Advertisement

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

02:00 PM Dec 04, 2024 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಡಿ. 2ರ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ಮಂಗಳವಾರ ಮಧ್ಯಾಹ್ನದವರೆಗೂ ಮುಂದುವರಿದು ಮಧ್ಯಾಹ್ನದ ಬಳಿಕ ಕೊಂಚ ಬಿಡುವು ಪಡೆದುಕೊಂಡಿತ್ತು. ಅಕಾಲಿಕ ಮಳೆಯಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಹೆದ್ದಾರಿ, ರಸ್ತೆಗಳಲ್ಲಿ ನೀರು ನಿಂತು ತೊಂದರೆ ಅನುಭವಿಸಬೇಕಾಯಿತು.

Advertisement

ರಾ.ಹೆ.75ರ ತುಂಬೆ ತಿರುವಿನಲ್ಲಿ ಮಳೆಗಾಲವಿಡೀ ನಿಂತಿದ್ದ ನೀರಿನ ಸ್ಥಿತಿ ಮತ್ತೆ ಪುನರಾವರ್ತನೆಯಾಗಿದ್ದು, ಮಂಗಳವಾರ ಸಂಜೆಯವರೆಗೂ ಹೆದ್ದಾರಿಯಲ್ಲಿ ನೀರು ನಿಂತಿರುವುದು ಕಂಡುಬಂತು. ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿಯಿಂದ ಬಿ.ಸಿ.ರೋಡು ಸರ್ಕಲ್‌ ಬಳಿ ಹೆದ್ದಾರಿ ಅಗೆದು ಹಾಕಿರುವ ಪರಿಣಾಮ ಕೆರೆಯಂತೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಬಳಿಕ ಜೆಸಿಬಿ ಯಂತ್ರದ ಮೂಲಕ ಮಣ್ಣನ್ನು ಬಿಡಿಸಿ ಕೊಟ್ಟು ನೀರು ಹರಿಯಲು ವ್ಯವಸ್ಥೆ ಮಾಡಲಾಯಿತು.

ಬಂಟ್ವಾಳ ತಾಲೂಕಿನಲ್ಲಿ ಮಳೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ. ತಾಲೂಕು ಕಂಟ್ರೋಲ್‌ ರೂಂ. ನಂಬರ್‌ 08255-232500 ಅಥವಾ 7337669102ಗೆ ಕರೆ ಮಾಡುವಂತೆ ಬಂಟ್ವಾಳ ತಹಶೀಲ್ದಾರ್‌ ತಿಳಿಸಿದ್ದಾರೆ.

ಅರಂತೋಡು: ಗಾಳಿ ಮಳೆಗೆ ಪೆರಾಜೆಯ ಜಂಕ್ಷನ್‌ ನಲ್ಲಿ ಇದ್ದ ಆಟೋ ನಿಲ್ದಾಣಕ್ಕೆ ಹಾನಿಯಾಗಿದೆ. ಇದರಿಂದ ಆಟೋ ನಿಲ್ದಾಣದಲ್ಲಿ ನಿಲ್ಲಿಸಬೇಕಾದ ರಿಕ್ಷಾಗಳನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡುವಂತಾಗಿದೆ. ಕಳೆದ ವರ್ಷ ಪಂಚಾಯತ್‌ ವತಿಯಿಂದ ಸುಮಾರು 80 ಸಾವಿರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನಿಲ್ದಾಣ ಗಾಳಿ ಮಳೆಯಿಂದಾಗಿ ಒಂದೇ ವರ್ಷಕ್ಕೆ ಮುರಿದು ಹೋಗುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next