Advertisement

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

03:29 PM Jan 09, 2025 | Team Udayavani |

ಬೆಂಗಳೂರು: ಬಿಗ್‌ ಬಾಸ್‌ (Bigg Boss Kannada-11) ಮನೆಯಲ್ಲಿ ʼಟಿಕೆಟ್‌ ಟು ಫಿನಾಲೆʼ ಆಟ ಕಾವು ಪಡೆದುಕೊಂಡಿದೆ. ನಾನು ನಾನು ಎನ್ನುತ್ತಲೇ ವೈಯಕ್ತಿಕವಾಗಿ ಆಟವನ್ನು ಆಡಲು ಸ್ಪರ್ಧಿಗಳು ಶುರು ಮಾಡಿದ್ದಾರೆ.

Advertisement

ನಿನ್ನೆಯ ಆಟದಲ್ಲಿ ತಂಡವಾಗಿ ಟಾಸ್ಕ್ ನಲ್ಲಿ ಸೋತ ಕಾರಣ, ಧನರಾಜ್, ಗೌತಮಿ, ಧನರಾಜ್ ಹಾಗೂ ಚೈತ್ರಾ ಅವರ ಪೈಕಿ ಒಬ್ಬರನ್ನು ಫಿನಾಲೆ ಓಟದಿಂದ ಹೊರಗೆ ಇಡಬೇಕಿತ್ತು. ಇದರಲ್ಲಿ ಧನರಾಜ್‌, ಗೌತಮಿ ಹಾಗೂ ಮಂಜು ಅವರು ಚೈತ್ರಾ ಅವರನ್ನು ಹೊರಗೆ ಇಟ್ಟಿದ್ದಾರೆ.

ಇದನ್ನೂ ಓದಿ: Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

ಗೌತಮಿ , ಮಂಜು ಹಾಗೂ ಧನರಾಜ್‌ ಅವರ ತಂಡ ಮತ್ತೆ ಟಾಸ್ಕ್‌ನಲ್ಲಿದ್ದಾರೆ. ಈ ಪೈಕಿ ಮತ್ತೊಬ್ಬರನ್ನು ತಂಡದಿಂದ ಹೊರಗೆ ಇಡಬೇಕೆಂದು ಬಿಗ್‌ ಬಾಸ್‌ ಹೇಳಿದ್ದಾರೆ. ಅದರಂತೆ ಧನರಾಜ್‌ ಅವರನ್ನು ಮಂಜು, ಗೌತಮಿ ಹೊರಗಿಟ್ಟಿದ್ದಾರೆ.

Advertisement

ಮೊದಲ ಮೂರು ವಾರ ಹಿಂಜರಿಯುತ್ತಿದ್ದರು ಎಂದು ಗೌತಮಿ ಹೇಳಿದ್ದಾರೆ. ಇದಕ್ಕೆ ರಜತ್‌ ಅವರು ಫಸ್ಟ್‌ ಮೂರು ವಾರ ಯಾಕೆ ಚೆನ್ನಾಗಿ ಆಡಿಲ್ಲ. ಧನರಾಜ್‌ ಗೌತಮಿಗಿಂತ ವೀಕ್ ಆ? ಎಂದು ಪ್ರಶ್ನೆ ಮಾಡಿದ್ದಾರೆ.‌ ಇದಕ್ಕೆ ಇಲ್ಲಿ ಒಬ್ಬರೇ ಆಡುತ್ತಾ ಇರೋದು ರಜತ್‌, ಇಲ್ಲಿ ಯಾರನ್ನು ಜತೆಯಲ್ಲಿ ಕರ್ಕೊಂಡು ಆಡ್ತಾ ಇಲ್ಲವೆಂದು ಮಂಜು ಹೇಳಿದ್ದಾರೆ.

ಇದರಿಂದ ಕುಗ್ಗಿಹೋದ ಧನರಾಜ್‌ ಅವರನ್ನು ಹನುಮಂತು ಅವರು ಸಮಾಧಾನಪಡಿಸಿದ್ದಾರೆ.

ಮಾರಿಹಬ್ಬ ಜಾತ್ರೆಯಲ್ಲಿ ಕುರಿ ಬಲಿ ಕೊಟ್ರು ಎಂದು ಭವ್ಯ ಅವರು ಧನರಾಜ್‌ ಅವರ ಬಗ್ಗೆ ಹೇಳಿದ್ದಾರೆ. ಉಳಿದ ಸ್ಪರ್ಧಿಗಳು ಮಂಜು, ಗೌತಮಿ ಅವರ ಪ್ಲ್ಯಾನ್‌ ನೋಡಿ ನಕ್ಕಿದ್ದಾರೆ.

ಇನ್ನೊಂದು ಟಾಸ್ಕ್‌ನಲ್ಲಿ ಒಬ್ಬೊಬ್ಬರು ಸದಸ್ಯರು ಪ್ರತ್ಯೇಕ ಪೆಟ್ಟಿಗೆಯಲ್ಲಿ ಮಲಗಬೇಕು. ಪೆಟ್ಟಿಗೆಯಲ್ಲಿ ಮಲಗಿದ ಬಳಿಕ ಉಳಿದ  ನೀರು ತುಂಬುತ್ತಿರುತ್ತದೆ. ಮತ್ತೊಬ್ಬ ಸ್ಪರ್ಧಿ ನೀರು ಖಾಲಿ ಮಾಡಬೇಕು. ಮಂಜು ಅವರು ಬದುಕ್ತೀನಿ ಸಾಯಲ್ಲ, ಗೆಲ್ತೀನಿ ಎಂದು ಸವಾಲು ಸೀಕ್ವರಿಸಿ ನೀರು ತುಂಬಿದ ಪೆಟ್ಟಿಗೆಯೊಳಗೆ ಹೋಗಿದ್ದಾರೆ. ಮಂಜು ಅವರ ಪೆಟ್ಟಿಗೆ ಬಹುತೇಕ ನೀರಿನಿಂದ ಫುಲ್‌ ಆಗುತ್ತದೆ. ಆದರೂ ಮಂಜು ಹೋರಾಟವನ್ನು ಮುಂದುವರೆಸಿದ್ದಾರೆ. ಇದೊಂದು ಟಾಸ್ಕ್‌ ನಲ್ಲಿ ನಿನ್ನ ಗೆಳೆಯನನ್ನು ನೇರವಾಗಿ ಸರ್ಪೋರ್ಟ್‌ ಮಾಡು ಎಂದು ಮಂಜು ಗೌತಮಿ ಬಳಿ ಹೇಳಿದ್ದಾರೆ.  ಮತ್ತೊಂದು ಪೆಟ್ಟಿಗೆಯಲ್ಲಿಮ ಮೋಕ್ಷಿತಾ ಮಲಗಿದ್ದು, ಭವ್ಯ ಅವರು ನೀರು ಖಾಲಿ ಮಾಡಿದ್ದಾರೆ.

ಉಳಿದ ಸ್ಪರ್ಧಿಗಳು ನೀರು ಖಾಲಿ ಮಾಡುತ್ತಲೇ ಸುಸ್ತಾಗಿರುವುದನ್ನು ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next