Advertisement
ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುಬಸವ ಸತ್ಸಂಗ ಸಮಿತಿ ಸಹಯೋಗದಲ್ಲಿ ಚೆನ್ನಬಸವಣ್ಣನವರ ಜಯಂತಿ ಹಾಗೂ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಎಂದರೆ ಪ್ರಜಾಪ್ರಭುತ್ವದ ಧರ್ಮ ಗ್ರಂಥ, ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದೆ. ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ.
Related Articles
Advertisement
ಹಾರೂಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಆಯ್.ಆರ್.ಮಠಪತಿ ಮಾತನಾಡಿ, ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ. ಜತೆಗೆ ಸಕಲ ಜೀವಾತ್ಮರೆಲ್ಲರಿಗೂ ಲೇಸು ಬಯಸಿದ ಜಗತ್ತಿನ ಮೊಟ್ಟ ಮೊದಲ ಸಮತವಾದಿ ಬಸವಣ್ಣನವರು ಎಂದರು.
ಶಿರೂರದ ವಿಜಯ ಮಹಾಂತೇಶ್ವರ ನಿಸರ್ಗಧಾಮದ ಡಾ| ಬಸವಲಿಂಗ ಸ್ವಾಮೀಜಿ ಮಾತನಾಡಿ ,ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಸಪ್ತಶೀಲದ ವಚನವನ್ನು ಜೀವನದಲ್ಲಿ ಅಳವಡಿಸಕೊಂಡಲ್ಲಿ ಅಪರಾಧಗಳು ಈ ಜಗತ್ತಿನಲ್ಲಿ ನಡೆಯಲು ಸಾಧ್ಯವಿಲ್ಲ. ಈ ವಚನದ ಆಶಯವನ್ನೇ ನಮ್ಮ ಸಂವಿಧಾನ ತಿಳಿಸುತ್ತದೆ ಎಂದರು.
ಬಸವೇಶ್ವರ ವೃತ್ತದಲ್ಲಿ ವಚನ ಗ್ರಂಥಗಳ ಮೆರವಣಿಗೆಗೆ ಅಕ್ಕ ಅನ್ನಪೂರ್ಣ ತಾಯಿಯವರು ಚಾಲನೆ ನೀಡಿದರು. ಸದಲಗಾ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ವೀರೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಚನ ವಿಜಯೋತ್ಸವದಲ್ಲಿ ಸಾವಿರಾರು ಶರಣಭಕ್ತರು ಮೆರವಣಿಗೆಯಲ್ಲಿ ಬಸವಣ್ಣನವರ ವಚನ ಗ್ರಂಥವನ್ನು ತಲೆಯ ಮೇಲೆ ಹೊತ್ತು ಸಾಗಿದರು. ಹೂವಿನಿಂದ ಅಲಂಕರಿಸಿದ ರಥದಲ್ಲಿ ಬಸಣ್ಣನವರ ವಚನ ಗ್ರಂಥ ಮೆರವಣಿಗೆಮಾಡಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಎಪಿಎಂಸಿವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ವಚನ ವಿಜಯೋತ್ಸವದಲ್ಲಿ ಹಲವು ಕಲಾ ತಂಡಗಳು ನೃತ್ಯ ಪ್ರದರ್ಶನ ಮಾಡುವ ಮೂಲಕ ಜನರ ಗಮನ ಸಳೆಯಿತು. ಲೋಕಣ್ಣ ಉದಪುಡಿ, ಎಸ್.ಎನ್.ಹಿರೇಮಠ, ಎಂ.ಎಂ.ವಿರಕ್ತಮಠ, ವ್ಹಿ.ಎಂ.ತೆಗ್ಗಿ, ಕೆ.ಆರ್ .ಬೋಳಿಶೆಟ್ಟಿ, ಶಿವಾನಂದ ಉದಪುಡಿ, ರವಿ ಬೋಳಿಶೆಟ್ಟಿ, ಮಲ್ಲಪ್ಪ ಅಂಗಡಿ, ಷಣ್ಮೂಕಪ್ಪ ಕೋಲ್ಹಾರ, ಪ್ರಕಾಶ ಚುಳಕಿ, ಸದಾಶಿವ ಉದಪುಡಿ, ಅಣ್ಣಪ್ಪ ಪಡಸಲಗಿ, ಅಪ್ಪಣಗೌಡ ಕೊಳಚಿ, ಹಣಮಂತ ಬುದ್ನಿ, ಮುತ್ತಪ್ಪ ಗಡದವರ, ಬಸವರಾಜ ಉದಪುಡಿ, ನಿಂಗಪ್ಪ ದಾದನಟ್ಟಿ, ಶ್ರೀಕಾಂತ ನರಗಟ್ಟಿ, ಲಕ್ಷ್ಮಣ ಮುದ್ದಾಪುರ, ಲೋಕಣ್ಣ ಹುಲಸದ, ರವಿ ಉಪ್ಪಾರ ಸಂಗಪ್ಪ ಪರಣ್ಣವರ, ಭೀಮಶೆಪ್ಪ ತೆಗ್ಗಿ, ಲೋಕಣ್ಣ ಸಕ್ರಿ, ಲೋಕಣ್ಣ ಮುದ್ದಾಪುರ ಇದ್ದರು.