Advertisement
ಈ ಕೇಂದ್ರದಲ್ಲಿ ಉಳಿದೆಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನರ್ಸ್‌ಗಳ ಕೊರತೆ ಕಂಡು ಬಂದಿದೆ. ಇದರಿಂದ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ.
ಮಳೆಗಾಲದಲ್ಲಿ ಉಂಟಾಗುವ ಸಾಂಕ್ರಾ ಮಿಕ ಖಾಯಿಲೆಗಳಾದ ಮಲೇರಿಯಾ, ಅತಿಸಾರ ಮತ್ತಿತರ ರೋಗ ಗಳು ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದೆ ಲಾರ್ವಾ ಸರ್ವೆ (ಸೊಳ್ಳೆಯ ಮರಿ) ಉತ್ಪಾದನೆಯಾಗದಂತೆ ಸೂಕ್ತ ಮುಂಜಾಗ್ರತೆ ವಹಿಸಲಾಗಿದೆ. ಮಳೆ ಗಾಲದಲ್ಲಿ ಹರಡಬಹುದಾದ ಕಾಯಿಲೆಗಳಿಗೆ ಆಸ್ಪತ್ರೆಯಲ್ಲಿ ಸಾಕಷ್ಟು ಔಷಧಿಗಳ ದಾಸ್ತಾನು ಇದೆ. ವೈದ್ಯರು ಸ್ಥಳೀಯರಾಗಿರುವುದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಿತ್ತಿದ್ದು ತಿಂಗಳಿಗೆ 1,700 ರಿಂದ 1,800 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಷಯ ರೋಗ, ಐದು ಮಾರಕ ರೋಗಗಳಿಗೆ ಪೆಂಟವಲೆಂಟ್ ಲಸಿಕೆ, ಪೋಲಿಯೋ ಲಸಿಕೆ, ದಡಾರ, ರುಬೆಲ್ಲಾ ರೋಗಗಳ ವಿರುದ್ಧ ಮತ್ತಿತರ ಲಸಿಕೆಗಳನ್ನು ಕ್ರಮ ಪ್ರಕಾರ ನೀಡಲಾಗುತ್ತಿದೆ. ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸ ಕಟ್ಟಡದ ಅವಶ್ಯಕತೆ ಕಂಡು ಬಂದಿದ್ದು ಈಗಾಗಲೇ ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಜನರಿಂದ ದೂರವಾಗುತ್ತಿರುವ ಬಸೂÅರು ಸರಕಾರಿ ಆಸ್ಪತ್ರೆ ಎನ್ನುವ ವರದಿಯನ್ನು ಪತ್ರಿಕೆ ಮಾಡಿತ್ತು ಎನ್ನುವುದು ಉಲ್ಲೇಖನೀಯ.
Related Articles
ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಒಂದು ಉಪ ಕೇಂದ್ರ ಹಟ್ಟಿಕುದ್ರುವಿನಲ್ಲಿದ್ದು ಅಲ್ಲಿ ಸ್ಥಳಾವಕಾಶದ ಕೊರತೆ ಕಂಡು ಬಂದಾಗ ಸ್ಥಳೀಯ ಶಾಲೆಯವರು ಸ್ಥಳದ ನೆರವನ್ನು ಕೊಟ್ಟಿದ್ದಾರೆ.ಇನ್ನು ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡದ ಆವಶ್ಯಕತೆಯಿದ್ದು ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಗಿದೆ.
– ಡಾ| ವಿದ್ಯಾ, ವೈದ್ಯಾಧಿಕಾರಿಗಳು
Advertisement
ಉಪಕೇಂದ್ರಗಳುಒಳರೋಗಿಯಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ದಾಖಲಾಗುವ ರೋಗಿಗಳಿಗೆ ಒಟ್ಟು ನಾಲ್ಕು ಹಾಸಿಗೆಗಳಿವೆ. ಈ ಆಸ್ಪತ್ರೆಗೆ ಆನಗಳ್ಳಿ, ಕೋಣಿ, ಕಂದಾವರ, ಹಟ್ಟಿಕುದ್ರುವಿನಲ್ಲಿ ಉಪಕೇಂದ್ರಗಳಿವೆ. ಅಲ್ಲಿಗೆ ಪಾಳಿಯ ಪ್ರಕಾರ ಬಸ್ರೂರು ಪ್ರಧಾನ ಕೇಂದ್ರದಿಂದ ವೈದ್ಯರು ಸಕಾಲದಲ್ಲಿ ತೆರಳಿ ರೋಗಿಗಳಿಗೆ ಶುಶ್ರೂಷೆ ನೀಡುತ್ತಿರುವುದು ಗಮನಾರ್ಹ. ಆಸ್ಪತ್ರೆ ಸಂಪರ್ಕ: 8277505931 ಉತ್ತಮ ಕಾರ್ಯ ನಿರ್ವಹಣೆ
ಪ್ರಸ್ತುತ ಈ ಆರೋಗ್ಯ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಬಸೂÅರು ಆಸ್ಪತ್ರೆ ಮತ್ತೆ ಹತ್ತಿರವಾಗುತ್ತಿರುವುದು ಗಮನಾರ್ಹ.
– ರಾಮ ಪೂಜಾರಿ,ಬಸ್ರೂರು ನಿವಾಸಿ – ದಯಾನಂದ ಬಳ್ಕೂರು