Advertisement

ಬಂಟ್ವಾಳ: ಮೆಚ್ಚುಗೆ ಗಳಿಸಿದ ಸಿರಿಧಾನ್ಯ ಆಹಾರ ಮೇಳ 

03:34 PM Oct 29, 2018 | |

ಬಂಟ್ವಾಳ: ಬಿ.ಸಿ. ರೋಡ್‌ ಸ್ವರ್ಶ ಕಲಾ ಮಂದಿರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಸಿರಿಧಾನ್ಯಗಳ ತಿಂಡಿ-ತಿನಿಸು ವೈವಿಧ್ಯಗಳ ಪ್ರದರ್ಶನ-ಮಾರಾಟ ಅ. 28ರಂದು ಸಂಜೆ ಸಮಾಪನಗೊಳ್ಳುವ ಮೂಲಕ ವೈವಿಧ್ಯ ಆಹಾರ ಮೇಳದಂತೆ ಸಂಪನ್ನಗೊಂಡಿತು. ಸ್ಥಳದಲ್ಲಿಯೇ ಸಿರಿಧಾನ್ಯಗಳಿಂದ ತಯಾರಿಸಿದ ದೋಸೆ, ಪಲಾವ್‌, ಕೇಸರಿಬಾತ್‌, ಪಾಯಸ, ಸಜ್ಜೆಹಾಲು, ಹಾಟ್‌ಚಿಲ್ಲಿ ಜ್ಯೂಸ್‌, ವೆಜ್‌ ಬಿರಿಯಾನಿ, ಮೊಸರನ್ನ, ಮಲ್ನಾಡ್‌ ಕಷಾಯ, ಬರ್ಪಿ, ಇಡ್ಲಿ, ಕಿಚಡಿ, ಪೊಂಗಲ್‌, ರಸಂ, ನುಚ್ಚು ಸಹಿತ ಇತರ ಆಹಾರ ಗಳು ದಿನನಿತ್ಯದ ಆಹಾರದಂತೆ ಸ್ವಾದ ನೀಡಿದ್ದವು. ನುರಿತ ಪಾಕ ಶಾಸ್ತ್ರಜ್ಞರು ಬಿಸಿಬಿಸಿ ದೋಸೆಯನ್ನು ಸ್ಥಳದಲ್ಲಿಯೇ ಕಾಯಿಸಿ ನೀಡುತ್ತಿದ್ದರು.

Advertisement

ಜನಸಾಮಾನ್ಯರು ಮನೆಯಲ್ಲಿ ಮಾಡುವ ಆಹಾರದಂತೆ ರುಚಿ-ಪರಿಮಳವನ್ನು ಹೊಂದಿದ್ದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಅನೇಕ ಮಂದಿ ಸ್ಥಳದಲ್ಲಿಯೇ ತಿಂದು ಮನೆಗೂ ಕಟ್ಟಿಕೊಂಡು ಹೋಗುವ ಮೂಲಕ ಹೊಸ ರುಚಿಯ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸಿಬಂದಿಯ ಸಕಾಲಿಕ ಮಾರ್ಗದರ್ಶನ, ಸಹಕಾರ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಯತ್ನ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next