Advertisement

ಬಸದಿ, ದೇವಸ್ಥಾನಗಳಲ್ಲಿ ಕಳ್ಳತನ :  ಶ್ರೀ ಚಾರುಕೀರ್ತಿ ಸ್ವಾಮೀಜಿ ಭೇಟಿ

02:10 PM Apr 13, 2017 | Team Udayavani |

ಬೆಳ್ತಂಗಡಿ: ನಮ್ಮ ಧಾರ್ಮಿಕ  ಶ್ರದ್ಧಾ ಕೇಂದ್ರಗಳು ಚೋರ ಭಯದಿಂದ ಸದಾ ಆತಂಕಿತವಾಗಿದೆ. ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿದರೂ ಅದರ ನಿರ್ವಹಣೆಯಲ್ಲಿ ನಾವು ತೋರಿಸುವ ಅಸಡ್ಡೆಯಿಂದ ವೈಫಲ್ಯವಾಗಿವೆ. ಈ ನಿಟ್ಟಿನಲ್ಲಿ ನಾವು ಇನ್ನಷ್ಟು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ. 

Advertisement

ಕ್ಷೇತ್ರಗಳನ್ನು ಭಕ್ತಾದಿ ಗಳು ಸರದಿಯಲ್ಲಿ ಕಾಯುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಕ್ಷೇತ್ರಗಳ ಅಮೂಲ್ಯ ವಸ್ತು ಆಭರಣಾದಿಗಳನ್ನು ಸೂಕ್ತ ಭದ್ರತೆಯಲ್ಲಿ ಇಡುವ ವ್ಯವಸ್ಥೆಯಾಗಬೇಕು. ಹುಂಡಿಗಳನ್ನು ಆಗಾಗ ತೆಗೆದು ಬ್ಯಾಂಕಿಗೆ ಜಮಾ ಮಾಡಬೇಕು ಹಾಗೂ ಬಾಗಿಲುಗಳ ಭದ್ರತೆ, ಅಳವಡಿಸಿದ ಸಿಸಿ ಕೆಮರಾಗಳ ಸುಸ್ಥಿತಿ ಬಗ್ಗೆ ಗಮನ ಹರಿಸುತ್ತಿರಬೇಕು ಎಂದು ಮೂಡಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಇತ್ತೀಚೆಗೆ ಕಳ್ಳತನ ನಡೆದ  ವೇಣೂರು ಕಲ್ಲುಬಸದಿ ಶ್ರೀ ಶಾಂತಿನಾಥ ಸ್ವಾಮಿ ಚೆ„ತ್ಯಾಲಯ ಮತ್ತು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬಸದಿಯಲ್ಲಿ ನಡೆದ ಕಳ್ಳತನಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ಸುರûಾ ಕ್ರಮಗಳ ಬಗ್ಗೆ ಮಾರ್ಗದರ್ಶನ  ನೀಡಿದರು. ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚುವಂತೆ ಅವರು ಪೊಲೀಸ್‌ ಇಲಾಖಾ ಮೇಲಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ವೇಣೂರು ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ. ವಿಜಯ ಕುಮಾರ್‌, ವೀರು ಶೆಟ್ಟಿ ಧರ್ಮಸ್ಥಳ, ಸುಭಾಷ್‌ ಧರ್ಮಸ್ಥಳ, ದಿನೇಶ್‌ ಆನಡ್ಕ, ಪುಷ್ಪದಂತ ಧರ್ಮಸ್ಥಳ, ಸರಕಾರಿ ನೌಕರರ ಸಂಘದ  ರಾಜ್ಯ ಪರಿಷತ್‌ ಸದಸ್ಯ ಧರಣೇಂದ್ರ ಕೆ., ವೃಷಭ ಆರಿಗ, ಧನಕೀರ್ತಿ ಆರಿಗ ಧರ್ಮಸ್ಥಳ, ರತ್ನವರ್ಮ ಇಂದ್ರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಜಯಕೀರ್ತಿ ಜೈನ್‌, ತೀರ್ಥಕ್ಷೇತ್ರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next