Advertisement

ಯೋಜನೆಗಳ ಫಾಲೋಅಪ್‌ ಆಗಲಿ

06:06 PM May 08, 2020 | Team Udayavani |

ಮೈಸೂರು: ಆರ್ಥಿಕವಾಗಿ ದುರ್ಬಲರಾಗಿರುವರಿಗೋಸ್ಕರ ನಿವೇಶನ ಯೋಜನೆ ಮಂಜೂರು ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಸಾಲದು, ಅದನ್ನು ಫಾಲೋಅಪ್‌ ಮಾಡುವ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದು ಸಚಿವರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಬಿ.ಎ. ಬಸವರಾಜು ಹೇಳಿದರು.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿದ್ವಯರು, ಸರ್ಕಾರಗಳಿಗೆ ವರದಿ ಸಲ್ಲಿಸಿಯೋ, ಪ್ರಸ್ತಾವನೆ ಸಲ್ಲಿಸಿಯೋ ಸುಮ್ಮನಾಗ ಬಾರದು. ಅಧಿಕಾರಿಗಳು ಫಾಲೋಅಪ್‌ ಮಾಡುವುದರ ಜೊತೆಗೆ ಆಗಾಗ ಸರ್ಕಾರದ ಗಮನ ಸೆಳೆಯಬೇಕು. ಮುಡಾದ 6 ಯೋಜನೆಗಳಿಗೆ ಸರ್ಕಾರದಿಂದ ಅನುಮತಿ ಬಾಕಿ ಇದೆ. ಸರ್ಕಾರದ ವತಿಯಿಂದ ಒಪ್ಪಿಗೆ ಬೇಕಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದಾಗ, ಶೀಘ್ರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂ ದರು. ಎಲ್ಲರೂ ಕೆಲಸ ಮಾಡಲಿ, ಮುಂದಿನ ದಿನಗಳಲ್ಲಿ ನಾನು ಪರಿಶೀಲನೆ ಮಾಡುತ್ತೇನೆ. ತಪ್ಪುಗಳು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮವಹಿಸುವೆ ಎಂದು ಸಚಿವ ಬಸವರಾಜು ಎಚ್ಚರಿಕೆ ನೀಡಿದರು.

ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಜಿ.ಟಿ. ದೇವೇಗೌಡ, ಎಲ್‌. ನಾಗೇಂದ್ರ, ಹರ್ಷವರ್ಧನ್‌, ಡೀಸಿ ಅಭಿರಾಂ ಜಿ.ಶಂಕರ್‌, ಮೂಡ ಆಯುಕ್ತ ನಟೇಶ್‌ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next