Advertisement

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕರಿಗೆ ಸೋಂಕು ದೃಢ: ಮೇಯರ್ ಸೇರಿದಂತೆ ಹಲವರಿಗೆ ಕ್ವಾರಂಟೈನ್

05:37 PM Jul 07, 2020 | keerthan |

ಬೆಂಗಳೂರು: ಬಿಬಿಎಂಪಿ ಮೇಯರ್ ಎಂ.ಗೌತಮ ಕುಮಾರ್ ಅವರ ಆಪ್ತ ಸಹಾಯಕರೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಮೇಯರ್ ಸೇರಿದಂತೆ ‌ಹಲವರು ಕ್ವಾರೆಂಟೈನ್ ‌ಗೆ ಒಳಗಾಗಿದ್ದಾರೆ.

Advertisement

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಹಾಗೂ ಮೇಯರ್ ಅವರ ಆಪ್ತ ಸಹಾಯಕರೊಬ್ಬರಿಗೆ ಸೋಂಕು ದೃಢವಾಗಿದೆ.  ಬಿಬಿಎಂಪಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಚೇರಿ ಸೀಲ್ ಡೌನ್ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯ 70 ಸದಸ್ಯರೊಂದಿಗೆ ಸೋಮವಾರ ಸಭೆ ನಡೆಸಲಾಗಿತ್ತು. ಸದ್ಯ ಇವರಿಗೆ ಸೋಂಕು ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬಿಬಿಎಂಪಿಯ ಕೇಂದ್ರ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಹಾಗೂ ಮೇಯರ್ ಅವರ ಆಪ್ತ ಸಹಾಯಕರೊಬ್ಬರಿಗೆ ಸೋಂಕು‌ ದೃಢ ಪಟ್ಟ ಹಿನ್ನೆಲೆಯಲ್ಲಿ ‌ಕಂದಾಯ ಸಚಿವ ಆರ್ ಅಶೋಕ್ ‌ಅವರ‌ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next