Advertisement

ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್‌ ಭದ್ರತೆ

05:44 PM Mar 19, 2024 | Team Udayavani |

ಬ್ಯಾಡಗಿ: ಸ್ಥಳೀಯ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ 2 ಲಕ್ಷಕ್ಕೂ ಅಧಿ ಕ ಮೆಣಸಿನಕಾಯಿ ಚೀಲ ಆವಕವಾಗಿದ್ದು, ಪೊಲೀಸ್‌ ಭದ್ರತೆ ನಡುವೆ ವ್ಯಾಪಾರ ವಹಿವಾಟು ನಡೆಯಿತು. ದರದಲ್ಲಿ ಸ್ಥಿರತೆ ಮುಂದುವರಿದಿದ್ದು, ದರ ಕುಸಿತಗೊಂಡಿದ್ದಾಗಿ ರೈತರಲ್ಲಿ ಮೂಡಿದ್ದ ಆತಂಕ ದೂರವಾಗಿದೆ.

Advertisement

ಮೆಣಸಿನಕಾಯಿ ಚೀಲದೊಂದಿಗೆ ಆಗಮಿಸಿದ್ದ ಕರ್ನಾಟಕ ಸೇರಿದಂತೆ ಆಂಧ್ರ ಹಾಗೂ ತೆಲಂಗಾಣದ ರೈತರು ಇಂದು ನಿರ್ಭಯವಾಗಿ ಮೆಣಸಿನಕಾಯಿ ವಹಿವಾಟು ಪೂರ್ಣಗೊಳಿಸಿದರು.

ಊಹಿಸಲಾರದ ಘಟನೆ: ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕಳೆದ ಮಾ. 11ರಂದು ಬೆಲೆ ಕುಸಿತಗೊಂಡಿದೆ ಆರೋಪಿಸಿ ಪುಡಾರಿ ರೈತರ ಗುಂಪೊಂದು ಎಪಿಎಂಸಿ ಕಾರ್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿತ್ತು. 2 ಖಾಸಗಿ, 5 ಸರ್ಕಾರಿ ಸೇರಿದಂತೆ ಒಟ್ಟು 7 ವಾಹನಗಳಿಗೆ ಬೆಂಕಿ ಹಚ್ಚಿದ್ದ ರೈತರು ಕೈಗೆ ಸಿಕ್ಕ ದಾಖಲೆಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು.ಯಾಗೂ ಊಹಿಸಲಾರದ ಕಹಿ ಘಟನೆ ನಡೆದಿತ್ತು.

ಪೊಲೀಸ್‌ ಪಥ ಸಂಚಲನ: ರಕ್ಷಣಾ ಇಲಾಖೆ ಪ್ಯಾರಾ ಮಿಲಿಟರಿ ಫೋರ್ಸ್‌ ಸೇರಿದಂತೆ ನೂರಾರು ಸಂಖ್ಯೆಯ ಪೋಲಿಸರು ಬೆಳ್ಳಂಬೆಳಗ್ಗೆ ಮಾರುಕಟ್ಟೆ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ರೈತರಿಂದ ನಡೆದ ಅಹಿತಕರ ಘಟನೆಯಿಂದ ಆತಂಕಗೊಂಡಿದ್ದ ಎಪಿಎಂಸಿ ಸಿಬ್ಬಂದಿ ಹಾಗೂ ಸ್ಥಳೀಯ ವರ್ತಕರಿಗೆ ಸೋಮವಾರ 2 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕವನ್ನು ಕಂಡು ಸಂತಸ ವ್ಯಕ್ತಪಡಿಸಿದರು.

2 ಲಕ್ಷ ಚೀಲ ಆವಕ: ಘಟನೆ ನಡೆದ ಬಳಿಕ ಮೊದಲ ಬಾರಿಗೆ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಗಿದೆ. ಮಾರುಕಟ್ಟೆಗೆ ಒಟ್ಟು 2,11,190 ಚೀಲಗಳಷ್ಟು ಆವಕವಾಗಿವೆ. ರೈತರು ನಿರ್ಭಯದಿಂದ ಯಾವುದೇ ತಕರಾರಿಲ್ಲದೇ ಮೆಣಸಿನಕಾಯಿ ಮಾರಾಟ ಮಾಡಿ ತಮ್ಮ ಊರುಗಳಿಗೆ ತೆರಳುತ್ತಿರುವ ದೃಶ್ಯಗಳು ಕಂಡು ಬಂದವು.

Advertisement

ಮುಂದುವರಿದ ಸ್ಥಿರತೆ: ಕಳೆದ ವಾರಕ್ಕೆ ಹೋಲಿಸಿದರೆ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದೇ ಸ್ಥಿರತೆ ಮುಂದುವರಿದಿದೆ. ಇದರಿಂದ ರೈತರು ನಿಟ್ಟುಸಿರು ಬಿಡುವಂತಾಯಿತಲ್ಲದೇ ನೂರಾರು ಊಹಾಪೋಹಗಳಿಗೆ ತೆರೆ ಎಳೆಯಲಾಯಿತು.

ಮಾರುಕಟ್ಟೆ ದರ: ಕಡ್ಡಿತಳಿ ಕನಿಷ್ಟ 2289 ಗರಿಷ್ಟ 36439 ಸರಾಸರಿ 29509, ಡಬ್ಬಿತಳಿ 2799 ಗರಿಷ್ಟ 40199 ಸರಾಸರಿ 34799, ಗುಂಟೂರು ಕನಿಷ್ಟ 1109 ಗರಿಷ್ಟ 17809 ಸರಾಸರಿ 12489 ರೂ.ಗೆ ಮಾರಾಟವಾಗಿರುವುದಾಗಿ ಮಾರು ಕಟ್ಟೆ
ಮೂಲಗಳು ದೃಡಪಡಿಸಿವೆ..

ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಕಚೇರಿಗೆ ಬೆಂಕಿ ಹಚ್ಚುವ ಮೂಲಕ ಕಳಂಕ ತಂದಿದ್ದ ರೈತರೇ, 2 ಲಕ್ಷಕ್ಕೂ
ಅಧಿಕ ಮೆಣಸಿನಕಾಯಿ ಚೀಲಗಳಷ್ಟು ಮಾರಾಟಕ್ಕೆ ತರುವ ಮೂಲಕ ಮಾರುಕಟ್ಟೆ ಗೌರವ ಹೆಚ್ಚಿಸಿದ್ದಾರೆ. ಆನ್‌ ಲೈನ್‌ ಟೆಂಡರ್‌, ಎಲೆಕ್ಟ್ರಾನಿಕ ತೂಕ ಗುಣಮಟ್ಟದ ಬೆಳೆಗೆ ಸ್ಪರ್ಧಾತ್ಮಕ ದರ, ಇಲ್ಲಿ ನಡೆಯುತ್ತಿರುವ ಪಾರದರ್ಶಕ ವ್ಯಾಪಾರಕ್ಕೆ ರೈತರಿಂದ ಮನ್ನಣೆ ಸಿಕ್ಕಿದ್ದು ಅಭಿನಂದಿಸುತ್ತೇನೆ.
ಸುರೇಶಗೌಡ್ರ ಪಾಟೀಲ,
ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next