Advertisement

Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ

04:53 PM Nov 30, 2024 | Team Udayavani |

ಬಂಟ್ವಾಳ: ಪಾಣೆಮಂಗಳೂರಿನ ಗೂಡಿನಬಳಿಯಲ್ಲಿ ವ್ಯಕ್ತಿಯೋರ್ವ ತನ್ನ ನಾಲ್ಕನೇ ಪತ್ನಿಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಿಂದ ಹೊರ ಹಾಕಿದ ಘಟನೆ ನ. 27ರಂದು ನಡೆದಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗೂಡಿನಬಳಿ ನಿವಾಸಿ ಮಹಮ್ಮದ್ ರಫೀಕ್ ಪ್ರಕರಣದ ಆರೋಪಿಯಾಗಿದ್ದು, ಆತನ ವಿರುದ್ಧ ನಾಲ್ಕನೇ ಪತ್ನಿ ದೂರು ನೀಡಿದ್ದಾರೆ. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಗು ಹಾಗೂ ತನಗೆ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾನೆ.

ಜತೆಗೆ ಚಿನ್ನಾಭರಣಗಳನ್ನೂ ದೋಚಿದ್ದು, ಆತನಿಗೆ ಈಗಾಗಲೇ ತನ್ನನ್ನು ಸೇರಿ ನಾಲ್ಕು ಮದುವೆಯಾಗಿದ್ದು, ೫ನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: Scissor: ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟ ವೈದ್ಯ, ವಿಚಾರ ಗೊತ್ತಾಗಿದ್ದು 2 ವರ್ಷದ ಬಳಿಕ

Advertisement

Udayavani is now on Telegram. Click here to join our channel and stay updated with the latest news.

Next