“ಬ್ಯೂಟಿಫುಲ್ ಮನಸುಗಳು’ ಚಿತ್ರದ ಬಿಡುಗಡೆಗೂ ಮುನ್ನ ಸತೀಶ್ ನೀನಾಸಂ ಇದ್ದ ಧಾವಂತ ನೋಡಬೇಕು. ಚಿತ್ರಕ್ಕೆ ಚಿತ್ರಮಂದಿರಗಳ ಅಭಾವ ಎದುರಾಗಿ, ಸತೀಶ್ ಈ ವಿಷಯವಾಗಿ ನೋವನ್ನು ಹೊರಹಾಕಿದ್ದರು. ಕಟ್ ಮಾಡಿದರೆ, ಸತೀಶ್ ಈಗ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಚಿತ್ರ 25 ದಿನಗಳನ್ನು ಮುಗಿಸಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಅಮೇರಿಕಾದಲ್ಲೂ ಬಿಡುಗಡೆಯಾಗುತ್ತಿದೆ. ಈ ಡಬ್ಬಲ್ ಸಂತೋಷವನ್ನು ಹಂಚಿಕೊಳ್ಳುವುದಕ್ಕೆ ಚಿತ್ರತಂಡದವರು ಒಂದೇ ವೇದಿಕೆಯಲ್ಲಿ ಸೇರಿದ್ದರು.
ಈ ಚಿತ್ರವನ್ನು ಅಮೇರಿಕಾದಲ್ಲಿ ಬಿಡುಗಡೆ ಮಾಡುತ್ತಿರುವವರು ವಿಜಯೇಂದ್ರ ಎನ್ನುವವರು. ಇದೇ ಮೊದಲ ಬಾರಿಗೆ ಚಿತ್ರದ ವಿತರಣೆಯನ್ನು ಪಡೆದಿರುವ ಅವರು, 22 ಲಕ್ಷ ಖರ್ಚು ಮಾಡಿ, ಚಿತ್ರವನ್ನು ಇದೇ ತಿಂಗಳ 23ರಂದು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು. ಅಷ್ಟೇ ಅಲ್ಲ, ವಿದೇಶದಲ್ಲಿ ಚಿತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಧ್ಯವರ್ತಿಗಳಿಂದ ಸಾಕಷ್ಟು ನುಕ್ಸಾನು ಆಗುತ್ತಿದ್ದು, ತಮ್ಮ ಸಂಸ್ಥೆಯಡಿ, ಆ ತರಹದ ಸಮಸ್ಯೆಗಳು ಆಗುವುದಿಲ್ಲ ಎಂದರು.
ನಿರ್ಮಾಪಕ ಪ್ರಸನ್ನಗೆ ಚಿತ್ರವನ್ನು ಹೊರದೇಶಗಳಲ್ಲಿ ಬಿಡುಗಡೆ ಮಾಡುವ ವಿಷಯವಾಗಿ ಹೆಚ್ಚು ಆಸಕ್ತಿ ಇರಲಿಲ್ಲವಂತೆ. ಕಾರಣ, “ನೀರ್‌ದೋಸೆ’ ಚಿತ್ರದ ಹೊರದೇಶಗಳ ಬಿಡುಗಡೆ ಸಂದರ್ಭದಲ್ಲಾದ ಕೆಲವು ಘಟನೆಗಳು. ಆದರೆ, ವಿಜಯೇಂದ್ರ ಅವರು ಪಾರದರ್ಶಕವಾಗಿ ಬಿಡುಗಡೆ ಮಾಡುತ್ತಾರೆ ಎಂಬ ಕಾರಣಕ್ಕೆ ಚಿತ್ರವನ್ನು ಕೊಡುತ್ತಿರುವುದಾಗಿ ಹೇಳಿದರು. ಇನ್ನು ನಿರ್ದೇಶಕ ಜಯತೀರ್ಥ ಹೆಚ್ಚು ಮಾತನಾಡಲಿಲ್ಲ. ಥ್ಯಾಂಕ್ಯೂ ಎಂದು ಧನ್ಯವಾದ ಸ್ಲಿ$Éಸುವುದರ ಜೊತೆಗೆ, ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಚಿತ್ರಗಳನ್ನು ಹೊರದೇಶಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡಬೇಕು ಮತ್ತು ಈ ಮೂಲಕ ಹೊರದೇಶಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಚಿತ್ರಕ್ಕೆ ಆರಂಭದಲ್ಲಿ ಉಂಟಾದ ಸಮಸ್ಯೆಗಳನ್ನು ನೋಡಿದಾಗ, ಚಿತ್ರ ಇಷ್ಟು ದೂರ ಸಾಗಬಹುದು ಎಂಬ ಯಾವ ನಂಬಿಕೆಯೂ ಇರಲಿಲ್ಲವಂತೆ ಸತೀಶ್‌ಗೆ. “ನಿಜಕ್ಕೂ ಭಯವಿತ್ತು. ಕ್ರಮೇಣ ಪ್ರೇಕ್ಷಕರು ತೋರಿಸಿದ ಪ್ರೀತಿ ನೋಡಿ ಖುಷಿಯಾಯಿತು’ ಎಂದು ಖುಷಿಪಡುವುದರ ಜೊತೆಗೆ ಧನ್ಯವಾದ ಸಮರ್ಪಿಸಿದರು. ಇನ್ನು ಸತೀಶ್ ಮಾಡಿರುವ ಪಚ್ಚಿ ಪಾತ್ರ, ಇನ್ನಾéರಿಗೂ ಹೊಂದುತ್ತಿರಲಿಲ್ಲ ಎಂದು ಶ್ರುತಿ ಹೇಳಿದರು. ತಮ್ಮ ಪಾತ್ರದ ಬಗ್ಗೆ ಸಿಗುತ್ತಿರುವ ಪ್ರತಿಕ್ರಿಯೆ ಚೆನ್ನಾಗಿದೆ ಎಂದು ಖುಷಿಪಟ್ಟರು.