Advertisement

ಪುರುಷರ ತಂಡದ ಜತೆಯಲ್ಲೇ ವನಿತಾ ಕ್ರಿಕೆಟಿಗರ ಆಫ್ರಿಕಾ ಸಫಾರಿ

06:55 AM Sep 16, 2017 | Team Udayavani |

ಹೊಸದಿಲ್ಲಿ: ಭಾರತದ ಪುರುಷರ ಕ್ರಿಕೆಟ್‌ ತಂಡ ಮುಂದಿನ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸುದೀರ್ಘ‌ ಪ್ರವಾಸ ಕೈಗೊಳ್ಳಲಿದೆ. ಇದೇ ವೇಳೆ ವನಿತಾ ತಂಡವನ್ನೂ ಕಳುಹಿಸಿ ಎಂಬುದಾಗಿ “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಬಿಸಿಸಿಐಗೆ ಮನವಿ ಮಾಡಿಕೊಂಡಿತ್ತು. ಇದಕ್ಕೀಗ ಬಿಸಿಸಿಐ ಸ್ಪಂದಿಸಿದೆ.

Advertisement

2018ರ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಾಗಿ ಭಾರತದ ಪುರುಷರ ತಂಡದ ಜತೆಯಲ್ಲೇ ವನಿತಾ ತಂಡವೂ ಹರಿಣಗಳ ನಾಡಿಗೆ ತೆರಳಲಿದೆ. ಆದರೆ ಈಗಿನ ವೇಳಾಪಟ್ಟಿ ಪ್ರಕಾರ ವನಿತಾ ತಂಡ ಕೇವಲ ಟಿ-20 ಸರಣಿಯಲ್ಲಷ್ಟೇ ಪಾಲ್ಗೊಳ್ಳಲಿದೆ. ಪುರುಷರ ತಂಡ ಟಿ-20 ಪಂದ್ಯದಂದೇ, ಈ ಮುಖಾಮುಖೀಗೂ ಮೊದಲು ಅದೇ ಅಂಗಳದಲ್ಲಿ ವನಿತೆಯರ ಟಿ-20 ಪಂದ್ಯವನ್ನು ಆಡಲಾಗುವುದು.

“ವರ್ಷಾರಂಭದಲ್ಲಿ ವನಿತಾ ತಂಡವನ್ನೂ ಕಳುಹಿಸಿಕೊಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ನಮ್ಮಲ್ಲಿ ಕೇಳಿಕೊಂಡಿತ್ತು. ಪುರುಷರ ಪಂದ್ಯಕ್ಕೂ ಮೊದಲು ಅದೇ ಮೈದಾನದಲ್ಲಿ ಈ ಪಂದ್ಯಗಳನ್ನು ಆಡಿಸಲಾಗುವುದು. ಇದರಿಂದ ವನಿತಾ ಕ್ರಿಕೆಟಿಗೆ ಬಹಳ ನೆರವಾಗಲಿದೆ, ಇದನ್ನು ನೇರ ಪ್ರಸಾರದಲ್ಲೂ ತೋರಿಸಲು ಸಾಧ್ಯವಾಗುತ್ತದೆ. ಅದೇ ಕಮೆಂಟ್ರಿ ಟೀಮ್‌ ಮೂಲಕ ವೀಕ್ಷಕ ವಿವರಣೆ ನೀಡಬಹುದು ಎಂದು ತಿಳಿಸಿತ್ತು. ಇದಕ್ಕೆ ನಾವೀಗ ಸಮ್ಮತಿಸಿದ್ದೇವೆ…’ ಎಂದು ಬಿಸಿಸಿಐ ಮೂಲವೊಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next