔರಾದ- ಕಮಲನಗರ ತಾಲೂಕಿನ 14 ಜನ ಹಾಗೂ ಬಸವಕಲ್ಯಾಣ- ಹುಲಸೂರು ತಾಲೂಕಿನ 5 ಜನರು ಸೇರಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 3345ಕ್ಕೆ ತಲುಪಿದ್ದು, ಶುಕ್ರವಾರ 76 ಜನ ಸೋಂಕಿತರು ಸೇರಿ ಈವರೆಗೆ 2364 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 873 ಸಕ್ರೀಯ ಪ್ರಕರಣಗಳಿವೆ. ಜಿಲ್ಲೆಯ ಈವರೆಗೆ 56,215 ಜನರ ಗಂಟಲ ಮಾದರಿ ತಪಾಸಣೆ ಮಾಡಲಾಗಿದ್ದು, ಈ ಪೈಕಿ 52,159 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 711 ಜನರ ವರದಿ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next