ಬಂಟ್ವಾಳ: ಚಲಿಸುತ್ತಿರುವ ತ್ರಿಚಕ್ರ ಸ್ಕೂಟರ್ ಮೇಲೆ ವಿದ್ಯುತ್ ಕಂಬ ಹಾಗೂ ಮರದ ಗೆಲ್ಲು ಬಿದ್ದ ಪರಿಣಾಮ ಸವಾರನಿಗೆ ಗಾಯವಾದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಸ್.ವಿ.ಎಸ್. ಕಾಲೇಜು ಸಮೀಪ ಜೂನ್ 29 ರಂದು ಬುಧವಾರ ಸಂಜೆ ವೇಳೆ ನಡೆದಿದೆ.
ಘಟನೆಯಲ್ಲಿ ವಿಕಲಾಂಗ ಗೋಳಿಪಡ್ಪು ನಿವಾಸಿ ಇಸ್ಮಾಯಿಲ್ ಅವರಿಗೆ ಗಾಯವಾಗಿದೆ.
ಎಸ್.ವಿ.ಎಸ್.ಕಾಲೇಜು ಸಮೀಪ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಈ ಘಟನೆ ಸಂಭವಿಸಿದೆ.
ನಿನ್ನೆಯಿಂದ ಸುರಿಯುವ ಗಾಳಿ ಮಳೆಗೆ ಮರದ ಗೆಲ್ಲು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮವಾಗಿ ಮರದ ಗೆಲ್ಲು ಹಾಗೂ ವಿದ್ಯುತ್ ಕಂಬ ಎರಡು ಒಟ್ಟಿಗೆ ರಸ್ತೆಗೆ ಉರುಳಿ ಬಿದ್ದಿದೆ. ಇದೇ ಸಂದರ್ಭದಲ್ಲಿ ಸಂಚಾರ ಮಾಡುತ್ತಿದ್ದ ಇಸ್ಮಾಯಿಲ್ ಅವರ ವಾಹನದ ಮೇಲೆ ಬಿದ್ದು, ವಾಹನ ಜಖಂಗೊಂಡರೆ ಇಸ್ಮಾಯಿಲ್ ಗೆ ಗಾಯವಾಗಿದೆ.
ಗಾಯಗೊಂಡ ಇಸ್ಮಾಯಿಲ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ದಾಖಲಾಗಿದೆ.