Advertisement

ಅಕ್ರಮ ಮನೆ ನಿರ್ಮಾಣಕ್ಕೆ ತಡೆ

07:15 AM May 31, 2020 | Lakshmi GovindaRaj |

ಟೇಕಲ್‌: ಹೋಬಳಿಯ ಕೆ.ಜಿ.ಹಳ್ಳಿಯ ಸರ್ವೆ ನಂ. 73ರ ಗೋಮಾಳ ಬಂಡೆ ಮೇಲೆ ಈ ಹಿಂದೆ ಅಕ್ರಮ ವಾಗಿ ಮನೆ ನಿರ್ಮಿಸುತ್ತಿದ್ದವರಿಗೆ ಸ್ಥಗಿತಗೊಳಿಸಿ ಎಂದು ಎಸಿ ಸೋಮಶೇಖರ್‌ ಆದೇಶಿಸಿದ್ದರೂ ಲಾಕ್‌ಡೌನ್‌ ದುರ್ಬಳಕೆ  ಮಾಡಿಕೊಂಡ ಕೆಲವರು ಪ್ರಭಾವಿಗಳ ಕೈವಾಡದೊಂದಿಗೆ ಮನೆ ಕಟ್ಟುತ್ತಿದ್ದರು.

Advertisement

ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ತಹಶೀಲ್ದಾರ್‌ ಎಂ.ಮಂಜುನಾಥ್‌, ದಿಢೀರ್‌ ಭೇಟಿ ನೀಡಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳು ತ್ತಿದ್ದನ್ನು  ಸ್ಥಗಿತಗೊಳಿಸಿದರು. ಈ ವೇಳೆ ತಹಶೀಲ್ದಾರ್‌ ಮಂಜುನಾಥ್‌ ಮಾತ ನಾಡಿ, ಸರ್ವೆ ನಂ.73ರ ಗೋಮಾಳದಲ್ಲಿ ಸ್ಥಳೀಯರ ಪ್ರಭಾವದಿಂದ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳುತ್ತಿ ರುವುದು ಗಮನಕ್ಕೆ ಬಂದಿದ್ದು, ಇದನ್ನು ಭೂಕಬಳಿಕೆ ವಿಶೇಷ ನ್ಯಾಯಾಲಯಕ್ಕೆ  ದಾವೆ ಹೂಡಲಾಗುತ್ತದೆ.

ಈ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಪಂಚಾ ಯ್ತಿಯಿಂದ ಏನಾದರೂ ಅಕ್ರಮ ಖಾತೆಗಳು ನಡೆದಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು. ಟೇಕಲ್‌ ನಾಡಕಚೇರಿ  ಉಪತಹಶೀಲ್ದಾರ್‌ ಜಗನ್ನಾಥ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರಿ ಜಾಗದಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಅತಿಕ್ರಮ ಪ್ರವೇಶ ಮಾಡಿದರೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ.

ಮನೆ ಇಲ್ಲದವರು ಪಂಚಾಯ್ತಿಯಲ್ಲಿ ಅರ್ಜಿ ನೀಡಿದರೆ ಅಂತಹವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮಾಹಿತಿ ನೀಡಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿ ದರು. ಈ ವೇಳೆ ಉಪತಹಶೀಲ್ದಾರ್‌ ಜಗನ್ನಾಥರೆಡ್ಡಿ, ಕಂದಾಯ ಅಧಿಕಾರಿ ಮುನಿಸ್ವಾಮಿಶೆಟ್ಟಿ, ಗ್ರಾಮಲೆಕ್ಕಾಧಿ ಕಾರಿ ಸುಧಾಮಣಿ, ಗ್ರಾಪಂ ಸದಸ್ಯ ಮುರುಗೇಶ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next