Advertisement

UV Fusion: ಎಳೆಯರೊಂಗಿಗೆ ಗೆಳೆಯರಾಗಿ

10:37 AM Mar 15, 2024 | Team Udayavani |

ಅಜ್ಜಿ ಕತೆ ಹೇಳುವ ಕಾಲವೊಂದಿತ್ತು. ತಂಗಾಳಿಯ ರಾತ್ರಿಯಲ್ಲಿ ತನ್ನ ಸುತ್ತಲೂ ಮೊಮ್ಮಕ್ಕಳನ್ನು ಕೂರಿಸಿಕೊಂಡು ವೈವಿಧ್ಯಮಯ ಕತೆಗಳನ್ನು ಹೇಳುತ್ತಿದ್ದರು. ರಾಮಾಯಣ, ಮಹಾಭಾರತ, ವೀರನಾರಿಯರು, ಕಾಲ್ಪನಿಕ ಕತೆಗಳು,ರಾಜರ ಕತೆಗಳು,ಸಾಹಸ ಕತೆಗಳು, ಭಯಂಕರ ಕತೆಗಳು ಹೇಗೆ ವಿವಿಧ ಬಗೆಯ ಕತೆಗಳನ್ನು ಹೇಳುತ್ತಿದ್ದರು.

Advertisement

ಇದರಿಂದ ಮಕ್ಕಳಲ್ಲಿ ಕಲ್ಪನಾಶಕ್ತಿ,ಆಲೋಚನಾ ಶಕ್ತಿ, ಆಲಿಸುವ ಕೌಶಲ, ಗಮನ ಕೇಂದ್ರೀಕರಿಸುವ ಕೌಶಲಗಳು ಅಜ್ಜಿಯ ಪ್ರೀತಿಯೊಂದಿಗೆ ಅಜ್ಜಿಯ ಮಡಿಲಿನಲ್ಲಿ ಬೆಳೆಯುತ್ತಿದ್ದವು. ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ,ಒಗ್ಗಟ್ಟು,ಸಹಕರಿಸುವ ಮನೋಭಾವನೆಯು ಬೆಳೆಯುತ್ತಿತ್ತು.

ಆದರೆ ಇಂದೇನಾಗಿದೆ….?

ಅವೆಲ್ಲವೂ ಈಗ ಮಾಯವಾಗಿದೆ. ಕತೆ ಹೇಳುವ ಅಜ್ಜಿಯ ಜಾಗದಲ್ಲಿ ಟಿ.ವಿ, ಮೊಬೈಲ್,‌ ಕಂಪ್ಯೂಟರ್‌ಗಳು ಕುಳಿತಿವೆ. ಇಂದಿನ ಮಕ್ಕಳೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಳೆಯುವಂತಾಗಿದೆ, ಟಿ.ವಿ, ಮೊಬೈಲ್‌ಗ‌ಳಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದರಿಂದ ಪರಸ್ಪರರಲ್ಲಿನ ಪ್ರೀತಿ, ಸಹಕಾರ,ಒಗ್ಗಟ್ಟು ಮನೋಭಾವನೆಗಳು ಇಲ್ಲವಾಗಿವೆ. ಏಕಾಂಗಿತನಕ್ಕೆ ಮಕ್ಕಳು ಮೊರೆ ಹೋಗುತ್ತಿದ್ದಾರೆ. ಕದ್ದುಮುಚ್ಚಿ ಮೊಬೈಲ್‌ ನೋಡುವುದು, ಅದರಲ್ಲೇ ಅತಿಯಾದ ಸಮಯ ಕಳೆಯುವುದನ್ನು ಮಾಡುತ್ತಿದ್ದಾರೆ. ಜಂಗಮವಾಣಿಯ ವ್ಯಾಮೋಹಕ್ಕೆ ಬಿದ್ದು ಎಲ್ಲರನ್ನೂ ಎಲ್ಲವನ್ನೂ ಮರೆಯುತ್ತಿದ್ದಾರೆ ಅದರ ದಾಸರಾಗುತ್ತಿದ್ದಾರೆ.

ಮೊಬೈಲ್‌ ಎನ್ನುವುದು ಮಕ್ಕಳ ಎಲ್ಲ ಬುದ್ಧಿಶಕ್ತಿಯನ್ನೂ ಕಸಿದುಕೊಳ್ಳುವ ಮಾಯಾಜಾಲವಿದ್ದಂತೆ ಅದು. ಮಕ್ಕಳು ಕೂತಲ್ಲಿ ನಿಂತಲ್ಲಿ ಎಲ್ಲೇ ಇದ್ದರೂ ಅವರ ಗಮನ ಮೊಬೈಲ್‌ ಕಡೆಗೇ ಇರುತ್ತದೆ. ಅಪ್ಪ, ಅಮ್ಮ, ಸ್ನೇಹಿತರು, ಸಂಬಂಧಿಕರು,

Advertisement

ಸಹೋದರ-ಸಹೋದರಿಯರು ಎಲ್ಲರನ್ನೂ ದೂರವಾಗಿಸಿ ಬಿಡುತ್ತದೆ ಈ ಮಾಯಾವಿ.

