Advertisement

2,237 ಬಿಎಂಟಿಸಿ ನೌಕರರ ಮೇಲೆ ತೂಗುಗತ್ತಿ

12:39 PM Apr 15, 2021 | Team Udayavani |

ಬೆಂಗಳೂರು: ಬಿಎಂಟಿಸಿಯಲ್ಲಿ ಅಮಾನತು ಅಸ್ತ್ರಮುಂದುವರಿದಿದ್ದು, ಬುಧವಾರ ಮತ್ತೆ 221 ನೌಕರ‌ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Advertisement

ಜತೆಗೆ ಕಾರ್ಯನಿರ್ವಹಿಸುವ 50-55 ವರ್ಷದಒಳಗಿನವರು ಕರ್ತವ್ಯಕ್ಕೆ ಹಾಜರಾಗಲು ವಿಧಿಸಿರುವಗಡುವು ಗುರುವಾರ ಅಂತ್ಯಗೊಳ್ಳಲಿದ್ದು, ನಿಗದಿತಸಮಯದಲ್ಲಿ ಹಾಜರಾಗದಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.996 ಚಾಲಕರು, 420 ಚಾಲಕ ಕಂ ನಿರ್ವಾಹಕರು, 629 ನಿರ್ವಾಹಕರು ಹಾಗೂ 192 ಮೆಕಾನಿಕ್‌ಗಳು ಸೇರಿದಂತೆ 2,237 ನೌಕರರಿಗೆ ಬಿಎಂಟಿಸಿಯು ಏ. 12ರಂದು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕಾರಣಕೇಳಿ ನೋಟಿಸ್‌ ಜಾರಿ ಮಾಡಿತ್ತು.

ಸಂಸ್ಥೆಯ ಹಿರಿಯ ಸಿಬ್ಬಂದಿಯಾಗಿದ್ದು, ತಮ್ಮಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಮತ್ತು ಗೊತ್ತುಪಡಿಸಿರುವ ಜವಾಬ್ದಾರಿಗೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದು ಆದ್ಯಕರ್ತವ್ಯ. ಆದರೆ ಇದಕ್ಕೆ ವ್ಯತಿರಿಕ್ತವಾಗಿನಡೆದುಕೊಂಡಿದ್ದರಿಂದ ಸಾರಿಗೆ ಸೇವೆಯಲ್ಲಿ ವ್ಯತ್ಯಯಉಂಟಾಗಿದ್ದು, ಸಾರ್ವಜನಿ ಕರಿಗೆ ತೊಂದರೆಯಾಗಿದೆ.ಈ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ. ಸಂಜೆ5ರ ಒಳಗೆ ಖುದ್ದು ಹಾಜರಾಗದಿದ್ದರೆ, ಶಿಸ್ತು ಕ್ರಮದಎಚ್ಚರಿಕೆಯನ್ನೂ ನೀಡಲಾಗಿದೆ.

ಈ ಮಧ್ಯೆ ಮಂಗಳವಾರ ಸಾರಿಗೆ ನೌಕರರು ನಗರ ಸೇರಿದಂತೆ ರಾಜ್ಯದವಿವಿಧೆಡೆ ಕುಟುಂಬದ ಸದಸ್ಯರೊಂದಿಗೆ ಭಿಕ್ಷಾಟನೆಮೂಲಕ ಗಮನಸೆಳೆ ದರು. ಕೆಲವರು ರಸ್ತೆ ಬದಿಟವಲ್‌ ಹಾಕಿ, ಇನ್ನು ಹಲವರು ತಟ್ಟೆ ಹಿಡಿದುಸಾರ್ವಜನಿಕರಲ್ಲಿ ಭಿಕ್ಷೆ ಕೇಳಿದರು. ಬುಧವಾರವೂಇದು ಮುಂದುವರಿ ಯಿತು. ಏ. 15ರಂದು ಸಂಜೆ6-7ರವರೆಗೆ ನೌಕ ರರು ಮೊಂಬತ್ತಿ ಹಚ್ಚಿ, ವಿನೂತನರೀತಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಹಬ್ಬಕ್ಕೆಊರಿಗೆ ಹೋಗಿ ಬೆಂಗಳೂರಿಗೆ ವಾಪಸಾ ದವರು,ಗೂಡುಗಳಿಗೆ ತೆರಳಲು ಪರದಾಡಿದರು.

ವಾಗ್ಧಾನ ಮಾಡಿದ್ರೆ ಕೆಲಸಕ್ಕೆ ಹಾಜರು’: ಹಠಕ್ಕೆಬಿದ್ದು ಕೆಲಸ ನಿರ್ವಹಿಸುವ ಬದಲು ಪ್ರೀತಿಯಿಂದಮಾತನಾಡಿ, ಕೊಟ್ಟ ಮಾತಿನಂತೆ ನಡೆದು ಕೊಳ್ಳುವುದಾಗಿ ವಾಗ್ಧಾನ ಮಾಡಿದರೂ ನಾವು ಕೆಲಸಕ್ಕೆ ಹಾಜರುಆಗುತ್ತೇವೆ ಎಂದು ಸಾರಿಗೆ ನೌಕರರ ಕೂಟದಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next