Advertisement

IPL: ಬಿಸಿಸಿಐ ಸಭೆ… ಐಪಿಎಲ್‌ ಮಾಲಕರ ಪರ್ಸ್‌ ಮೊತ್ತ ಹೆಚ್ಚಿಸಲು ನಿರ್ಧಾರ?

11:17 PM Jul 31, 2024 | Team Udayavani |

ಮುಂಬಯಿ: ಬುಧವಾರ ನಡೆದ ಬಿಸಿಸಿಐ ಮತ್ತು ಐಪಿಎಲ್‌ ಮಾಲಕರ ನಡುವಿನ ಸಭೆಯಲ್ಲಿ ಫ್ರಾಂಚೈಸಿ ಮಾಲಕರ ಪರ್ಸ್‌ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ. ಇದೇ ವೇಳೆ ಆಟಗಾರರ ಉಳಿಕೆ, ಇಂಪ್ಯಾಕ್ಟ್ ಪ್ಲೇಯರ್‌ ನಿಯಮ ಇತ್ಯಾದಿಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ವರದಿಗಳು ಹೇಳಿವೆ.

Advertisement

ಫ್ರಾಂಚೈಸಿ ಮಾಲಕರ ಪರ್ಸ್‌ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸುವುದೇ ಬುಧವಾರದ ಸಭೆಯ ಮುಖ್ಯ ಉದ್ದೇಶವಾಗಿತ್ತು. ಇದರ ಜತೆಯಲ್ಲಿ ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳು ಅವಕಾಶ, ಕೊನೆ ಕ್ಷಣದಲ್ಲಿ ಐಪಿಎಲ್‌ ತೊರೆಯುವ ವಿದೇಶಿಗರ ನಡೆ ವಿರುದ್ಧ ಕಾನೂನು ರಚನೆ, ಹಲವಾರು ಕ್ರಿಕೆಟರ್‌ಗಳಿಂದ ಟೀಕೆ ವ್ಯಕ್ತವಾಗಿರುವ ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಉಳಿಸಿಕೊಳ್ಳುವ ಅಥವಾ ಕೈ ಬಿಡುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.

2025 ಐಪಿಎಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಪರ್ಸ್‌ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಮತ್ತು ಫ್ರಾಂಚೈಸಿ ಮಾಲಕರು ಶೀಘ್ರವೇ ಅಂತಿಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next