ಮಕ್ಕಳು ಇಂದು ರಜಾ ದಿನಗಳಲ್ಲಿ ಆಟ ಆಡುತ್ತಿದ್ದಾರೆ ..ಯಾವುದರಲ್ಲಿ? ಮೊಬೈಲ್‌ ನಲ್ಲಿ ಕಂಪ್ಯೂಟರ್‌ನಲ್ಲಿ ಇದರಿಂದ ಮಕ್ಕಳ ಮಾನಸಿಕ, ದೈಹಿಕ, ಸಾಮಾಜಿಕ ಬೆಳವಣಿಗೆಯಾಗುವುದೇ…? ಖಂಡಿತ ಇಲ್ಲ. ಬೇಡ, ಇಂತಹ ಅನುಭವಗಳು ಇಂತಹ ದಿನಗಳು ಬೇಡವೇ ಬೇಡ ನಾವು ಮತ್ತೆ ಹಳೆಯ ಜೀವನಕ್ಕೆ ಹೋಗಬೇಕು ಎಲ್ಲರೂ ಒಂದಾಗಬೇಕು, ಒಂದಾಗಿ ಚೆಂದಾಗಿ ಆಡಿ ಕುಣಿದು ಮಕ್ಕಳಲ್ಲಿ ಮಕ್ಕಳಾಗಿ ನಲಿದು ಆರೋಗ್ಯವಂತರಾಗಿ ಬಾಳಬೇಕು.

ಸಾಮಾಜಿಕ ಜಾಲತಾಣವೆನ್ನುವ ಮಾಯಾವಿಯ ಬದುಕಿನಿಂದ ಹೊರಬಂದು ನೈಜತೆಯ ಬದುಕಿಗೆ ಎಡೆಮಾಡಿಕೊಡಬೇಕು ನೈಜತೆಯ ಬದುಕಲ್ಲಿ ಬಾಳಬೇಕು.ಸಂಬಂಧಗಳು ಮತ್ತೆ ಬೆಸೆಯಬೇಕು ಅಜ್ಜಿಯ ಕತೆ ಕೇಳಲು ನಾವು ತಯಾರಾಗಬೇಕು.ಬೆಳದಿಂಗಳಲ್ಲಿ ಊಟ ಸವಿಯಲು ಸಿದ್ಧರಾಗಬೇಕು.

ಬದುಕು ಎಂದ ಮೇಲೆ ಜಂಜಾಟಗಳು ಬದುಕಿನ ದಿನನಿತ್ಯದ ಹೋರಾಟಗಳು ಇದ್ದದ್ದೇ ಎಲ್ಲೆಲ್ಲಿಯೂ ಯಾವಾಗಲೂ ಬ್ಯುಸಿ. ಈ ಬ್ಯುಸಿ ಬದುಕಿನಲ್ಲಿಯೂ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಅವರ ಭವಿಷ್ಯಕ್ಕಾಗಿ ಅವರ ಆರೋಗ್ಯ ಮತ್ತು ನೆಮ್ಮದಿಯ ಬದುಕಿಗಾಗಿ ಇಂದಿನವರಾದ ನಾವು ಅಲ್ಪವಾದರೂ ತ್ಯಾಗ ಮಾಡಲು ಶ್ರಮಿಸಬೇಕಿದೆ.  ಅವರಿಗೆ ಪೂರ್ಣವಾಗಿ ಬದುಕು ಸಿಗಬೇಕಿದೆ.

ಮಕ್ಕಳ ಮನಸ್ಸು ಭವಿಷ್ಯವನ್ನು ಹಾಳುಮಾಡದೆ ಅವರ ಪರಿಪೂರ್ಣ ಬೆಳವಣಿಗೆಗೆ ನಾವು ಶ್ರಮಿಸಿ ಮಕ್ಕಳನ್ನು ನೈಜತೆಯಲ್ಲಿ ಬೆಳೆಸೋಣ,ಮೊಬೈಲ್‌ – ಅಂತರ್ಜಾಲ ಗಳ ಮಹಾಮಾರಿಯಿಂದ  ದೂರವಿರಿಸೋಣ ಸಂಬಂಧಗಳ ಮಹತ್ವವನ್ನು ತಿಳಿಸೋಣ.

ಮೊಬೈಲ್‌ ದಾಸ್ಯದಿಂದ ನಾವು ಮೊದಲು ಹೊರಬಂದು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸೋಣ.ನಿಜವಾದ ಪ್ರೀತಿಯ ತೋರಿ ಬೆಳೆಸೋಣ.

-ಭಾಗ್ಯ ಜೆ.

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next