ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Big Boss Kannada-11) ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.
ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗುವ ನಾಲ್ವರ ಸ್ಪರ್ಧಿಗಳ ಹೆಸರು ಅಧಿಕೃತವಾಗಿದೆ. ಇಂದು ಸಂಜೆ (ಸೆ.29ರಂದು) ಉಳಿದ ಸ್ಪರ್ಧಿಗಳು ದೊಡ್ಮನೆ ಆಟಕ್ಕೆ ಪ್ರವೇಶ ಮಾಡಲಿದ್ದಾರೆ.
ಒಟ್ಟು 16 ಅಥವಾ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ. ಸ್ವರ್ಗ – ನರಕದ ಮನೆಗೆ ಈ ಸ್ಪರ್ಧಿಗಳು ಹೋಗಲಿದ್ದಾರೆ.
ನಾಲ್ವರು ಸ್ಪರ್ಧಿಗಳು ಯಾರು..
ಬಿಗ್ ಬಾಸ್ ಮನೆಗೆ ಹೋಗುವ ನಾಲ್ವರ ಹೆಸರನ್ನು ಈಗಾಗಲೇ ರಿವೀಲ್ ಮಾಡಲಾಗಿದೆ. ʼಸತ್ಯʼ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್ (Gautami Jadhav), ಎರಡನೇ ಸ್ಪರ್ಧಿಯಾಗಿ ವಾದ – ವಿವಾದದಿಂದಲೇ ಸುದ್ದಿಯಾಗುವ ಲಾಯರ್ ಜಗದೀಶ್ (Lawyer Jagadish) ಅವರು ಬಿಗ್ ಬಾಸ್ ಮನೆಯೊಳಗೆ ಹೋಗಲಿದ್ದಾರೆ. ಇನ್ನು ಮೂರನೇ ಸ್ಪರ್ಧಿಯಾಗಿ ಹಿಂದೂ ಫೈಯರ್ ಬ್ರ್ಯಾಂಡ್ ಖ್ಯಾತಿಯ ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaitra Kundapura) ಅವರು ಹೋಗುವುದು ಅಧಿಕೃತವಾಗಿದೆ. ಇದರ ಜತೆ ಉತ್ತರ ಕರ್ನಾಟಕ ಮೂಲದ ‘ಗೋಲ್ಡ್ ಸುರೇಶ್’ ಕೂಡ ದೊಡ್ಮನೆಗೆ ಹೋಗಲಿದ್ದಾರೆ.
ಉಳಿದ ಸ್ಪರ್ಧಿಗಳು ಇವರೇನಾ..?
ನಾಲ್ವರ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಿದ ಬಳಿಕ ಅವರನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸುವ ನಿರ್ಧಾರವನ್ನು ಪ್ರೇಕ್ಷಕರಿಗೆ ಬಿಡಲಾಗಿದೆ.
ಇನ್ನು ಉಳಿದವರು ಯಾರು ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಕೆಲ ಹೆಸರುಗಳು ಹರಿದಾಡುತ್ತಿದೆ. ಇದರಲ್ಲಿ ಕಿರುತೆರೆ ನಟ – ನಟಿ, ಯೂಟ್ಯೂಬ್ ಸ್ಟಾರ್ಸ್ ಹಾಗೂ ರೀಲ್ಸ್ ಖ್ಯಾತಿಯ ವ್ಯಕ್ತಿಗಳು ಇರಲಿದ್ದಾರೆ ಎನ್ನಲಾಗಿದೆ.
ಕಿರುತೆರೆ ನಟ ಶಿಶಿರ್ ಶಾಸ್ತ್ರಿ, ನಟಿ ಅನುಷಾ ರೈ, ಮಾನಸ ಸಂತು (ತುಕಾಲಿ ಸಂತು ಪತ್ನಿ), ನಟಿ ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಭವ್ಯಾ ಗೌಡ, ನಟಿ ಯಮುನಾ, ನಟ ಶಶಿರಾಜ್, ನಟ ರಂಜಿತ್ ಕುಮಾರ್, ಯೂಟ್ಯೂಬರ್ ಧನರಾಜ್, ಐಶ್ವರ್ಯ ಸಿಂಧೋಗಿ, ಹುಲಿ ಕಾರ್ತಿಕ್ ಕಾಣಿಸಿಕೊಳ್ಳುವುದು ಅಧಿಕೃತ ಎಂದು ಹೇಳಲಾಗುತ್ತಿದೆ.
ಗ್ರ್ಯಾಂಡ್ ಓಪನಿಂಗ್: ಇಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಸೀಸನ್ -11 ಅದ್ಧೂರಿಯಾಗಿ ಓಪನಿಂಗ್ ಆಗಲಿದೆ. ಕಿಚ್ಚ ಸುದೀಪ್ (Kiccha Sudeep) ‘ಮ್ಯಾಕ್ಸ್’ ಹಾಡಿನೊಂದಿಗೆ ವೇದಿಕೆಗೆ ಎಂಟ್ರಿ ಆಗಲಿದ್ದಾರೆ. ಕಲರ್ ಫುಲ್ ನೃತ್ಯ ಕಾರ್ಯಕ್ರಮಗಳ ಮೂಲಕ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಕಿಚ್ಚ ವೆಲ್ ಕಂ ಮಾಡಲಿದ್ದಾರೆ.