Advertisement

ಸೋನಿ-ಬಿಸಿಸಿಐ ನಡುವೆ “125  ಕೋಟಿ ರೂ.’ಬಿಕ್ಕಟ್ಟು!

12:45 PM Nov 18, 2017 | |

ಮುಂಬಯಿ: ಬಿಸಿಸಿಐ ಮತ್ತು ಸೋನಿ ನೆಟ್‌ವರ್ಕ್‌ ನಡುವೆ 125 ಕೋ. ರೂ. ಹಣ ಪಾವತಿಗಾಗಿ ಭಾರೀ ವಿವಾದ ಶುರುವಾಗಿದೆ. ಐಪಿಎಲ್‌ ನೇರ ಪ್ರಸಾರದ ಹಕ್ಕನ್ನು ಮುಂದುವರಿಸುವುದಕ್ಕಾಗಿ ಸೌಲಭ್ಯ ಶುಲ್ಕವಾಗಿ (ಫೆಸಿಲಿ ಟೇಶನ್‌ ಫೀ) ಬಿಸಿಸಿಐ 425 ಕೋಟಿ ರೂ. ನೀಡಲು ಸೋನಿಗೆ ಸೂಚಿಸಿತ್ತು. ಇದರಲ್ಲಿ 300 ಕೋಟಿ ರೂ. ಪಾವತಿ ಮಾಡಿರುವ ಸೋನಿ ಇನ್ನುಳಿದ 125 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಬಿಸಿಸಿಐನಿಂದ ತನಗೆ ಬರಬೇಕಾದ ಹಣ ಬಂದ ಮೇಲೆಯೇ ಉಳಿದ ಹಣ ನೀಡುವುದಾಗಿ ಸೋನಿ ಹೇಳಿಕೊಂಡಿದೆ. ಇದು ಎರಡೂ ಸಂಸ್ಥೆಗಳ ನಡುವಿನ ಬಿಕ್ಕಟ್ಟನ್ನು ತೀವ್ರಗೊಳಿಸಿದೆ.

Advertisement

2009-10ರಲ್ಲಿ 425 ಕೋಟಿ ರೂ. ನೀಡಲು ಎರಡೂ ಸಂಸ್ಥೆಗಳ ನಡುವೆ ಒಪ್ಪಂದವಾಗಿತ್ತು. ಈ ಪೈಕಿ ಮೂಲ ಶುಲ್ಕ 115 ಕೋಟಿ ರೂ. ಮತ್ತು ನೇರ ಪ್ರಸಾರ ಹಕ್ಕನ್ನು ಮುಂದುವರಿಸಲು 310 ಕೋಟಿ ರೂ.ಗಳಾಗಿತ್ತು. ಒಂದು ವೇಳೆ ಈ ಹಣ ನೀಡದೇ ಹೋದರೆ 2009ರಿಂದ 2017ರವರೆಗಿನ 9 ವರ್ಷಗಳ ಕಾಲಾವಧಿಗೆ ಐಪಿಎಲ್‌ ನೇರ ಪ್ರಸಾರದ ಹಕ್ಕನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸೋನಿಗೆ ಬಿಸಿಸಿಐ ಸೂಚಿಸಿತ್ತು. ಆಗ ಒಪ್ಪಿಕೊಂಡಿದ್ದ ಸೋನಿ ಈಗ ಬಾಕಿ ಹಣ ಪಾವತಿಸಲು ತಕರಾರು ತೆಗೆಯುತ್ತಿದೆ. ಈ ವಿವಾದ ಮುಂದುವರಿದರೆ ದಕ್ಷಿಣ ಆಫ್ರಿಕಾದಲ್ಲಿ ಭಾರತ ಕ್ರಿಕೆಟ್‌ ತಂಡದ ಪ್ರವಾಸವನ್ನು ನೇರ ಪ್ರಸಾರ ಮಾಡುವ ಅವಕಾಶವನ್ನು ಸೋನಿ ಕಳೆದುಕೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next