Advertisement

ಬಿಡಿಎ: ಅಕ್ರಮ ಕಟ್ಟಡ ಸಕ್ರಮಕ್ಕೆ ಚಾಲನೆ

01:14 PM Jan 03, 2021 | Team Udayavani |

ಬೆಂಗಳೂರು: ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ಮೂಲಕ ಮರುಮಂಜೂರಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

Advertisement

ಕಾಯ್ದೆ 1976ರ ಕಲಂ 38 (ಸಿ) ತಿದ್ದುಪಡಿಗೊಳಿಸಿ ಹೊಸದಾಗಿ ಕಲಂ 38 (ಡಿ) ಜಾರಿಗೊಳಿಸಿ ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಈಗ ಅದರ ಮುಂದುವರಿದಭಾಗವಾಗಿ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿನಅನಧಿಕೃತ ಕಟ್ಟಡಗಳನ್ನು ಸರ್ಕಾರದ ಸುಗ್ರೀವಾಜ್ಞೆ ದಿನಾಂಕದಿಂದ 12 ವರ್ಷಗಳ ಹಿಂದೆ ವಾಸಯೋಗ್ಯ ಮನೆಗಳನ್ನು ನಿರ್ಮಿಸಿದ್ದಲ್ಲಿ ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಮೊದಲ ಹಂತದಲ್ಲಿ ಪಿಳ್ಳಣ್ಣ ಗಾರ್ಡನ್‌ 3ನೇ ಹಂತದ ಬಡಾವಣೆಯಲ್ಲಿ 783 ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈ ಪೈಕಿ 516 ಅನಧಿಕೃತ ಕಟ್ಟಡದಾರರಿಗೆಡಿಮಾಂಡ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ಆರ್‌ಎಂವಿ ಬಡಾವಣೆಯಲ್ಲಿ 160 ಅನಧಿಕೃತ ಕಟ್ಟಡದಾರರು ಮತ್ತುಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿ 41 ಅನಧಿಕೃತ ಕಟ್ಟಡ  ದಾರರಿಗೆ ಡಿಮಾಂಡ್‌ ನೋಟಿಸ್‌ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ : ಮುಂದಿನ ಚುನಾವಣೆಯಲ್ಲಿ 140 ಶಾಸಕರ ಗೆಲುವಿನ ಗುರಿ, ರಾಜ್ಯದಲ್ಲಿ ಶೀಘ್ರ ಪ್ರವಾಸ: ಬಿಎಸ್ ವೈ

ಪೂರ್ವ ವಿಭಾಗಕ್ಕೆ ಸಂಬಂಧಪಟ್ಟಂತೆ ಎಚ್‌ಎಸ್‌ಆರ್‌ಬಡಾವಣೆಯಲ್ಲಿ 555 ಅನಧಿಕೃತ ಕಟ್ಟಡ ಗುರುತಿಸಿದ್ದು,ಈ ಪೈಕಿ 113 ಅನಧಿಕೃತ ಕಟ್ಟಡದಾರರಿಗೆ ಡಿಮಾಂಡ್‌ನೋಟಿಸ್‌ ಜಾರಿಗೊಳಿಸಲಾಗಿದೆ. ಉಳಿದ ಬಡಾವಣೆಗಳಿಗೆ ಹಂತ-ಹಂತವಾಗಿ ನೋಟಿಸ್‌ ಜಾರಿಗೊಳಿಸುವ ಪ್ರಕ್ರಿಯೆಚಾಲ್ತಿಯಲ್ಲಿದೆ. ಈ ಬಡಾವಣೆಗಳ ಬಗ್ಗೆ ಪ್ರಾಧಿಕಾರದಕಂದಾಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಸಹಯೋಗದೊಂದಿಗೆ ಅನಧಿಕೃತವಾಗಿ ನಿರ್ಮಾಣಗೊಂಡ ಕಟ್ಟಡಗಳ ಮಾಲಿಕರಿಗೆ ತಿಳಿವಳಿಕೆ ಪತ್ರ ಜಾರಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

Advertisement

ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿ :

ನಿಗದಿತ ಅರ್ಜಿ ನಮೂನೆಯೊಂದಿಗೆ ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನಗಳಲ್ಲಿನ ಕಟ್ಟಡದ ಕ್ರಯಪತ್ರಗಳ ದೃಢೀಕೃತ ಪ್ರತಿ, ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನದಲ್ಲಿನ ಕಟ್ಟಡ ಕ್ರಯಪತ್ರಗಳ ಇತ್ತೀಚಿನವರೆಗಿನ ನಮೂನೆ-15ರಲ್ಲಿ ಮೂಲಋಣಭಾರ ಪ್ರಮಾಣಪತ್ರ, ನಿಗದಿತ ನಮೂನೆಯಲ್ಲಿ ಇತ್ತೀಚಿನ ಭಾವಚಿತ್ರ/ ಮಾದರಿ ಸಹಿ ದೃಢೀಕರಣ ಪತ್ರ (ಗೆಜೆಟೆಡ್‌ ಅಧಿಕಾರಿ ದೃಢೀಕರಣ), ಸ್ವ-ಪ್ರಮಾಣಪತ್ರ (ನೋಟರಿ ದೃಢೀಕೃತ), ಇತ್ತೀಚಿನ ಕಂದಾಯ ರಸೀದಿ, ಖಾತಾ ದೃಢೀಕರಣ ಪತ್ರ, ಖಾತಾ ನಕಲು ಪ್ರತಿ,ಮಂಜೂರಾದ ಕಟ್ಟಡದ ನಕ್ಷೆ, ನೀರಿನ ಸಂಪರ್ಕ ಕಾರ್ಯಾದೇಶ, ವಿದ್ಯುತ್‌ ಸಂಪರ್ಕ ಕಾರ್ಯಾದೇಶ, ವಾಸದ ವಿಳಾಸಕ್ಕೆ ಪುರಾವೆ (ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಇತರೆ) ಈ ಎಲ್ಲಾ ದಾಖಲಾತಿಗಳೊಂದಿಗೆ ಹಾಗೂ ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಪಾವತಿಸತಕ್ಕದ್ದು ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next