Advertisement

ಜನರಿಂದ ದೂರವಾಗುತ್ತಿರುವ ಬಸ್ರೂರು ಸರಕಾರಿ ಆಸ್ಪತ್ರೆ

03:27 PM Apr 26, 2017 | Team Udayavani |

ಬಸ್ರೂರು: ಹಳೆಯದಾದ ಒಂದು ಸರಕಾರಿ ಆಸ್ಪತ್ರೆ ಬಸ್ರೂರಿನಲ್ಲಿದೆ. ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ವೈದ್ಯರ ಕಾಳಜಿಯಿಂದ ಈ ಆಸ್ಪತ್ರೆಗೆ ಕಳೆ ಬಂದಿತ್ತು. ಆಸ್ಪತ್ರೆಯ ಮುಂದೆ ಕುಠೀರಗಳನ್ನು ನಿರ್ಮಿಸಲಾಗಿತ್ತು. ಅಲ್ಲಿ ಬೆಂಚುಗಳನ್ನು ಹಾಕಲಾಗಿತ್ತು. ಆ ವೈದ್ಯರು ಉನ್ನತ ಶಿಕ್ಷಣದ ಮೇಲೆ ವ್ಯಾಸಂಗಕ್ಕಾಗಿ ತೆರಳಿದ ಮೇಲೆ ಈ ಆಸ್ಪತ್ರೆಗೆ ಖಾಯಿಲೆ ಬಂದಿದೆ.

Advertisement

ಪ್ರಸ್ತುತ ಆಸ್ಪತ್ರೆಗೆ ಬರುವ ರೋಗಿಗಳು ಕಡಿಮೆಯಾಗಿದ್ದಾರೆ. ಆಗಾಗ ನಡೆಯುವ ಸಭೆಗಾಗಿ ಶಾಲೆಗಳಿಂದ ಶಿಕ್ಷಕರು ಬರುತ್ತಾರೆ ಅಷ್ಟೆ.  ಮತ್ತೆ ಕೆಲವೊಮ್ಮೆ ಮಹಿಳೆಯರು ಮಕ್ಕಳ ಚುಚ್ಚುಮದ್ದಿಗಾಗಿಯೂ ಬರುತ್ತಾರೆ; ಬಿಟ್ಟರೆ ಈ ಆಸ್ಪತ್ರೆ ಈಗ ಯಾರಿಗೂ ಬೇಡವಾಗಿದೆ! 

ಸ್ವಲ್ಪ ದಿನಗಳ ಹಿಂದೆ ಈ ಆಸ್ಪತ್ರೆಗೆ ರೋಗಿಯೊಬ್ಬರು ಬಂದು ವೈದ್ಯರೆಲ್ಲಿ ಎಂದು ಕೇಳಿದಾಗ ಈಗ ವೈದ್ಯರು ಇಲ್ಲ. ಆಮೇಲೆ ಬನ್ನಿ ಎಂದು ಹೇಳಿದ್ದಾರೆ. ಆದರೆ ವೈದ್ಯರು ಆಗ ಒಳಗೇ ಇದ್ದರು. ವೈದ್ಯರಿರುವ ವಿಷಯವನ್ನು ಏತಕ್ಕಾಗಿ ಮರೆಮಾಚಿದರೆನ್ನುವುದು ಆಶ್ಚರ್ಯಕರ.

ಸ್ವಲ್ಪ ಅಸೌಖ್ಯವಾದರೂ  ಈ ಭಾಗದ ಮಂದಿ ಕುಂದಾಪುರದ  ಖಾಸಗಿ ಆಸ್ಪತ್ರೆಗೆ  ಧಾವಿಸುತ್ತಾರೆ! ಹಾಗಿದ್ದ ಮೇಲೆ ಈ ಆಸ್ಪತ್ರೆ ಯಾರಿಗಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಸತ್ಯ ಜನರಿಗೆ ತಿಳಿಯಬೇಕಾಗಿದೆ.

ಆಸ್ಪತ್ರೆಯಲ್ಲಿ ರಸಪ್ರಶ್ನೆ ನಡೆದೇ ಇಲ್ಲ!
ಈ ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಾಲಾ ವಿದಾರ್ಥಿಗಳಿಗೆ ಒಂದು ರಸಪ್ರಶ್ನೆ ಸ್ಪರ್ಧೆಯನ್ನು  ಏರ್ಪಡಿಸಲಾಗಿತ್ತು. ಸ್ಪರ್ದೆಯ ಅನಂತರದ ದಿನ ಓರ್ವ ಶಿಕ್ಷಕರು ಆಸ್ಪತ್ರೆಗೆ ಬಂದು ನಿನ್ನೆ ನಡೆದ ರಸಪ್ರಶ್ನೆ ಸ್ಪರ್ಧೆ ಫಲಿತಾಂಶ ಏನಾಯಿತು ಎಂದು ಕೇಳಿದಾಗ ಅಲ್ಲಿ ಉಪಸ್ಥಿತರಿದ್ದ ಶೂಶ್ರೂಷಕಿಯೊಬ್ಬರು ನಿನ್ನೆ ಆಸ್ಪತ್ರೆಯಲ್ಲಿ ಯಾವುದೇ ರಸಪ್ರಶ್ನೆ ಕಾರ್ಯಕ್ರಮ ನಡೆದೇ ಇಲ್ಲ ಎನ್ನುತ್ತಾರೆ ಎನ್ನುವ ಸತ್ಯ ಏನನ್ನು ಬಿಂಬಿಸುತ್ತದೆ  ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗೆ ಕಾಯಕಲ್ಪ ಯಾವಾಗ? ಯಾರಿಂದ ಎನ್ನುವುದು ಪ್ರಶ್ನೆಯಾಗಿಯೇ  ಉಳಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next