ಬೆಂಗಳೂರು: ಬಿಬಿಎಂಪಿಯ 2020ನೇ ಸಾಲಿನ ಚುನಾಚವಣೆ ಮುಂದೂಡಲು ಉದ್ದೇಶಪೂರ್ವಕವಾಗಿ ಸರ್ಕಾರ “ಬಿಬಿಎಂಪಿ – 2020’ಹೊಸ ವಿಧೇಯಕ ಮಂಡನೆ ಮಾಡುತ್ತಿದೆ. ಈ ಮೂಲಕ ಚುನಾವಣೆ ಮುಂದೂಡಿ ನಗರದ ಶಾಸಕರು ಹಾಗೂ ಸಂಸದರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶ ಎಂದು ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಬೆಂಗಳೂರು ನವ ನಿರ್ಮಾಣ ಪಕ್ಷ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯ ನಾಯಕರು ಆರೋಪಿಸಿದರು.
ಜನಾಗ್ರಹ ಸಂಸ್ಥೆ ವೆಬಿನಾರ್‌ನ ಮೂಲಕ ಆಯೋಜಿಸಿದ್ದ ಸಿಟಿ ಪಾಲಿಟಿಕ್ಸ್ -4 ನಲ್ಲಿ ಬಿಜೆಪಿಯ ನಾಯಕರು ಸೇರಿದಂತೆ ಎಲ್ಲ ಪಕ್ಷದ ಸದಸ್ಯರು ಬಿಬಿಎಂಪಿ – 2020ಹೊಸ ವಿಧೇಯಕದ ಬಗ್ಗೆ ತಮ್ಮ ಅಭಿಪ್ರಾಯಹಾಗೂ ವಿಧೇಯಕದಲ್ಲಿನ ಲೋಪಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿ ಹೊರತು ಪಡಿಸಿ ಎಲ್ಲ ರಾಜಕೀಯ ಪಕ್ಷಗಳು ಸರ್ಕಾರ ನೂತನ ವಿಧೇಯಕ ಮಂಡನೆಕುರಿತು ಪ್ರಶ್ನೆ ಮಾಡಿದವು. ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ಮಾತನಾಡಿ, ನಗರದ ಅಭಿವೃದ್ಧಿಯ ಉದ್ದೇಶದಿಂದ ವಿಧೇಯಕ ಮಂಡನೆ ಮಾಡುವುದೇ ಆಗಿದ್ದರೆ, ಚುನಾವಣಾ ವರ್ಷಕ್ಕೆ ಮುನ್ನವೇ ಮಂಡನೆ ಮಾಡಬೇಕಾಗಿತ್ತು. ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಯ ಆಡಳಿತ ಬೇಕಾಗಿಲ್ಲ ಎಂದು ದೂರಿದರು.
ಆದ್ಮಿ ಪಕ್ಷದ ರಾಜ್ಯ ಸಹ-ಸಂಚಾಲಕಿ ಎಂ.ಎಸ್. ಶಾಂತಲಾ ದಾಮ್ಲೆ ಆಮ್ ಅವರು, ಸರ್ಕಾರ ಕೋವಿಡ್ ತಡೆಯುವಲ್ಲಿ ವಿಫಲವಾಗಿದೆ. ಚುನಾವಣೆ ಮುಂದೂಡಲುಈ ರೀತಿ ವಿಧೇಯಕ ಮಂಡನೆ ಮಾಡಲಾಗಿದೆ. ಪಾಲಿಕೆಯ ಕೆಎಂಸಿ ಕಾಯ್ದೆಯಲ್ಲೇಪರಿಹಾರ ಕಂಡುಕೊಳ್ಳಬಹುದಾಗಿತ್ತು ಎಂದರು. ಬಿಬಿಎಂಪಿಯ ವಿರೋಧ ಪಕ್ಷದ ಮಾಜಿ ಅಧ್ಯಕ್ಷ ಅಬ್ದುಲ್ ವಾಜಿದ್ ಮಾತನಾಡಿ, ನಗರಕ್ಕೆ ಪ್ರತ್ಯೇಕ ಕಾಯ್ದೆಯ ಅವಶ್ಯಕತೆ ಇತ್ತು. ಆದರೆ, ಚುನಾವಣಾ ಸಂದರ್ಭದಲ್ಲೇ ವಿಧೇಯಕ ಮಂಡನೆ ಮಾಡಿರುವುದು ಸಮಂಜಸವಲ್ಲ. ಅಲ್ಲದೆ,ಈವಿಧೇಯಕವನ್ನು ಭವಿಷ್ಯದ ದೃಷ್ಟಿಯಿಂದ ರೂಪಿಸಿಲ್ಲ ಎಂದರು. ಕರ್ನಾಟಕ ರಾಷ್ಟ್ರ ಸಮಿತಿಯ ಸಿ.ಎನ್ ದೀಪಕ್ ಮಾತನಾಡಿ, ಪಾಲಿಕೆಯ ಚುನಾವಣಾ ವೇಳೆ ವಿಧೇಯಕ ಮಂಡನೆ, ಹೊಸ ಪ್ರದೇಶ ಸೇರಿ ಸುವ ಚರ್ಚೆಗಳೇಕೆ ಮುನ್ನೆಲೆಗೆ ಬರುತ್ತವೆ ಎಂದು ಪ್ರಶ್ನಿಸಿದರು.
ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ನೀಡಿ : ಬಿಬಿಎಂಪಿಯ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ನಗರದ ಜನ ಸಂಖ್ಯೆಗೆ ಅನುಗುಣವಾಗಿ ಕೆಎಂಸಿ ಕಾಯ್ದೆಯಲ್ಲಿ ಬದಲಾವಣೆಗಳು ಆಗಬೇಕಿತ್ತು. ಹೀಗಾಗಿ, ಹೊಸ ವಿಧೇಯಕ ಅವಶ್ಯಕ. ಆದರೆ, ಇದರಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ವಲಯ ಸಮಿತಿಗಳಲ್ಲಿ ಜಂಟಿ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದನ್ನು ಹಿಂಪಡೆಯಬೇಕು. ಈ ಸಂಬಂಧಕಮಿಟಿಯ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚೆ ಮಾಡಲಾಗುವುದು.ಕೌನ್ಸಿಲ್‌ನ ಸದಸ್ಯರಿಗೆ ಹೆಚ್ಚಿನ ಅಧಿಕಾರ ಇರಬೇಕು ಎಂದರು. ಈ ವೇಳೆ ಬೆಂಗಳೂರು ನವ ನಿರ್ಮಾಣಪಕ್ಷದ ಪ್ರಧಾನಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್,ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಅಲವಿಲ್ಲಿ ಹಾಗೂ ಸಪ್ನಾಕರೀಮ್ ಇತರರಿದ್ದರು.